For Quick Alerts
  ALLOW NOTIFICATIONS  
  For Daily Alerts

  Happy Birthday Sonu Sood; ರಿಯಲ್ ಹೀರೋ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ

  |

  ಬಹುಭಾಷಾ ನಟ, ರಿಯಲ್ ಹೀರೋ ಸೋನು ಸೂದ್ ಗೆ ಇಂದು (ಜುಲೈ 30) ಹುಟ್ಟುಹಬ್ಬದ ಸಂಭ್ರಮ. 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಸೋನು ಸೂದ್ ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸೋನ್ ಸೂದ್ ಗೆ ವಿಶ್ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮ ಪಡುತ್ತಿದ್ದಾರೆ.

  ರೀಲ್ ನಲ್ಲಿ ವಿಲನ್ ಆಗಿ ಅಬ್ಬರಿಸುತ್ತಿದ್ದ ಸೋನು ಕಳೆದ ವರ್ಷ ಕೊರೊನಾ ಸಮಯದಿಂದ ರಿಯಲ್ ಹೀರೋ ಆಗಿ ಬದಲಾಗಿದ್ದಾರೆ. ಕೊರೊನಾ ಸಂಕಷ್ಟಕಾಲದಲ್ಲಿ ವಲಸೆ ಕಾರ್ಮಿಕರ ನೆರವಿಗೆ ಧಾವಿಸುವ ಮೂಲಕ ಸೋನು ಸೂದ್ ತನ್ನ ಮಾನವೀಯ ಕೆಲಸ ಪ್ರಾರಂಭಿಸಿದರು.

  ಈಗಲೂ ಮಾನವೀಯ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದು ಕಷ್ಟ ಎಂದವರ ನೆರವಿಗೆ ಧಾವಿಸುತ್ತಿದ್ದಾರೆ. ದಿಢೀರ್ ಲಾಕ್ ಡೌನ್ ನಿಂದ ಕಂಗಾಲಾಗಿದ್ದ ವಲಸೆ ಕಾರ್ಮಿಕರ ನೆರವಿಗೆ ಬಂದ ಸೋನು ಸೂದ್ ಕಾರ್ಮಿಕರನ್ನು ಅವರ ಮನೆಗೆ ಸೇರಿಸುವ ಮಹತ್ವದ ಕೆಲಸ ಮಾಡಿದ್ದರು. ಮನೆಗೆ ಸೇರಿಸಿ ಅಗತ್ಯ ವಸ್ತುಗಳನ್ನು ಪೂರೈಸಿದ್ದರು. ಜೊತೆಗೆ ಕಾರ್ಮಿಕರಿಗೆ ಉದ್ಯೋಗ ವ್ಯವಸ್ಥೆ ಸಹ ಮಾಡಿದ್ದರು.

  ಕೊರೊನಾ ಎರಡನೇ ಅಲೆ ಸಮಯದಲ್ಲೂ ಸೋನು ಸೂದ್ ಅನೇಕ ಮಂದಿಯ ಚಿಕಿತ್ಸೆಗೆ ನೆರವಾಗಿದ್ದಾರೆ. ಆಕ್ಸಿಜನ್ ಸಿಗದೆ ಪರದಾಡುತ್ತಿದ್ದ ಸಾವಿರಾರು ಸೋಂಕಿತರ ಜೀವ ಉಳಿಸಿದ್ದಾರೆ. ಆಕ್ಸಿಜನ್ ಪ್ಲಾಂಟ್ ಗಳನ್ನು ನಿರ್ಮಿಸಿ ಆಕ್ಸಿಜನ್ ಕೊರತೆಯಾಗದಂತೆ ಎಚ್ಚರವಹಿಸಿದ್ದಾರೆ. ಕಷ್ಟ ಎಂದವರ ಸಹಾಯಕ್ಕೆ ಧಾವಿಸುವ ಸೋನು ಸೂದ್ ಅಭಿಮಾನಿಗಳ ಪಾಲಿನ ದೇವರಾಗಿದ್ದಾರೆ. ಅಭಿಮಾನಿಗಳು ಸೋನು ಸೂದ್ ದೇವಸ್ಥಾನವನ್ನು ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ.

  ಇನ್ನು ಸಿನಿಮಾ ಜೀವನದ ಬಗ್ಗೆ ನೋಡುವುದಾದರೆ ಸೋನು ಸೂದ್ ತಮಿಳು ಸಿನಿಮಾದ ಮೂಲಕ 1999ರಲ್ಲಿ ಬೆಳ್ಳಿ ಪರದೆ ಮೇಲೆ ಮಿಂಚಲು ಪ್ರಾರಂಭಿಸಿದರು. 2001ರಲ್ಲಿ ಮೊದಲ ಬಾರಿಗೆ ಬಾಲಿವುಡ್ ಸಿವಿಮಾದಲ್ಲಿ ಕಾಣಿಸಿಕೊಂಡರು. ಶಹೀದ್ ಇ ಅಜಮ್ ಚಿತ್ರ ಸೋನು ಸೂದ್ ಗೆ ದೊಡ್ಡ ಖ್ಯಾತಿಯನ್ನು ತಂದುಕೊಟ್ಟಿತು.

  ಸೋನು ಸೂದ್ ಕೇವಲ ಬಾಲಿವುಡ್ ಮತ್ತು ಕಾಲಿವುಡ್ ಮಾತ್ರವಲ್ಲದೇ ಅನೇಕ ಭಾಷೆಯಲ್ಲಿ ಮಿಂಚಿದ್ದಾರೆ. ತೆಲುಗು, ಕನ್ನಡ, ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೇವಲ ಭಾರತೀಯ ಸಿನಿಮಾರಂಗ ಮಾತ್ರವಲ್ಲದೆ ಚೈನೀಸ್ ಭಾಷೆಯಲ್ಲೂ ಸೋನು ನಟಿಸಿದ್ದಾರೆ.

   Sonu Sood Birthday: Real Hero Sonu Sood celebrates his 48th birthday

  ನಟನೆ ಜೊತೆಗೆ ಸೋನು ಸೂದ್ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಪ್ರಾಂಭಿಸಿದ್ದಾರೆ. 2016ರಲ್ಲಿ ಸೋನು ಶಕ್ತಿ ಸಾಗರ್ ಸಂಸ್ಥೆ ನಿರ್ಮಾಣ ಮಾಡಿದರು. ಇದೀಗ ಈ ಸಂಸ್ಥೆ ಶಕ್ತಿ ಸಾಗರ್ ಸೂದ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

  ಮಾನವೀಯ ಕೆಲಸಗಳ ಜೊತೆಗೆ ಸೋನು ಸೂದ್ ಸಿನಿಮಾಗಳಲ್ಲೂ ತೊಡಗಿಕೊಂಡಿದ್ದಾರೆ. ಸದ್ಯ ಸೋನು ಸೂದ್ ತೆಲುಗಿನ ಆಚಾರ್ಯ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಹಿಂದಿಯ ಪೃಥ್ವಿರಾಜ್ ಮತ್ತು ತಮಿಳಿನ ಒಂದು ಸಿನಿಮಾದಲ್ಲಿ ಸೋನು ಬ್ಯುಸಿಯಾಗಿದ್ದಾರೆ.

  English summary
  Sonu Sood Birthday: Real Hero Sonu Sood celebrates his 48th birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X