Don't Miss!
- Lifestyle
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
- News
ಬೆಂಗಳೂರಿನಲ್ಲಿ ಸ್ಮಾರ್ಟ್ ವಾಚ್ ಕಳ್ಳರನ್ನು ಹಿಡಿದ ಪೊಲೀಸರು ವಶಪಡಿಸಿಕೊಂಡ ವಾಚ್ಗಳೆಷ್ಟು ಗೊತ್ತಾ?
- Sports
ಟೆಸ್ಟ್ ಕ್ರಿಕೆಟ್ನಲ್ಲಿ ಈತನಿಗೆ ಅವಕಾಶ ಸಿಕ್ಕರೆ ಶತಕ, ದ್ವಿಶತಕ ಬಾರಿಸುತ್ತಾನೆ; ಸುರೇಶ್ ರೈನಾ
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಂಗಕ್ಕಿಳಿದ ಸೋನು ಸೂದ್: ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ನೆರವು
ಕೊರೊನಾ ಮೊದಲ ಲಾಕ್‌ಡೌನ್ ಸಮಯದಲ್ಲಿ ದೇಶದ ವಿವಿಧ ನಗರಗಳಲ್ಲಿ ಸಿಲುಕಿದ್ದ ಕಾರ್ಮಿಕರನ್ನು ತಮ್ಮ-ತಮ್ಮ ಊರುಗಳಿಗೆ ತಲುಪಿಸಿದ್ದ ನಟ ಸೋನು ಸೂದ್ ಈಗ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ್ದಾರೆ.
ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಕರ್ನಾಟಕ ಸೇರಿದಂತೆ ಭಾರತದ ಸಾವಿರಾರು ವಿದ್ಯಾರ್ಥಿಗಳು ಸಿಲುಕಿಕೊಂಡು ದೇಶಕ್ಕೆ ವಾಪಸ್ಸಾಗಲು ಬಹಳ ಕಷ್ಟಪಡುತ್ತಿದ್ದಾರೆ. ಕೇಂದ್ರ ಸರ್ಕಾರವು ಹಲವು ವಿದ್ಯಾರ್ಥಿಗಳನ್ನು ದೇಶಕ್ಕೆ ಮರಳಿ ಕರೆತರುವ ಯತ್ನ ಮಾಡುತ್ತಿದೆಯಾದರೂ ಅದು ಸಾಕಾಗುತ್ತಿಲ್ಲ. ಇದೀಗ ಸೋನು ಸೂದ್ ಖಾಸಗಿಯಾಗಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ನಟ
ಸೋನು
ಸೂದ್
ವಿರುದ್ಧ
ಎಫ್‌ಐಆರ್
ದಾಖಲು:
ಉದ್ದೇಶಪೂರ್ವಕ
ಎಂದ
ನೆಟ್ಟಿಗರು
ಉಕ್ರೇನ್‌ನ ಯುದ್ಧ ಪೀಡಿತ ನಗರಗಳಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳು ಪೋಲೆಂಡ್ ಗಡಿ ದಾಟಲು ಸೋನು ಸೂದ್ ನೆರವು ನೀಡುತ್ತಿದ್ದು, ಹಲವು ವಿದ್ಯಾರ್ಥಿಗಳು ಉಕ್ರೇನ್‌ನಿಂದ ವಿಡಿಯೋ ಮಾಡಿ ಸೋನು ಸೂದ್‌ಗೆ ಧನ್ಯವಾದ ಅರ್ಪಿಸಿದ್ದಾರೆ.
ಪ್ರವಿತಾ ಅರೋರಾ ಹೆಸರಿನ ಪಂಜಾಬಿನ ಯುವತಿಯೊಬ್ಬಾಕೆ ವಿಡಿಯೋ ಮಾಡಿ ಹರಿಬಿಟ್ಟಿದ್ದು, ''ನಾವು ಸುಮಾರು 50 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿದ್ದೇವೆ. ನಮಗೆ ಸೋನು ಸೂದ್‌ರ ಫೌಂಡೇಶನ್ ಸಹಾಯ ಮಾಡಿದೆ. ನಾವು ಹಂಗೇರಿಯ ಬುಡಾಪೆಸ್ಟ್‌ನಿಂದ ಕಾಮೋಡೇಶನ್‌ಗೆ ಹೋಗುತ್ತಿದ್ದೇವೆ. ಇಲ್ಲಿ ನಾವು 5 ಗಂಟೆಗೂ ಹೆಚ್ಚು ಸಮಯ ಕಾದು ಕುಳಿತಿದ್ದೆವು. ಸೋನು ಸೂದ್ ಫೌಂಡೇಶನ್‌ನವರು ನಮಗೆ ಸಹಾಯ ಮಾಡಿದ್ದಾರೆ. ನಮಗೆ ಸಹಾಯ ಮಾಡಿದ್ದಕ್ಕೆ ಧನ್ಯವಾದ ಸೋನು ಸೂದ್ ಸರ್'' ಎಂದಿದ್ದಾರೆ ಯುವತಿ.
ನಿಜ
ಜೀವನದ
ಹೀರೋ
ಎಂದು
ಮತ್ತೆ
ಸಾಬೀತು
ಮಾಡಿದ
ಸೋನು
ಸೂದ್!
ವಿಡಿಯೋ
ನೋಡಿ
ಮತ್ತೊಂದು ವಿಡಿಯೋನಲ್ಲಿ ಹರ್ಷ ಯುವಕನೊಬ್ಬ ಸೋನು ಸೂದ್‌ರಿಗೆ ಧನ್ಯವಾದ ಹೇಳಿದ್ದಾನೆ. ''ನಾನು ಉಕ್ರೇನ್‌ನಲ್ಲಿದ್ದೇನೆ. ಇಲ್ಲಿನ ಕೀವ್ ನಲ್ಲಿ ಸಿಲುಕಿಕೊಂಡಿದ್ದೆ. ನಮಗೆ ಸೋನು ಸೂದ್ ಹಾಗೂ ಅವರ ತಂಡ ಸಹಾಯ ಮಾಡಿದೆ. ನಾವು ಈಗ ಕೀವ್‌ನಿಂದ ಲಿವುಹ್ ಕಡೆಗೆ ಹೋಗುತ್ತಿದ್ದೇವೆ. ಅವರ ಸಹಾಯ ಇಲ್ಲದೇ ಹೋಗಿದ್ದಿದ್ದರೆ ನಾವು ಕಿಯವ್ ಬಿಟ್ಟು ಹೋಗಲು ಆಗುತ್ತಿರಲಿಲ್ಲ'' ಎಂದಿದ್ದಾರೆ.
ಮತ್ತೊಂದು ವಿಡಿಯೋದಲ್ಲಿ ಮಾತನಾಡಿರುವ ಚಾರು ಹೆಸರಿನ ಯುವತಿ, ''ನಾವು ಬಹಳ ಸಮಯದಿಂದ ಕೀವ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದೆವು. ಈ ಸ್ಥಳದಿಂದ ಹೊರಗೆ ಹೋಗಲು ಟ್ಯಾಕ್ಸಿ ಸಹ ಸಿಕ್ಕಿರಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಸೋನು ಸೂದ್ ಚಾರಿಟಿಯ ಶಿವು ಸಂಪರ್ಕಕ್ಕೆ ಸಿಕ್ಕಿದರು ಅವರ ಸಹಾಯದಿಂದ ನಾವು ಟ್ಯಾಕ್ಸಿ ಪಡೆದು ಈಗ ಕಿವ್ ಬಿಟ್ಟು ಹೊರಟಿದ್ದೇವೆ. ಇಂದು ಲಿವು ತಲುಪುತ್ತೇವೆ ಅಲ್ಲಿಂದ ಪೋಲೆಂಡ್‌ಗೆ ಹೋಗುತ್ತೇವೆ. ನಮಗೆ ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು'' ಎಂದಿದ್ದಾರೆ.
ಸೃಷ್ಟಿ ಸಿಂಗ್ ಹೆಸರಿನ ಮತ್ತೊಬ್ಬ ಯುವತಿಯೂ ಸಹ ತಾವು ಸೋನು ಸೂದ್‌ರ ನೆರವಿನಿಂದ ಕಿವ್ ಬಿಟ್ಟು ಹೊರಟಿರುವುದಾಗಿ ಹೇಳಿದ್ದಾರೆ. ರೈಲಿನಲ್ಲಿ ಕುಳಿತು ವಿಡಿಯೋ ಮಾಡಿರುವ ಸೃಷ್ಟಿ ಸಿಂಗ್, ಬಹುತೇಕ ಟ್ರೈನ್ ಭಾರತೀಯ ವಿದ್ಯಾರ್ಥಿಗಳಿಂದ ತುಂಬಿದೆ. ಸೋನು ಸೂದ್ ಮತ್ತು ತಂಡ ನಮಗೆ ದೊಡ್ಡ ಮಟ್ಟದ ಸಹಾಯ ಮಾಡಿತು. ಅವರ ಸಹಾಯದಿಂದ ನಾವು ಕಿವ್ ಬಿಟ್ಟು ಹೊರಡಲು ಸಾಧ್ಯವಾಗುತ್ತಿದೆ'' ಎಂದಿದ್ದಾರೆ.