For Quick Alerts
  ALLOW NOTIFICATIONS  
  For Daily Alerts

  ಕಂಗನಾ ನಿರ್ದೇಶನದ 'ಮಣಿಕರ್ಣಿಕಾ' ಸಿನಿಮಾದಿಂದ ಹೊರಬಂದ ಕಾರಣ ಬಹಿರಂಗ ಪಡಿಸಿದ ಸೋನು ಸೂದ್

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ಮತ್ತು ನಿರ್ದೇಶನದ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಸಿನಿಮಾದಿಂದ ನಟ ಸೋನು ಸೂದ್ ಹೊರ ನಡೆದ ಕಾರಣವನ್ನು ಬಹಿರಂಗಪಡಿಸಿದ್ದಾರೆ. 2019ರಲ್ಲಿ ರಿಲೀಸ್ ಆದ ಈ ಸಿನಿಮಾ ವಿವಾದದ ಮೂಲಕವೇ ಹೆಚ್ಚು ಸದ್ದು ಮಾಡಿತ್ತು.

  ಕಂಗನಾ ರಣಾವತ್ ಕನಸಿನ ಸಿನಿಮಾ 'ಮಣಿಕರ್ಣಿಕಾ' ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ನಿರೀಕ್ಷೆಯ ಸಕ್ಸಸ್ ಕಾಣಲಿಲ್ಲ. ಆದೇನೆ ಇರಲಿ ಬಹುನಿರೀಕ್ಷೆಯ ಸಿನಿಮಾದ ನಿರ್ದೇಶಕ ಬದಲಾಗಿದ್ದು ಮತ್ತು ನಟ ಸೋನು ಸೂದ್ ಸಿನಿಮಾದಿಂದ ಹೊರ ನಡೆದಿದ್ದು ಚಿತ್ರಪ್ರೇಕ್ಷಕರಿಗೆ ಭಾರಿ ನಿರಾಸೆ ಮೂಡಿಸಿತ್ತು.

  ರೈತರನ್ನು ಭಯೋತ್ಪಾದರು ಎಂದ ನಟಿ ಕಂಗನಾ ರಣೌತ್ರೈತರನ್ನು ಭಯೋತ್ಪಾದರು ಎಂದ ನಟಿ ಕಂಗನಾ ರಣೌತ್

  ಸಿನಿಮಾದಿಂದ ಹೊರ ಬಂದ ಬಗ್ಗೆ ನಟ ಸೋನು ಸೂದ್ ಇತ್ತೀಚಿಗೆ ಪತ್ರಿಕೆಗೆ ನೀಡಿದ ಸಂದರ್ಶವೊಂದರಲ್ಲಿ ಮಾತನಾಡಿದ್ದಾರೆ. ಕಂಗನಾ ನಿರ್ದೇಶನದ ಸಿನಿಮಾದಿಂದ ಹೊರಬರಲು ನಿಜವಾದ ಕಾರಣವೇನು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

  ಕಂಗನಾ ಭಾವನೆಯನ್ನು ನೋವಿಸಲು ಇಷ್ಟವಿಲ್ಲ

  ಕಂಗನಾ ಭಾವನೆಯನ್ನು ನೋವಿಸಲು ಇಷ್ಟವಿಲ್ಲ

  ನಿರ್ದೇಶಕ ಕ್ರಿಶ್ ಮೊದಲು ಮಣಿಕರ್ಣಿಕಾ ಸಿನಿಮಾದ ಸಾರಥ್ಯ ವಹಿಸಿಕೊಂಡಿದ್ದರು. ಆದರೆ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಸಿದ್ದ ಕ್ರಿಶ್ ಸಿನಿಮಾದಿಂದನೇ ಹೊರನಡೆದರು. ಬಳಿಕ ಸೋನು ಸೂದ್ ಸಹ ನಟಿಸಲು ಹಿಂದೇಟು ಹಾಕಿದರು. ಈ ಬಗ್ಗೆ ಮಾತನಾಡಿರುವ ಸೋನು ಸೂದ್, " ಕಂಗನಾ ಅನೇಕ ವರ್ಷಗಳಿಂದ ನನಗೆ ಸ್ನೇಹಿತೆ, ನಾನು ಅವರ ಭಾವನೆಯನ್ನು ನೋವಿಸಲು ಬಯಸುವುದಿಲ್ಲ" ಎಂದಿದ್ದಾರೆ.

  ನಿರ್ದೇಶಕರು ಬದಲಾದ ಮೇಲೆ ಸಿನಿಮಾಗೆ ಬೆಂಬಲಿಸುವಂತೆ ಹೇಳಿದರು

  ನಿರ್ದೇಶಕರು ಬದಲಾದ ಮೇಲೆ ಸಿನಿಮಾಗೆ ಬೆಂಬಲಿಸುವಂತೆ ಹೇಳಿದರು

  "ಮಣಿಕರ್ಣಿಕಾ ಸಿನಿಮಾದ ಬಹುತೇಕ ಭಾಗ ಚಿತ್ರೀಕರಣ ಮಾಡಲಾಗಿತ್ತು. ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭಿಸುವ ಸಮಯದಲ್ಲಿ ನಿರ್ದೇಶಕರನ್ನು ಕೇಳಿದಾಗ ಅವರು ಈ ಸಿನಿಮಾದಿಂದ ಹೊರಹೋಗಿರುವುದಾಗಿ ಹೇಳಿದರು. ಬಳಿಕ ಕಂಗನಾ ಅವರೇ ನಿರ್ದೇಶನ ಮಾಡಲು ಮುಂದಾದರು. ನಿಮ್ಮ ಬೆಂಬಲ ಬೇಕು ಎಂದು ಕೇಳಿದರು. ನಾನು ಸರಿ ಎಂದು ಹೇಳಿದೆ."

  ಸೋನು ಸೂದ್ ಕಡೆಯಿಂದ ಮತ್ತೊಂದು ಪುಣ್ಯದ ಕೆಲಸಸೋನು ಸೂದ್ ಕಡೆಯಿಂದ ಮತ್ತೊಂದು ಪುಣ್ಯದ ಕೆಲಸ

  80ರಷ್ಟು ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು

  80ರಷ್ಟು ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು

  "ನಾನು ಕಂಗನಾ ಬಳಿ ನಿರ್ದೇಶಕರನ್ನು ಮತ್ತೆ ಸೆಟ್ ಗೆ ಕರೆಸಿಕೊಳ್ಳಬೇಕು, ಅವರು ಈ ಸಿನಿಮಾಗಾಗಿ ತುಂಬಾ ಶ್ರಮಿಸಿದ್ದಾರೆ ಎಂದು ಹೇಳಿದೆ. ಆದರೆ ಕಂಗನಾ ಇದನ್ನು ನಿರಾಕರಿಸಿ, ಅವರೇ ನಿರ್ದೇಶನ ಮಾಡಲು ಮುಂದಾದರು. ಬಳಿಕ ಅವರಿಂದ ಒಂದಿಷ್ಟು ರಶ್ ಗಳನ್ನು ಕಳುಹಿಸಲು ಹೇಳಿದೆ. ಅದರಲ್ಲಿ ನನ್ನ 80ರಷ್ಟು ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಈ ಬಗ್ಗೆ ಕಂಗನಾ ಜೊತೆ ಮಾತನಾಡಿದೆ. ಇದನ್ನು ಕಂಗನಾ ಒಪ್ಪಿಕೊಂಡರು ಮತ್ತು ಬೇರೆ ರೀತಿ ಚಿತ್ರೀಕರಿಸಲು ಬಯಸಿದ್ದರು."

  'ರಿಯಲ್ ಹೀರೋ' ಸೋನು ಸೂದ್ ಮತ್ತೊಂದು ಮಹತ್ವದ ಕಾರ್ಯ, ವಿದ್ಯಾರ್ಥಿಗಳಿಗೆ ಅನುಕೂಲ!'ರಿಯಲ್ ಹೀರೋ' ಸೋನು ಸೂದ್ ಮತ್ತೊಂದು ಮಹತ್ವದ ಕಾರ್ಯ, ವಿದ್ಯಾರ್ಥಿಗಳಿಗೆ ಅನುಕೂಲ!

  ನನಗೆ ತುಂಬಾ ದುಃಖವಾಗಿದೆ

  ನನಗೆ ತುಂಬಾ ದುಃಖವಾಗಿದೆ

  "ಆದರೆ ಕಂಗನಾ ಹೇಳಿದ ರೀತಿ ಚಿತ್ರೀಕರಿಸಲು ನನಗೆ ಇಷ್ಟವಿರಲಿಲ್ಲ. ನಾನು ಹಳೆಯ ಕಥೆಯನ್ನು ಒಪ್ಪಿಕೊಂಡು ಸಿನಿಮಾಗೆ ಸಹಿ ಮಾಡಿದ್ದೆ, ಆದರೆ ಈಗ ನಾನು ಈ ಯೋಜನೆಯಿಂದ ಹೊರನಡೆಯಲು ಬಯಸುತ್ತೇನೆ ಎಂದು ಹೇಳಿದೆ. ಈ ಬಗ್ಗೆ ನಾನು ಮಾತನಾಡಲ್ಲ. ಆದರೆ ಈ ಚಿತ್ರಕ್ಕಾಗಿ ನಾಲ್ಕು ತಿಂಗಳು ಸಮಯ ನೀಡಿದ್ದೆ, ಮತ್ತು ಈ ಸಿನಿಮಾಗಾಗಿ ಬೇರೆ ಕೆಲವು ಸಿನಿಮಾಗಳನ್ನು ಬಿಟ್ಟಿದ್ದೇನೆ. ಇದು ನನಗೆ ತುಂಬಾ ದುಃಖವಾಯಿತು." ಎಂದು ಸೋನು ಸೂದ್ ಹೇಳಿದ್ದಾರೆ.

  RCB ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದ Duniya Vijay | Filmibeat Kannada
  ಕಂಗನಾ ಆರೋಪ ತಳ್ಳಿ ಹಾಕಿದ ಸೋನು ಸೂದ್

  ಕಂಗನಾ ಆರೋಪ ತಳ್ಳಿ ಹಾಕಿದ ಸೋನು ಸೂದ್

  ಆದರೆ ಕಂಗನಾ ಈ ಹಿಂದೆ, ಮಹಿಳಾ ನಿರ್ದೇಶಕರ ಅಡಿಯಲ್ಲಿ ಕೆಲಸ ಮಾಡಲು ಸಿದ್ಧರಿಲ್ಲ ಎನ್ನುವ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೋನು, " ಅದು ನನ್ನ ಹೇಳಿಕೆಯಲ್ಲ. ಹಾಗೆ ನಾನು ಎಲ್ಲಿಯೂ ಹೇಳಲಿಲ್ಲ. ಏಕೆಂದರೆ ಈಗಾಗಲೇ ಮಹಿಳಾ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೀನಿ. ಆದರೆ ಒಂದು ಸೆಟ್ ನಲ್ಲಿ ಇಬ್ಬರ ನಿರ್ದೇಶಕರ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಮಾತ್ರ ಹೇಳಿದ್ದೀನಿ. ಹಾಗಾಗಿ ಆ ನಿಲುವನ್ನು ಯಾವಾಗಲು ಕಾಪಾಡಿಕೊಳ್ಳುತ್ತೇನೆ." ಎಂದು ಸೋನು ಸೂದ್ ಮಣಿಕರ್ಣಿಕಾ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

  English summary
  Actor Sonu Sood reveals on why he left Kangana's Manikarnika movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X