For Quick Alerts
  ALLOW NOTIFICATIONS  
  For Daily Alerts

  ಅಮ್ಮನ ಹುಟ್ಟುಹಬ್ಬಕ್ಕೆ ಭಾವುಕ ಪೋಸ್ಟ್ ಹಾಕಿದ ಸೋನು ಸೂದ್

  |

  ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಜನಪರ ಕೆಲಸ ಮಾಡುವ ಮೂಲಕ ರಿಯಲ್ ಹೀರೋ ಎನಿಸಿಕೊಂಡ ಬಾಲಿವುಡ್ ನಟ ಸೋನು ಸೂದ್ ತಮ್ಮ ತಾಯಿಯ ಬಗ್ಗೆ ಭಾವುಕ ಪೋಸ್ಟ್ ಹಾಕಿದ್ದಾರೆ.

  ಜುಲೈ 21ಕ್ಕೆ ಸೋನು ಸೂದ್ ತಾಯಿ ಸರೋಜ್ ಸೂದ್ ಅವರ ಹುಟ್ಟುಹಬ್ಬ. ಈ ವಿಶೇಷ ದಿನದಲ್ಲಿ ತಮ್ಮ ಆಲ್ಬಮ್‌ನಿಂದ ತಾಯಿಯ ಹಳೆಯ ಫೋಟೋಗಳನ್ನು ಶೇರ್ ಮಾಡಿರುವ ಸೋನು ಸೂದ್ ಮಮನಮುಟ್ಟುವ ಸಂದೇಶ ರವಾನಿಸಿದ್ದಾರೆ.

  ಸೋನು ಸೂದ್ ಸೂಪರ್ ಮಾರ್ಕೆಟ್: ಸೈಕಲ್ ಏರಿ ಬ್ರೆಡ್, ಮೊಟ್ಟೆ ಮಾರಾಟಕ್ಕೆ ಹೊರಟ ನಟ ಸೋನು ಸೂದ್ ಸೂಪರ್ ಮಾರ್ಕೆಟ್: ಸೈಕಲ್ ಏರಿ ಬ್ರೆಡ್, ಮೊಟ್ಟೆ ಮಾರಾಟಕ್ಕೆ ಹೊರಟ ನಟ

  ''ಹ್ಯಾಪಿ ಬರ್ತಡೇ ಅಮ್ಮಾ. ಪ್ರತಿ ವರ್ಷವೂ ನಿಮ್ಮನ್ನು ತಬ್ಬಿಕೊಂಡು ವಿಶ್ ಮಾಡಬೇಕಿತ್ತು ಎಂದೆನಿಸುತ್ತದೆ. ನೀನು ಕಲಿಸಿದ ಜೀವನದ ಪಾಠಗಳಿಗೆ ಧನ್ಯವಾದಗಳು. ಸದಾ ಉತ್ತಮ ಕೆಲಸಗಳನ್ನು ಮಾಡುತ್ತಾ ನಿಮಗೆ ಹೆಮ್ಮೆ ತರುತ್ತೇನೆ ಎಂದು ಮಾತು ಕೊಡುತ್ತಿದ್ದೇನೆ'' ಎಂದಿದ್ದಾರೆ ಸೋನು ಸೂದ್.

  ಪೋಸ್ಟ್ ಮುಂದುವರಿದು, ''ನಾನು ನಿಮ್ಮನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಈ ಸಂದೇಶದಿಂದ ಹೇಳಲು ಸಾಧ್ಯವಿಲ್ಲ. ನೀವು ಇಲ್ಲದೇ ನನ್ನ ಜೀವನದಲ್ಲಿ ಖಾಲಿತನ ಉಂಟಾಗಿದೆ. ಮತ್ತೆ ನಿಮ್ಮನ್ನು ಭೇಟಿ ಮಾಡುವವರೆಗೂ ಆ ಖಾಲಿತನ ಹಾಗೆ ಇರುತ್ತದೆ. ನೀವು ಎಲ್ಲಿದ್ದರೂ ಸಂತೋಷವಾಗಿರಿ ಮತ್ತು ಯಾವಾಗಲೂ ನನಗೆ ಮಾರ್ಗದರ್ಶನ ನೀಡಿ'' ಎಂದು ಇನ್ಸ್ಟಾಗ್ರಾಂನಲ್ಲಿ ಭಾವುಕವಾಗಿ ಪೋಸ್ಟ್ ಹಾಕಿದ್ದಾರೆ.

  ಕಳೆದ ಎರಡು ವರ್ಷದಿಂದ ನಟ ಸೋನು ಸೋದ್ ಜನ ಸಾಮಾನ್ಯರ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಅಹಾರ, ಊರುಗಳಿಗೆ ತೆರಳಲು ಬಸ್ ವ್ಯವಸ್ಥೆ, ಮಕ್ಕಳಿಗೆ ಪುಸ್ತಕ, ಬ್ಯಾಗ್, ಲ್ಯಾಪ್‌ಟ್ಯಾಪ್, ಸ್ಮಾರ್ಟ್ ಫೋನ್, ಚಿಕಿತ್ಸೆ ವೆಚ್ಚ ಭರಿಸುವುದು ಹೀಗೆ ಅನೇಕ ಸಮಾಜಮುಖಿ ಕೆಲಸ ಮಾಡಿದ್ದಾರೆ.

  ಪತಿ ಅರೆಸ್ಟ್ ಆದ ಬಳಿಕ ಮೊದಲ ಬಾರಿಗೆ ಮೌನ ಮುರಿದ ಶಿಲ್ಪಾ ಶೆಟ್ಟಿ

  ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾದಲ್ಲಿ ಸೋನು ಸೂದ್ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ 'ಪೃಥ್ವಿರಾಜ್' ಹಾಗೂ ಇ-ನಿವಾಸ್ ನಿರ್ದೇಶನದ 'ಕಿಸಾನ್' ಅಂತಹ ಪ್ರಾಜೆಕ್ಟ್‌ನಲ್ಲಿ ಸೋನು ಕಾಣಿಕೊಂಡಿದ್ದಾರೆ.

  English summary
  Bollywood actor Sonu sood shares emotional note for late mother saroj sood on her birth anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X