For Quick Alerts
  ALLOW NOTIFICATIONS  
  For Daily Alerts

  ಬೋನಿ ಕಪೂರ್ ಜೊತೆ 8 ತಿಂಗಳು ಮಾತು ಬಿಟ್ಟಿದ್ದ ಶ್ರೀದೇವಿ; ಕಾರಣವೇನು?

  |

  ಬಾಲಿವುಡ್ 'ಸುರಸುಂದರಿ', 'ಚಾಂದಿನಿ', 'ಸೌಂದರ್ಯದ ಸಿರಿದೇವಿ' ಹೀಗೆ ನಾನಾಹೆಸರುಗಳಿಂದ ಕರೆಸಿಕೊಳ್ಳುವ ನಟಿ ಶ್ರೀದೇವಿ ಜನ್ಮದಿನವಿಂದು. ಇಂದು ಶ್ರೀದೇವಿ ಇಲ್ಲದಿದ್ದರೂ ಸಿನಿಮಾಗಳ ಮೂಲಕ ಅಭಿಮಾನಿಗಳ ಮನದಲ್ಲಿ ಜೀವಂತವಾಗಿದ್ದಾರೆ. ಹುಟ್ಟುಹಬ್ಬ ಈ ಸವಿನೆನಪಿನ ದಿನ ಅಭಿಮಾನಿಗಳು ಮತ್ತು ಸಿನಿ ಗಣ್ಯರು ಸೌಂದರ್ಯ ದೇವಿಯನ್ನು ಸ್ಮರಿಸುತ್ತಿದ್ದಾರೆ.

  ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟು, ದಕ್ಷಿಣ ಭಾರತದಲ್ಲಿ ಜನಪ್ರಿಯತೆ ಪಡೆದು, ಇಡೀ ಬಾಲಿವುಡ್ ಅನ್ನೇ ತನ್ನ ಕಿರುಬೆರಳಿನಲ್ಲಿ ಆಡಿಸಿದ ಚೆಲುವಾಂತ ಚೆಲುವೆ ಈಕೆ. 80ರ ದಶಕದ ಜನಪ್ರಿಯ ನಟಿ ಶ್ರೀದೇವಿ ಬಾಲಿವುಡ್ ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಪ್ರೀತಿಯಲ್ಲಿ ಸಿಲುಕಿ, ಬೋನಿ ಕಪೂರ್ ಪತ್ನಿಯಾಗಿ ಸಂಸಾರದ ಬಂಡಿಸಾಗಿಸಿದ ಕಥೆ ಎಲ್ಲರಿಗೂ ಗೊತ್ತಿದೆ.

  ನಟಿ ಶ್ರೀದೇವಿಗಾಗಿ ಕಿತ್ತಾಡಿಕೊಂಡಿದ್ದರು ಅನಿಲ್ ಕಪೂರ್ ಮತ್ತು ಬೋನಿ ಕಪೂರ್ ಸಹೋದರರುನಟಿ ಶ್ರೀದೇವಿಗಾಗಿ ಕಿತ್ತಾಡಿಕೊಂಡಿದ್ದರು ಅನಿಲ್ ಕಪೂರ್ ಮತ್ತು ಬೋನಿ ಕಪೂರ್ ಸಹೋದರರು

  ಇಬ್ಬರ ಪ್ರೇಮ ಕಥೆ ಯಾವುದೇ ಸಿನಿಮಾಗಳಿಂದ ಕಡಿಮೆಯಾಗಿಲ್ಲ. ಬಾಲಿವುಡ್ ನ ಜನಪ್ರಿಯ ಪ್ರೇಮಕಥೆಗಳಲ್ಲಿ ಒಂದಾಗಿದೆ. ಇಬ್ಬರೂ ಒಬ್ಬರಿಗೊಬ್ಬರು ಹುಚ್ಚರಂತೆ ಪ್ರೀತಿಸುತ್ತಿದ್ದರು. ಶ್ರೀದೇವಿಯ ಸೌಂದರ್ಯಕ್ಕೆ ಮನಸೋತಿದ್ದ ಬೋನಿ ಕಪೂರ್, ಆಕೆಯ ಜೊತೆ ಆತ್ಮೀಯತೆ ಬೆಳೆಸಿಕೊಳ್ಳಲು 'ಮಿಸ್ಟರ್ ಇಂಡಿಯಾ' ಚಿತ್ರಕ್ಕೆ ಆಫರ್ ಕೊಟ್ಟರು. ಕೇಳಿದಕ್ಕಿಂತ ಹೆಚ್ಚು ಸಂಭಾವನೆಯನ್ನೇ ಶ್ರೀದೇವಿಗೆ ಬೋನಿ ಕಪೂರ್ ನೀಡಿದ್ದರು. ಅಷ್ಟರಲ್ಲಾಗಲೇ, ಬೋನಿ ಕಪೂರ್ ಗೆ ಮೋನಾ ಎಂಬುವರ ಜೊತೆಗೆ ಮದುವೆ ಆಗಿತ್ತು. ಹೀಗಿದ್ದರೂ, ಇತ್ತ ಮಿಥುನ್ ಚಕ್ರವರ್ತಿಯಿಂದ ಬೇರ್ಪಟ್ಟು ಒಂಟಿಯಾಗಿದ್ದ ಶ್ರೀದೇವಿಗೆ ಅಕ್ಷರಶಃ ಆಶ್ರಯ ನೀಡಿದ್ದು ಬೋನಿ ಕಪೂರ್.

  1996ರಲ್ಲಿ ಮದುವೆ

  1996ರಲ್ಲಿ ಮದುವೆ

  ಬೋನಿ ಕಪೂರ್ ಮತ್ತು ಶ್ರೀದೇವಿ ಸ್ನೇಹ ಸಂಬಂಧ ಪ್ರೀತಿ ರೂಪ ಪಡೆದ ಪರಿಣಾಮ ಮದುವೆಗೂ ಮುನ್ನವೇ ಶ್ರೀದೇವಿ ಗರ್ಭಿಣಿ ಆಗಿದ್ದರು. ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ, ತಮ್ಮ ಮೊದಲ ಪತ್ನಿ ಮೋನಾಗೆ ವಿಚ್ಛೇದನ ನೀಡಿ 1996 ರಲ್ಲಿ ಜೂನ್ 2ರಂದು ಬೋನಿ ಕಪೂರ್, ಶ್ರೀದೇವಿಯನ್ನ ಮದುವೆ ಆದರು. ಬೋನಿ ಮತ್ತು ಶ್ರೀದೇವಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಾದರು (ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್).

  8 ತಿಂಗಳು ಮಾತು ಬಿಟ್ಟಿದ್ದ ಶ್ರೀದೇವಿ

  8 ತಿಂಗಳು ಮಾತು ಬಿಟ್ಟಿದ್ದ ಶ್ರೀದೇವಿ

  ಮದುವೆಗೂ ಮೊದಲು ಬೋನಿ ಕಪೂರ್ ಮೊದಲ ಪತ್ನಿ, ಸ್ನೇಹಿತರು ಮತ್ತು ಶ್ರೀದೇವಿ ಜೊತೆ ಚೆನ್ನೈನಲ್ಲಿ ಇದ್ದರು. ಕುಟುಂಬದ ಸದಸ್ಯರು ಯಾರು ಇಲ್ಲದೆ ಶ್ರೀದೇವಿ ಮೊದಲ ಬಾರಿಗೆ ಮನೆಯಿಂದ ಹೊರಬಂದಿದ್ದರು. ಈ ಬಗ್ಗೆ ಸ್ವತಃ ಬೋನಿ ಕಪೂರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಡಿನ್ನರ್ ಬಳಿಕ ಬೋನಿ ಕಪೂರ್ ಶ್ರೀದೇವಿ ಅವರನ್ನು ಮನೆಗೆ ಡ್ರಾಪ್ ಮಾಡಿದರು. ಆ ಸಮಯದಲ್ಲಿ ಬೋನಿ ಕಪೂರ್ ಶ್ರೀದೇವಿ ಮೇಲಿದ್ದ ಮೋಹವನ್ನು ಹೇಳಿಕೊಂಡಿದ್ದರು. ಆದರೆ ಬೋನಿ ಕಪೂರ್ ಮಾತು ಶ್ರೀದೇವಿಯನ್ನು ಕೆರಳಿಸಿತ್ತು. ಸಿಟ್ಟಾಗಿದ್ದ ಶ್ರೀದೇವಿ ಬಳಿಕ 8 ತಿಂಗಳು ಬೋನಿ ಕಪೂರ್ ಜೊತೆ ಮಾತನಾಡುವುದನ್ನೆ ನಿಲ್ಲಿಸಿದ್ದರು.

  ಬೋನಿ ಕಪೂರ್ ಮನೆಯಲ್ಲಿ ಉಳಿದುಕೊಂಡಿದ್ದ ಶ್ರೀದೇವಿ

  ಬೋನಿ ಕಪೂರ್ ಮನೆಯಲ್ಲಿ ಉಳಿದುಕೊಂಡಿದ್ದ ಶ್ರೀದೇವಿ

  ಬಳಿಕ ಮಾರ್ಚ್ 1993ರಲ್ಲಿ ಮುಂಬೈ ಸರಣಿ ಬಾಂಬ್ ಸ್ಫೋಟ ಸಂಭವಿಸಿದಾಗ ಬೋನಿ ಕಪೂರ್ ತಕ್ಷಣ ಶ್ರೀದೇವಿ ತಾಯಿಗೆ ಕರೆ ಮಾಡಿ ಶ್ರೀದೇವಿ ಇನ್ಮುಂದೆ ಹೋಟೆಲ್ ಸೀ ರಾಕ್ ಹೋಟೆಲ್ ನಲ್ಲಿ ಉಳಿಯಬಾರದು ಎಂದು ಒತ್ತಾಯಿಸಿದರು. ಬಳಿಕ ಶ್ರೀದೇವಿಯನ್ನು ಕರೆದುಕೊಂಡು ಬರಲು ಬೋನಿ ಕಪೂರ್ ತನ್ನ ಸಿಬ್ಬಂದಿ ಕಳುಹಿಸಿದರು. ಶ್ರೀದೇವಿ ಬೋನಿ ಕಪೂರ್ ಮನೆಗೆ ಬಂದರು. ಕೆಲವು ಸಮಯ ಬೋನಿ ಕಪೂರ್ ಮನೆಯಲ್ಲೇ ಇದ್ದರು ಶ್ರೀದೇವಿ. ಇಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಯಿತು.

  ಶ್ರೀದೇವಿ ಬೆಂಬಲಕ್ಕೆ ನಿಂತಿದ್ದ ಬೋನಿ ಕಪೂರ್

  ಶ್ರೀದೇವಿ ಬೆಂಬಲಕ್ಕೆ ನಿಂತಿದ್ದ ಬೋನಿ ಕಪೂರ್

  ಶ್ರೀದೇವಿ ತಾಯಿ ತೀರಿಕೊಂಡಾಗ ಬೋನಿ ಕಪೂರ್ ತುಂಬಾ ಬೆಂಬಲಕ್ಕೆ ನಿಂತಿದ್ದರು. ಆಗ ಇಬ್ಬರೂ ಮತ್ತಷ್ಟು ಹತ್ತಿರವಾದರು. ತಾಯಿ ತೀರಿಕೊಂಡ ಬೆನ್ನಲ್ಲೇ ಶ್ರೀದೇವಿ ತಂದೆಯನ್ನು ಕಳೆದುಕೊಂಡರು. ಇದು ಶ್ರೀದೇವಿಯನ್ನು ಮತ್ತಷ್ಟು ಕುಗ್ಗಿಸಿತು. ಆ ಸಮಯದಲ್ಲಿ ಬೋನಿ ಕಪೂರ್, ಶ್ರೀದೇವಿ ಜೊತೆಯೇ ಇದ್ದರು.

  2018ರಲ್ಲಿ ನಿಗೂಢ ಸಾವು

  2018ರಲ್ಲಿ ನಿಗೂಢ ಸಾವು

  ಜನಪ್ರಿಯ ನಟಿ ಶ್ರೀದೇವಿ 2018 ಫೆಬ್ರವರಿ 24 ರಂದು ಕೊನೆಯುಸಿರೆಳೆದರು. ದುಬೈನ ಹೋಟೆಲ್ ನಲ್ಲಿ ತಂಗಿದ್ದ ಶ್ರೀದೇವಿ, ಬಾತ್ ಟಬ್ ನಲ್ಲಿ ಅಕಸ್ಮಾತ್ ಆಗಿ ಮುಳುಗಿ ಸಾವನ್ನಪ್ಪಿದರು ಎಂದು ವರದಿಯಾಯಿತು. ಸಾವಿನನಲ್ಲೂ ನಿಗೂಢತೆ ಉಳಿಸಿದರು ಶ್ರೀದೇವಿ. ಬಾಲಿವುಡ್ ಚಾಂದನಿ ನಿಧನಹೊಂದಿದರು ಅವರ ವಿಚಾರ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಶ್ರೀದೇವಿ ಮಕ್ಕಳು ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ತಾಯಿಯ ಹಾಗೆ ದೊಡ್ಡ ನಟಿಯಾಗಿ ಬೆಳೆಯುವ ಕನಸಿನೊಂದಿಗೆ ಸಿನಿಮಾಗಳನ್ನು ಮಾಡುತ್ತಿದ್ದಾರೆ.

  English summary
  Actres Sridevi Birthday: Reasons why Sridevi stopped talking to Boney Kapoor for almost 8 months.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X