For Quick Alerts
ALLOW NOTIFICATIONS  
For Daily Alerts

  ಶ್ರೀದೇವಿಯ ಅಂತಿಮ ದರ್ಶನದ ವೇಳೆ ಟೀಕೆಗೆ ಗುರಿಯಾದ ನಟಿ ಜಾಕ್ವೆಲಿನ್

  By Bharath Kumar
  |
  ಶ್ರೀದೇವಿಯ ಅಂತಿಮ ದರ್ಶನದ ವೇಳೆ ಟೀಕೆಗೆ ಗುರಿಯಾದ ನಟಿ ಜಾಕ್ವೆಲಿನ್

  ಭಾರತದ ಲೇಡಿ ಸೂಪರ್ ಸ್ಟಾರ್ ಶ್ರೀದೇವಿಯ ಅಂತ್ಯ ಸಂಸ್ಕಾರಕ್ಕೆ ಜನಸಾಗರವೇ ಹರಿದು ಬಂದಿತ್ತು. ಅದಕ್ಕೂ ಮುಂಚೆ ಮುಂಬೈನ ಸೆಲೆಬ್ರೆಷನ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಶ್ರೀದೇವಿಯ ಪಾರ್ಥಿವ ಶರೀರವನ್ನ ಇರಿಸಲಾಗಿತ್ತು. ಇಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾಗಳು ಜಮಾಯಿಸಿ ನೆಚ್ಚಿನ ತಾರೆಗೆ ಅಂತಿಮ ನಮನ ಸಲ್ಲಿಸಿದರು.

  ಪ್ರತಿಯೊಬ್ಬರ ಕಣ್ಣಲ್ಲೂ ಭಾವುಕತೆ ಎದ್ದು ಕಾಣುತ್ತಿತ್ತು. ನೆಚ್ಚಿನ ಕಲಾವಿದೆಯಲನ್ನ ಕಳೆದುಕೊಂಡೆವು ಎಂಬ ನೋವು ಕಾಡುತ್ತಿತ್ತು. ಇಡೀ ಬಾಲಿವುಡ್ ಇಂಡಸ್ಟ್ರಿಯೇ ಸ್ತಬ್ದವಾಗಿ ಶ್ರೀದೇವಿಯ ಅಂತಿಮಯಾತ್ರೆಗೆ ಬಂದಿತ್ತು.

  ಈ ನಡುವೆ ಎಲ್ಲರಂತೆ ಶ್ರೀದೇವಿಯ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಈಗ ಟ್ರೋಲ್ ಗೆ ಗುರಿಯಾಗಿದ್ದಾರೆ. ಯಾಕೆ ಎಂದು ತಿಳಿಯಲು ಮುಂದೆ ಓದಿ.....

  ನಗುನಗುತ್ತಾ ಆಗಮಿಸಿದ ನಟಿ

  ಅಗಲಿದೆ ಶ್ರೀದೇವಿಯ ಅಂತಿಮ ದರ್ಶನ ಪಡೆಯಲು ಮುಂಬೈನ ಸೆಲೆಬ್ರೆಷನ್ ಸ್ಪೋರ್ಟ್ಸ್ ಕ್ಲಬ್ ಆಗಮಿಸಿದ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಕಾರು ಇಳಿಯುತ್ತಿದ್ದಂತೆ ನಗುಮುಖದಿಂದ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದು ಸಹಜವಾಗಿ ಚರ್ಚೆಗೆ ಕಾರಣವಾಗಿದೆ.

  ಶ್ರೀದೇವಿ ಪಾರ್ಥಿವ ಶರೀರ ಭಾರತಕ್ಕೆ ತರಲು ಈ ವ್ಯಕ್ತಿಯೇ ಕಾರಣ

  ಸಾವಿನ ಮನೆಯಲ್ಲಿ ನಗು ಬೇಕಿತ್ತಾ.?

  ಶ್ರೀದೇವಿಯ ಅಂತಿಮಯಾತ್ರೆಯ ಕ್ಷಣಗಳನ್ನ ಟ್ವಿಟ್ಟರ್ ನಲ್ಲಿ ಲೈವ್ ಅಪಡೇಟ್ಸ್ ಪಡೆಯುತ್ತಿದ್ದ ಜನರು ಜಾಕ್ವೆಲಿನ್ ಫೆರ್ನಾಂಡಿಸ್ ಅವರ ಈ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಾವಿನ ಮನೆಯಲ್ಲಿ ಕಂಬನಿ ಮಿಡಿಯಬೇಕಿದ್ದ ನಟಿ ಸ್ಮೈಲ್ ಮಾಡಿದ್ದು ಟೀಕೆಗೆ ಗುರಿಯಾಗಿದೆ.

  ಗೌರವ ನೀಡಬೇಕಾಗಿರುವುದು ನಿನ್ನ ಕರ್ತವ್ಯ

  ''ಜಾಕ್ವೆಲಿನ್ ಫೆರ್ನಾಂಡಿಸ್....ಶ್ರೀದೇವಿಯ ಅಂತಿಮ ಯಾತ್ರೆಗೆ ಬಂದಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಕಾರಣಕ್ಕೋ ಅಥವಾ ಮಾಧ್ಯಮಗಳ ಮುಂದೆ ಶೋ ನಿಡುವುದಕ್ಕೋ? ಅಲ್ಲಿ ಸ್ಮೈಲ್ ಮಾಡುವ ಅಗತ್ಯವೇನಿತ್ತು? ಶ್ರೀದೇವಿ ಕೇವಲ ನಟಿ ಮಾತ್ರವಲ್ಲ, ಅವರೊಬ್ಬ ಕಲಾಸಂಸ್ಥೆ. ಲೆಜೆಂಡ್. ಗೌರವವಿರಲಿ'' ಎಂದು ಟೀಕಿಸಿದ್ದಾರೆ.

  ಭಾವನೆಗಳಿಗೆ ಬೆಂಬಲ ನೀಡಿ

  ''ಸತ್ತ ವ್ಯಕ್ತಿಯ ಮನೆಗೆ ಬರಬೇಕಾದರೇ ಸತ್ತ ವ್ಯಕ್ತಿಯ ಆತ್ಮಕ್ಕೆ ಶಾಂತಿ ಕೋರಬೇಕು. ಮತ್ತು ಅವರ ಮನೆಯವರ ಭಾವನೆಗೆ ಬೆಂಬಲ ನೀಡಬೇಕು. ಅದನ್ನ ಬಿಟ್ಟು ನಗು ಯಾಕೆ ಬೇಕು. ನಗುವುದಕ್ಕೆ ಏನಿದೆ.?'' ಎಂದು ಪ್ರಶ್ನಿಸಿದ್ದಾರೆ.

  ವೈರಲ್ ವಿಡಿಯೋ: ಕೊನೆಯ ಜಾಹೀರಾತಿನಲ್ಲಿ ಮಿರ ಮಿರ ಮಿಂಚಿದ್ದ 'ಚಾಂದಿನಿ'

  ಸಂಗೀತ ಗೌರವ ನೀಡಿದ್ದ ನಟಿ

  ಇದಕ್ಕು ಮುಂಚೆ ಶ್ರೀದೇವಿ ನಿಧನರಾಗಿದ್ದಾರೆ ಎಂಬ ವಿಷ್ಯ ತಿಳಿಯುತ್ತಿದ್ದಂತೆ ಸಂಗೀತದ ಮೂಲಕ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅಗಲಿಗೆ ಅತಿಲೋಕ ಸುಂದರಿಗೆ ಗೌರವ ಸಲ್ಲಿಸಿದ್ದರು. ಆಗ ಎಲ್ಲರಿಂದಲೂ ಮೆಚ್ಚುಗೆ ಗಳಿಸಿಕೊಂಡಿದ್ದರು.

  ಶ್ರೀದೇವಿಗೆ ನಮನ ಸಲ್ಲಿಸಿದ ಬಾಲಿವುಡ್

  ಶಾರೂಖ್ ಖಾನ್, ಸಲ್ಮಾನ ಖಾನ್, ಅಮಿತಾಬ್ ಬಚ್ಚನ್, ರೇಖಾ, ಹೇಮಾ ಮಾಲಿನಿ, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಶಾಹೀದ್ ಕಪೂರ್, ಅಜಯ್ ದೇವಗನ್, ಕಾಜೋಲ್, ಅಕ್ಷಯ್ ಕುಮಾರ್, ಶ್ರದ್ಧಾ ಕಪೂರ್ ಸೇರಿದಂತೆ ಬಾಲಿವುಡ್ ನ ಬಹುತೇಕ ಎಲ್ಲರೂ ಶ್ರೀದೇವಿಯ ಅಂತಿಮಯಾತ್ರೆಯಲ್ಲಿ ಭಾಗವಹಿಸಿದ್ದರು.

  'ಅತಿಲೋಕ ಸುಂದರಿ'ಗೆ ಅಂತಿಮ ನಮನ ಸಲ್ಲಿಸಿದ 'ಜಗದೇಕ ವೀರ'

  ಶ್ರೀದೇವಿಯ ಅಂತಿಮ ದರ್ಶನ ಪಡೆದ ಸಿನಿತಾರೆಯರು: ಯಾರೆಲ್ಲಾ ಹೋಗಿದ್ದರು.?

  English summary
  Sridevi's funeral: Jacqueline Fernandez slammed for smiling upon her arrival at actress' prayer meet. The Race 3 actress was photographed smiling and greeting people after she stepped out of her car at the venue, and Twitter users quickly picked up on it.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more