»   » ಪತಿ ಬೋನಿ ಕಪೂರ್ ಗಾಗಿ ತನ್ನ ಆಸ್ತಿ ಮಾರಾಟ ಮಾಡಿದ್ದ ಶ್ರೀದೇವಿ!

ಪತಿ ಬೋನಿ ಕಪೂರ್ ಗಾಗಿ ತನ್ನ ಆಸ್ತಿ ಮಾರಾಟ ಮಾಡಿದ್ದ ಶ್ರೀದೇವಿ!

Posted By:
Subscribe to Filmibeat Kannada

ನಟಿ ಶ್ರೀದೇವಿಯ ಹಠಾತ್ ನಿಧನದ ಆಘಾತದಿಂದ ಇನ್ನೂ ಕಪೂರ್ ಕುಟುಂಬ ಹೊರಬಂದಿಲ್ಲ. ಅಷ್ಟರಲ್ಲಾಗಲೇ, ಶ್ರೀದೇವಿಯ ಜೀವನದ ಬಗ್ಗೆ ದಿನಕ್ಕೊಂದು ಸಂಗತಿಗಳು ಹೊರಗೆ ಬರುತ್ತಿವೆ.

''ಬೋನಿಯನ್ನ ಶ್ರೀದೇವಿ ಮದುವೆ ಆಗಿದ್ದು ಯಾಕೆ? ಬೋನಿಯನ್ನ ಮದುವೆ ಆದ್ಮೇಲೆ ಶ್ರೀದೇವಿ ನೋವಿನಲ್ಲಿಯೇ ಜೀವನ ಕಳೆದರು. ಶ್ರೀದೇವಿಯ ಸಾಂಸಾರಿಕ ಜೀವನ ಖುಷಿಯಾಗಿರಲಿಲ್ಲ'' ಎಂದು ಹಲವರು ಹಲವಾರು ರೀತಿ ವಿವರಣೆ ನೀಡಿದ್ದಾರೆ. ಇದರಲ್ಲಿ ನಿಜ ಯಾವುದು, ಸುಳ್ಳು ಯಾವುದು ಎಂಬುದು ಕಪೂರ್ ಕುಟುಂಬಕ್ಕೆ ಮಾತ್ರ ಗೊತ್ತು.

ಶ್ರೀದೇವಿ ಸಾವಿನ ಸುತ್ತ ಅನುಮಾನಗಳು ಮೂಡಿದ ಬೆನ್ನಲ್ಲೇ, ಶ್ರೀದೇವಿಯ ಅಂಕಲ್ ವೇಣುಗೋಪಾಲ್ ರೆಡ್ಡಿ ಕೆಲ ವಿಷಯಗಳನ್ನ ಹೊರ ಹಾಕಿದ್ದಾರೆ.

iDream News ಗೆ ವಿಡಿಯೋ ಸಂದರ್ಶನ ನೀಡಿರುವ ವೇಣುಗೋಪಾಲ್ ರೆಡ್ಡಿ, ''ಬೋನಿಯನ್ನ ಮದುವೆ ಆದ್ಮೇಲೆ ಶ್ರೀದೇವಿಯ ಜೀವನ ಕಷ್ಟಕರವಾಗಿತ್ತು. ಬೋನಿಯಿಂದಾಗಿ ಶ್ರೀದೇವಿ ತನ್ನ ಆಸ್ತಿಯನ್ನು ಮಾರಬೇಕಾಯಿತು'' ಎಂದಿದ್ದಾರೆ. ಮುಂದೆ ಓದಿರಿ...

ಶ್ರೀದೇವಿ ತಾಯಿಗೆ ಬೋನಿ ಕಂಡ್ರೆ ಆಗುತ್ತಿರಲಿಲ್ಲ.!

''ಶ್ರೀದೇವಿ ತಾಯಿಗೆ ಬೋನಿ ಕಪೂರ್ ಕಂಡ್ರೆ ಆಗುತ್ತಿರಲಿಲ್ಲ. ಬೋನಿಯನ್ನ ಶ್ರೀದೇವಿ ಮದುವೆ ಆಗುವುದು ಕೂಡ ಆಕೆಯ ತಾಯಿಗೆ ಇಷ್ಟ ಇರಲಿಲ್ಲ. ಎಷ್ಟೋ ಬಾರಿ, ಬೋನಿಯನ್ನ ಶ್ರೀದೇವಿ ತಾಯಿ ಕೆಟ್ಟದಾಗಿ ನಡೆಸಿಕೊಂಡಿದ್ದರು'' ಎಂದು ಸಂದರ್ಶನವೊಂದರಲ್ಲಿ ವೇಣುಗೋಪಾಲ್ ರೆಡ್ಡಿ ತಿಳಿಸಿದ್ದಾರೆ.

ಶ್ರೀದೇವಿ ಅಮ್ಮನಿಗೆ ಬೋನಿ ಕಪೂರ್ ಕಂಡ್ರೆ ಆಗ್ತಿರ್ಲಿಲ್ಲ!

ಬೋನಿ-ಶ್ರೀದೇವಿ ಮದುವೆ

''ಬೋನಿ ಜೊತೆ ಮದುವೆ ಆಗಲು ಶ್ರೀದೇವಿ ನಿರ್ಧಾರ ಮಾಡಿದ್ದರು'' - ವೇಣುಗೋಪಾಲ್ ರೆಡ್ಡಿ

ಶ್ರೀದೇವಿಯನ್ನ ಬೋನಿ ಕೈಹಿಡಿದಾಗ, ಮೊದಲ ಪತ್ನಿ ಮೋನಾಗಾದ ಆಘಾತ ಅಷ್ಟಿಷ್ಟಲ್ಲ.!

ಬೋನಿಗಾಗಿ ಆಸ್ತಿ ಮಾರಿದ್ದ ಶ್ರೀದೇವಿ

''ಕೆಲ ಸಿನಿಮಾಗಳಿಗೆ ಬಂಡವಾಳ ಹಾಕಿ, ಬೋನಿ ಕಪೂರ್ ಕೈ ಸುಟ್ಟುಕೊಂಡಿದ್ದರು. ಬೋನಿಗೆ ಲಕ್ಷಾಂತರ ರೂಪಾಯಿ ಲಾಸ್ ಆಗಿತ್ತು. ನಷ್ಟವನ್ನ ಭರಿಸಲು ತನ್ನ ಹೆಸರಿನಲ್ಲಿದ್ದ ಆಸ್ತಿಯನ್ನ ಶ್ರೀದೇವಿ ಮಾರಾಟ ಮಾಡಿದ್ದರು. ನೋವಿನಲ್ಲಿಯೇ ಬೋನಿ ಜೊತೆಗೆ ಶ್ರೀದೇವಿ ಜೀವನ ನಡೆಸಿದ್ದರು. ನೋವಿನಲ್ಲಿಯೇ ಶ್ರೀದೇವಿ ಸಾವನ್ನಪ್ಪಿದ್ದಾರೆ'' - ವೇಣುಗೋಪಾಲ್ ರೆಡ್ಡಿ

ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?

ಆರ್ಥಿಕ ಸಂಕಷ್ಟ ಎದುರಿಸಿದ್ದ ಶ್ರೀದೇವಿ

''ಶ್ರೀದೇವಿಗೆ ನೆಮ್ಮದಿ ಇರಲಿಲ್ಲ. ಮುಖದ ಮೇಲೆ ಮಂದಹಾಸ ಇದ್ದರೂ, ಶ್ರೀದೇವಿ ಮನಸ್ಸಿನಲ್ಲಿ ನೋವಿತ್ತು. ಕೆಲ ಸಿನಿಮಾಗಳನ್ನು ನಿರ್ಮಾಣ ಮಾಡಿ ಲಾಸ್ ಆಗಿದ್ರಿಂದ, ಶ್ರೀದೇವಿ ಹಾಗೂ ಬೋನಿ ಆರ್ಥಿಕ ಸಂಕಷ್ಟ ಎದುರಿಸಿದ್ದರು'' - ವೇಣುಗೋಪಾಲ್ ರೆಡ್ಡಿ

ಶ್ರೀದೇವಿ ಬದುಕಿನ ಕಹಿ ಸತ್ಯ ಅನಾವರಣ ಮಾಡಿದ ರಾಮ್ ಗೋಪಾಲ್ ವರ್ಮಾ

ಶ್ರೀದೇವಿ ಕಮ್ ಬ್ಯಾಕ್ ಮಾಡಲು ಕಾರಣ ಏನು.?

''ತನ್ನ ಆಸ್ತಿಯನ್ನೆಲ್ಲ ಮಾರಾಟ ಮಾಡಿ, ಬೋನಿ ಕಪೂರ್ ಮಾಡಿದ್ದ ಸಾಲವನ್ನ ಶ್ರೀದೇವಿ ತೀರಿಸಿದ್ದರು. ತಮ್ಮ ಜೀವನವನ್ನ ಸರಿ ದಾರಿಗೆ ತರುವ ಸಲುವಾಗಿ ಶ್ರೀದೇವಿ ಪುನಃ ಬಣ್ಣ ಹಚ್ಚಿದರು'' - ವೇಣುಗೋಪಾಲ್ ರೆಡ್ಡಿ

ವಿವಾದಗಳ ಸುಳಿಯಲ್ಲೇ ಒಂದಾಗಿದ್ದ ಶ್ರೀದೇವಿ-ಬೋನಿ ಕಪೂರ್

ಜಾಹ್ನವಿ-ಖುಷಿ ಬಗ್ಗೆ ಆತಂಕ

''ಬೋನಿ ಆನಾರೋಗ್ಯಕ್ಕೆ ಒಳಗಾಗಿದ್ದ ಕಾರಣ ಮಕ್ಕಳಾದ ಜಾಹ್ನವಿ ಹಾಗೂ ಖುಷಿ ಭವಿಷ್ಯದ ಬಗ್ಗೆ ಶ್ರೀದೇವಿ ಸದಾ ಆತಂಕ ವ್ಯಕ್ತಪಡಿಸುತ್ತಿದ್ದರು'' - ವೇಣುಗೋಪಾಲ್ ರೆಡ್ಡಿ

ಪ್ಲಾಸಿಕ್ ಸರ್ಜರಿಗೆ ಒಳಗಾಗಿದ್ದು ಸತ್ಯ

''ಕೆಲವು ಬಾರಿ ಶ್ರೀದೇವಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವುದು ಸತ್ಯ. ಅಮೇರಿಕಾಗೆ ತೆರಳಿ ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು'' - ವೇಣುಗೋಪಾಲ್ ರೆಡ್ಡಿ

ತಾಯಿಗೆ ತಪ್ಪು ಆಪರೇಷನ್

''ಅಮೇರಿಕಾದಲ್ಲಿ ಶ್ರೀದೇವಿ ತಾಯಿಗೆ ತಪ್ಪಾಗಿ ಆಪರೇಷನ್ ಮಾಡಲಾಗಿತ್ತು. ಹೀಗಾಗಿ, ಶ್ರೀದೇವಿ ತಾಯಿ ಹಾಸಿಗೆ ಹಿಡಿದಿದ್ದರು'' - ವೇಣುಗೋಪಾಲ್ ರೆಡ್ಡಿ

ಸಹೋದರಿಯರ ಕಿತ್ತಾಟ

''ತಪ್ಪಾಗಿ ಆಪರೇಷನ್ ಮಾಡಲಾಗಿದೆ ಎಂದು ಅರಿವಿಗೆ ಬಂದ ಕೂಡಲೆ, ಆಸ್ಪತ್ರೆ ವಿರುದ್ಧ ದೂರು ನೀಡಲಾಯಿತು. ಈ ಇಡೀ ಪ್ರಕ್ರಿಯೆಯಲ್ಲಿ ಶ್ರೀದೇವಿಗೆ ಧೈರ್ಯ ತುಂಬಿದ್ದು ಬೋನಿ ಕಪೂರ್. ಅಮೇರಿಕಾದ ಆಸ್ಪತ್ರೆಗೆ ನ್ಯಾಯಾಲಯ ದಂಡ ವಿಧಿಸಿತು. ಹಣ ಕಾಸಿನ ವಿಚಾರಕ್ಕೆ ಶ್ರೀದೇವಿ ಹಾಗೂ ಸಹೋದರಿ ಶ್ರೀಲತಾ ನಡುವೆ ಮನಸ್ತಾಪ ಮೂಡಿತು. ಕಾಲಕ್ರಮೇಣ ಎಲ್ಲವೂ ಸರಿ ಆಯ್ತು'' - ವೇಣುಗೋಪಾಲ್ ರೆಡ್ಡಿ

English summary
Sridevi has lead a painful life because of Boney Kapoor says her uncle Venugopal Reddy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada