For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಿರ್ಮಾಪಕಿ ವಿರುದ್ಧ ಪ್ರಕರಣ ದಾಖಲಿಸಿದ ನಟ ಸುನಿಲ್ ಶೆಟ್ಟಿ

  |

  ಕರ್ನಾಟಕ ಮೂಲದ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ಮಾಪಕಿ ವಿರುದ್ಧ ದೂರು ನೀಡಿದ್ದಾರೆ ಸುನಿಲ್.

  ಕೆಲವು ದಿನಗಳ ಹಿಂದಷ್ಟೆ ಪತ್ರಿಕೆಯೊಂದರಲ್ಲಿ ಸುನಿಲ್ ಶೆಟ್ಟಿ ಕುರಿತ ವರದಿ ಹಾಗೂ ಜಾಹೀರಾತು ಪ್ರಕಟವಾಗಿತ್ತು. ಸುನಿಲ್ ಶೆಟ್ಟಿ ಅವರು 'ವಿನೀತ್' ಹೆಸರಿನ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ ಎಂಬುದು ಆ ಸುದ್ದಿ. ಸುನಿಲ್ ಶೆಟ್ಟಿ ಅವರ ಪೋಸ್ಟರ್ ಒಂದನ್ನು ಸಹ ಪ್ರಕಟಿಸಲಾಗಿತ್ತು.

  ಆದರೆ ತಮ್ಮ ಅನುಮತಿ ಇಲ್ಲದೆ ತಮ್ಮ ಚಿತ್ರ ಪ್ರಕಟಿಸಿದ್ದಕ್ಕಾಗಿ ಸುನಿಲ್ ಶೆಟ್ಟಿ ಅವರು ಆ ಪತ್ರಿಕೆ ವಿರುದ್ಧ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದೇ ದೂರಿನಲ್ಲಿ ನಿರ್ಮಾಪಕಿ ಏಕ್ತಾ ಕಪೂರ್ ಒಡೆತನದ ನಿರ್ಮಾಣ ಸಂಸ್ಥೆಯು ತಮ್ಮ ಅನುಮತಿ ಇಲ್ಲದೆ ತಮ್ಮ ಚಿತ್ರವನ್ನು ಪ್ರಕಟಿಸಿದೆ, ಅಲ್ಲದೆ ನನ್ನ ಬಗ್ಗೆ ಸುಳ್ಳು ಸುದ್ದಿ ಹರಡಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  ಅಷ್ಟೇ ಅಲ್ಲದೆ, ಏಕ್ತಾ ಕಪೂರ್ ಅವರ ಸಂಸ್ಥೆಯು ತಾವು ಸುನಿಲ್ ಶೆಟ್ಟಿ ಅವರೊಟ್ಟಿಗೆ ಸಿನಿಮಾ ಮಾಡುತ್ತಿದ್ದು, ತಮಗೆ ಹಣದ ಅವಶ್ಯಕತೆ ಇದೆ ಎಂದು ಕೆಲವರ ಬಳಿ ಹಣ ಸಹ ವಸೂಲಿ ಮಾಡಿದೆ ಎಂದು ಸುನಿಲ್ ಶೆಟ್ಟಿ ಆರೋಪಿಸಿದ್ದಾರೆ.

  Recommended Video

  ರಜನಿಕಾಂತ್ ದಾಖಲೆ ಮುರಿದ ರಾಕಿ ಭಾಯ್ ಯಶ್ | Filmibeat Kannada

  ನಟಿ ಏಕ್ತಾ ಕಪೂರ್ ಅವರು ಬಾಲಾಜಿ ಟೆಲಿಪಿಲಮ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಹಿಂದಿ ಟಿವಿ ಜಗತ್ತಿನ ರಾಣಿಯೆಂದು ಏಕ್ತಾ ಅವರನ್ನು ಕರೆಯಲಾಗುತ್ತದೆ. ಹಲವಾರು ಟಿವಿ ಧಾರಾವಾಹಿ ನಿರ್ಮಿಸಿಸರುವ ಏಕ್ತಾ ಕೆಲವು ಸಿನಿಮಾಗಳು, ವೆಬ್ ಸರಣಿಗಳನ್ನು ಸಹ ನಿರ್ಮಾಣ ಮಾಡಿದ್ದಾರೆ.

  English summary
  Bollywood actor Sunil Shetty gave complaint against Ekta Kapoor's production house in Mumbai.
  Saturday, March 6, 2021, 0:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X