For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಸನ್ನಿ ಲಿಯೋನ್: ಲಾಸ್ ಏಂಜಲೀಸ್ ನಲ್ಲಿ ಜಾಲಿ ಟ್ರಿಪ್

  |

  ಹಿಂದಿ ಚಿತ್ರರಂಗ ಇತ್ತೀಚಿಗೆ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗುತ್ತಿದೆ. ಸಿನಿಮಾಗಳಿಗಿಂತ ಹೆಚ್ಚಾಗಿ ನೆಪೋಟಿಸಂ, ಬಾಲಿವುಡ್ ಮಾಫಿಯಾ, ಒಳಗಿನವರು ಮತ್ತು ಹೊರಗಿನವರು ಎನ್ನುವ ಕಿತ್ತಾಟ, ಹೀಗೆ ಬಾಲಿವುಡ್ ನಲ್ಲಿ ಬಿರುಗಾಳಿಯೇ ಎದ್ದಿದೆ. ಆದರೆ ನಟಿ ಸನ್ನಿ ಲಿಯೋನ್ ಮಾತ್ರ ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದೆ ಪತಿಯ ಜೊತೆ ಅಮೆರಿಕದಲ್ಲಿ ಆರಾಮಾಗಿ ಸಮಯ ಕಳೆಯುತ್ತಿದ್ದಾರೆ.

  ವಿಶ್ವದಾದ್ಯಂತ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ನಟಿ ಸನ್ನಿ ಲಿಯೋನ್ ಇದೀಗ ಹೊಸ ಕಾರನ್ನು ಖರೀದಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೊಸ ಕಾರಿನಲ್ಲಿ ಪತಿಯ ಜೊತೆ ಜಾಲಿ ಟ್ರಿಪ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ..

  ಕಾಲೇಜಿನ ಮೆರಿಟ್ ಪಟ್ಟಿಯಲ್ಲಿ ಸನ್ನಿ ಲಿಯೋನ್ ಟಾಪರ್: ಮತ್ತೆ ಕಾಲೇಜಿಗೆ ಹೋಗ್ತಾರಾ ಸನ್ನಿ?ಕಾಲೇಜಿನ ಮೆರಿಟ್ ಪಟ್ಟಿಯಲ್ಲಿ ಸನ್ನಿ ಲಿಯೋನ್ ಟಾಪರ್: ಮತ್ತೆ ಕಾಲೇಜಿಗೆ ಹೋಗ್ತಾರಾ ಸನ್ನಿ?

   ದುಬಾರಿ ಮಾಸೆರಾಟಿ ಕಾರು ಖರೀದಿಸಿದ ಸನ್ನಿ ಲಿಯೋನ್

  ದುಬಾರಿ ಮಾಸೆರಾಟಿ ಕಾರು ಖರೀದಿಸಿದ ಸನ್ನಿ ಲಿಯೋನ್

  ಸನ್ನಿ ಲಿಯೋನ್ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿವೆ. ಇದೀಗ ಮತ್ತೊಂದು ದುಬಾರಿ ಕಾರು ಸನ್ನಿ ಮನೆಗೆ ಎಂಟ್ರಿ ಕೊಟ್ಟಿದೆ. ವಿಶ್ವದ ಅತೀ ಪ್ರಖ್ಯಾತ ಬ್ರಾಂಡ್ ಗಳಲ್ಲಿ ಒಂದಾಗಿರುವ ಇಟಲಿಯ ಮಾಸೆರಾಟಿ ಗಿಬ್ಲಿ ಸೆಡಾನ್ ಕಾರನ್ನು ಖರೀದಿಸಿದ್ದಾರೆ. ಇದು ಸನ್ನಿ ಲಿಯೋನ್ ಗೆ ತುಂಬಾ ಇಷ್ಟವಾದ ಕಾರಂತೆ.

   ಸನ್ನಿ ಲಿಯೋನ್ ಇಷ್ಟದ ಕಾರು

  ಸನ್ನಿ ಲಿಯೋನ್ ಇಷ್ಟದ ಕಾರು

  ಕಾರನ್ನು ತೆಗೆದುಕೊಳ್ಳುವ ಮುನ್ನ ಸನ್ನಿ ಲಿಯೋನ್ ಮಾಸೆರಾಟಿ ಶೋ ರೂಮ್ ನಿಂದ ವಿಡಿಯೋ ಮಾಡಿ ಸಂತಸ ಹಂಚಿಕೊಂಡಿದ್ದರು. ಬಳಿಕ ಕಾರು ಖರೀದಿಸಿದ ಖುಷಿಯನ್ನು ಹಂಚಿಕೊಂಡಿದ್ದಾರೆ. ಬಿಳಿ ಬಣ್ಣದ ಕಾರಿನ ಜೊತೆಗೆ ಪೋಸ್ ನೀಡಿರುವ ಸನ್ನಿ, 'ಪ್ರತೀ ಬಾರಿ ಈ ಕಾರನ್ನು ಓಡಿಸುವಾಗ ತುಂಬಾ ಸಂತಸವಾಗುತ್ತೆ' ಎಂದು ಹೇಳಿದ್ದಾರೆ.

  ಸುದೀಪ್ ಜೊತೆ ಹೆಜ್ಜೆ ಹಾಕಲು ಮತ್ತೆ ಕನ್ನಡಕ್ಕೆ ಬರ್ತಿದ್ದಾರಂತೆ ಸನ್ನಿ ಲಿಯೋನ್ಸುದೀಪ್ ಜೊತೆ ಹೆಜ್ಜೆ ಹಾಕಲು ಮತ್ತೆ ಕನ್ನಡಕ್ಕೆ ಬರ್ತಿದ್ದಾರಂತೆ ಸನ್ನಿ ಲಿಯೋನ್

   ಲಾಸ್ ಏಂಜಲೀಸ್ ನಲ್ಲಿ ನೆಲೆಸಿರುವ ಸನ್ನಿ

  ಲಾಸ್ ಏಂಜಲೀಸ್ ನಲ್ಲಿ ನೆಲೆಸಿರುವ ಸನ್ನಿ

  ನಟಿ ಸನ್ನಿ ಲಿಯೋನ್ ಮೇ ತಿಂಗಳಲ್ಲಿ ಮಕ್ಕಳ ಜೊತೆ ಲಾಸ್ ಏಂಜಲೀಸ್ ಗೆ ತೆರಳಿದ್ದಾರೆ. ಸನ್ನಿ ಲಿಯೋನ್ ಕುಟುಂಬ ಲಾಸ್ ಏಂಜಲೀಸ್ ನಲ್ಲಿದೆ. ಲಾಕ್ ಡೌನ್ ಕೊಂಚ ಸಡಿಲಿಕೆ ಆಗುತ್ತಿದ್ದಂತೆ ಸನ್ನಿ ಭಾರತದಿಂದ ಲಾಸ್ ಏಂಜಲೀಸ್ ಗೆ ಪಯಣ ಬೆಳೆಸಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಪಡ್ಡೆ ಯುವಕರ ನಿದ್ದೆ ಗೆಡಿಸುತ್ತಿದ್ದಾರೆ.

  BiggBoss ಗೆದ್ಮೆಲೆ ಪ್ರಥಮ ಒಳ್ಳೆ ಕೆಲಸ | Olle Hudga Pratham | Filmibeat Kannada
   ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸನ್ನಿ

  ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸನ್ನಿ

  ನೀಲಿ ತಾರೆಯಾಗಿ ಗುರುತಿಸಿಕೊಂಡಿದ್ದ ಸನ್ನಿ ಬಳಿಕ ಬೆತ್ತಲೆ ಲೋಕಕ್ಕೆ ಗುಡ್ ಬೈ ಹೇಳಿ, ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ, ಸಿನಿಮಾ, ಐಟಂ ಹಾಡು ಅಂತ ಬಾಲಿವುಡ್ ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಇತ್ತೀಚಿಗೆ ಸನ್ನಿ ಲಿಯೋನ್ ಅಭಿನಯಕ್ಕಿಂತ ಹೆಚ್ಚಾಗಿ ಐಟಂ ಹಾಡುಗಳ ಮೂಲಕ ಭಾರತೀಯ ಸಿನಿಮಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

  English summary
  Bollywood Actress Sunny Leone purchased new Maserati car in Los Angeles. She shares a new car photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X