»   » ದುಬಾರಿ ಕಾರ್ ಖರೀದಿಸಿದ ಮಾದಕ ತಾರೆ, ಸನ್ನಿ ಬಳಿಯಿರುವ ಕಾರ್ ಗಳೆಷ್ಟು?

ದುಬಾರಿ ಕಾರ್ ಖರೀದಿಸಿದ ಮಾದಕ ತಾರೆ, ಸನ್ನಿ ಬಳಿಯಿರುವ ಕಾರ್ ಗಳೆಷ್ಟು?

Posted By:
Subscribe to Filmibeat Kannada

ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್ ಗೆ ಕಾರ್ ಗಳಂದ್ರೆ ತುಂಬ ಕ್ರೇಜ್. ತಮ್ಮ ಗ್ಯಾರೇಜ್ ನಲ್ಲಿ ಬಗೆ ಬಗೆಯ ಕಾರ್ ಗಳನ್ನ ಸಂಗ್ರಹಿಸಿ ಇಟ್ಟಿದ್ದಾರೆ. ಈಗ ಸನ್ನಿ ಲಿಯೋನ್ ಕಾರ್ ಗ್ಯಾರೇಜ್ ಗೆ ಮತ್ತೊಂದು ಹೊಸ ಕಾರು ಬಂದು ಸೇರಿದೆ.

ಅಂದ್ಹಾಗೆ, ಇದು ಭಾರತ ದೇಶದ ಕಾರ್ ಅಲ್ಲ. ವಿದೇಶದ ಕಾರು. ಈ ಕಾರಿನ ಬಗ್ಗೆ ವಿಶೇಷ ಒಲವು ಹೊಂದಿದ್ದ ಸನ್ನಿ ತುಂಬಾ ಇಷ್ಟ ಪಟ್ಟು ಖರೀದಿಸಿದ್ದಾರೆ. ಈ ಕಾರಿನ ಬೆಲೆ ದುಬಾರಿ ಆಗಿದ್ದು, ಕೋಟಿಗಿಂತ ಹೆಚ್ಚು ಕೊಟ್ಟು ಕೊಂಡು ಕೊಂಡಿದ್ದಾರೆ.

ಅಷ್ಟಕ್ಕೂ, ಸನ್ನಿ ಖರೀದಿಸಿರುವ ಹೊಸ ಕಾರ್ ಯಾವುದು? ಅಷ್ಟು ದುಬಾರಿ ಕಾರ್ ನ್ನ ಎಷ್ಟು ಬೆಲೆಗೆ ಕೊಂಡುಕೊಂಡಿದ್ದಾರೆ? ಮುಂದೆ ಓದಿ.....

ಮೆಸರಾಟಿ ಗಿಬ್ಲಿ (maserati ghibli)

ಸನ್ನಿ ಲಿಯೋನ್ ಖರೀದಿಸಿರುವ ದುಬಾರಿ ಕಾರು 'ಮೆಸರಾಟಿ ಗಿಬ್ಲಿ' (maserati ghibli). ಇದರ ಬೆಲೆ ಭಾರತದಲ್ಲಿ ಸುಮಾರು 1.36 ಕೋಟಿ ರೂಪಾಯಿ. ಇದು ಪೆಟ್ರೊಲ್ ಕಾರು ಎಂಬುದು ವಿಶೇಷ. ಕಪ್ಪು ಬಣ್ಣದ ಮೆಸರಾಟಿ ಗಿಬ್ಲಿ ಕಾರ್ ನ್ನ ಖರೀದಿಸಿದ ಸಂತಸವನ್ನ ತಮ್ಮ ಟ್ವಿಟ್ಟವರ್ ನಲ್ಲಿ ಸನ್ನಿ ಲಿಯೋನ್ ಹಂಚಿಕೊಂಡಿದ್ದಾರೆ.

ನಟಿಯರ ಕಾರ್ ಕ್ರೇಜ್: ದಸರಾ ವಿಶೇಷ ಮನೆಗೆ ಬಂತು ಕಾಸ್ಟ್ಲೀ ಕಾರ್ ಗಳು

BMW-7 ಕಾರ್ ಗಿಫ್ಟ್ ಕೊಟ್ಟಿದ್ದ ಪತಿ

ವರ್ಷದ ಆರಂಭದಲ್ಲಿ ಸನ್ನಿ ಲಿಯೋನ್ ಪತಿ ಡ್ಯಾನಿಯಲ್, ಬಿಳಿ ಬಣ್ಣದ 'BMW-7' ಕಾರನ್ನ ಸನ್ನಿ ಲಿಯೋನ್ ಗೆ ಉಡುಗೊರೆಯಾಗಿ ನೀಡಿದ್ದರು.

ನಟಿ ಪ್ರಣೀತಾ ಸುಭಾಷ್ ಮನೆಗೆ ಬಂತು ಹೊಸ ಕಾರು.!

ಮೆಸರಾಟಿ ಮಾಡೆಲ್ ಕಾರ್ ಇದೆ

ಈಗಾಗಲೇ ಸನ್ನಿ ಲಿಯೋನ್ ಬಳಿ ಮೆಸರಾಟಿ ಮಾಡೆಲ್ ನಲ್ಲೊಂದು ಕಪ್ಪು ಬಣ್ಣದ ಕಾರ್ ಇದೆ. ಇದನ್ನ ಕೂಡ ತಮ್ಮ ಪತಿ ಡ್ಯಾನಿಯಲ್ ಗಿಫ್ಟ್ ಆಗಿ ಕೊಡಿಸಿದ್ದರು.

'ಹೆಬ್ಬುಲಿ ಕೃಷ್ಣ' ಮನೆಗೆ ಬಂತು ದುಬಾರಿ ಕಾರ್!

ಆಡಿ ಕಾರ್ ಅಂದ್ರೆ ಸನ್ನಿಗಿಷ್ಟ

ಸನ್ನಿ ಲಿಯೋನ್ ಬಳಿ ಒಂದಕ್ಕಿಂತ ಹೆಚ್ಚು ಆಡಿ ಕಾರ್ ಗಳಿವೆ. ಇತ್ತೀಚೆಗಷ್ಟೇ ಆಡಿ 5 ಕಾರನ್ನ ಹೊಸದಾಗಿ ಸನ್ನಿ ಖರೀದಿಸಿದ್ದರು. ಈ ಕಾರಿನಲ್ಲೇ ಓಡಾಡುತ್ತಿದ್ದರು.

ಅಮೂಲ್ಯ ಹುಟ್ಟುಹಬ್ಬಕ್ಕೆ ಪತಿ ಜಗದೀಶ್ ಕೊಟ್ಟ ದುಬಾರಿ ಗಿಫ್ಟ್!

English summary
Sunny Leone buys Maserati Ghibli luxury car worth over 1.36 crore in India.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada