For Quick Alerts
  ALLOW NOTIFICATIONS  
  For Daily Alerts

  ಮೊಟ್ಟ ಮೊದಲ ಬಾರಿಗೆ ನೀಲಿ ಚಿತ್ರ ಕಂಡಾಗ ಸನ್ನಿ ಬಿಕ್ಕಿಬಿಕ್ಕಿ ಅತ್ತಿದ್ದರು: ಎಂಥಾ ವಿಪರ್ಯಾಸ.!

  By Harshitha
  |

  ಎಂಥಾ ವಿಪರ್ಯಾಸ ನೋಡಿ... ಮೊಟ್ಟ ಮೊದಲ ಬಾರಿಗೆ ನೀಲಿ ಚಿತ್ರವನ್ನ ನೋಡಿದಾಗ ಸನ್ನಿ ಲಿಯೋನ್ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ. ಆದ್ರೆ, ಅದೇ ಸನ್ನಿ ಲಿಯೋನ್ ಮುಂದೆ 'ನೀಲಿ ಚಿತ್ರಗಳ ರಾಣಿ' ಆಗಿದ್ದು ವಿಧಿ ಲಿಖಿತ.

  ಸನ್ನಿ ಲಿಯೋನ್ ಇಂದು ಬಾಲಿವುಡ್ ನಟಿ. ಆದ್ರೆ, ಬಾಲಿವುಡ್ ಜಗತ್ತಿಗೆ ಕಾಲಿಡುವ ಮುನ್ನ ಆಕೆ ವಯಸ್ಕರ ಸಿನಿಲೋಕದ ಪಟ್ಟದರಸಿ.

  ಕೆನಡಾದಲ್ಲಿ ನೆಲೆಯೂರಿದ ಸಿಖ್ ಕುಟುಂಬದಲ್ಲಿ ಕರೆನ್ಜೀತ್ ಕೌರ್ ವೋಹ್ರಾ ಆಗಿ ಹುಟ್ಟಿದಾಕೆ ನೀಲಿ ಚಿತ್ರ ಜಗತ್ತಿಗೆ ಕಾಲಿಟ್ಟಿದ್ದು ಯಾಕೆ.? ಕರೆನ್ಜೀತ್ ಕೌರ್ ವೋಹ್ರಾ 'ಸನ್ನಿ ಲಿಯೋನ್' ಆಗಿದ್ದು ಹೇಗೆ.? ಎಂಬುದರ ಬಗ್ಗೆ ಸ್ವತಃ ಸನ್ನಿ ಲಿಯೋನ್ ತಮ್ಮ ಜೀವನಚರಿತ್ರೆ ಆಧಾರಿತ ವೆಬ್ ಸೀರೀಸ್ ಮೂಲಕ ಜಗಜ್ಜಾಹೀರು ಮಾಡಲಿದ್ದಾರೆ.

  'ಕರೆನ್ಜೀತ್ ಕೌರ್: ದಿ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್' ಎಂಬ ವೆಬ್ ಸೀರೀಸ್ ಮೂಲಕ ಸನ್ನಿ ಲಿಯೋನ್ ನಿಜ ಜೀವನದ ರಹಸ್ಯಗಳು ಬಟಾ ಬಯಲಾಗಲಿವೆ. ಈಗಾಗಲೇ ಈ ವೆಬ್ ಸೀರೀಸ್ ನ ಮೊದಲ ಆವೃತ್ತಿ ಪ್ರೀಮಿಯರ್ ಆಗಿದ್ದು, ಅದರಲ್ಲಿನ ಒಂದು ಸೀನ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಮುಂದೆ ಓದಿರಿ...

  ಯಾವುದು 'ಆ' ಸೀನ್.?

  ಯಾವುದು 'ಆ' ಸೀನ್.?

  ಚಿಕ್ಕವಯಸ್ಸಿನಲ್ಲಿದ್ದಾಗ ಮೊಟ್ಟ ಮೊದಲ ಬಾರಿಗೆ ಒಮ್ಮೆ ಪೋರ್ನ್ ವಿಡಿಯೋ ವೀಕ್ಷಿಸಿದ್ದರಂತೆ ಸನ್ನಿ ಲಿಯೋನ್. ಹಾಗೆ ನೋಡಿದ್ಮೇಲೆ, ಸನ್ನಿ ಲಿಯೋನ್ ಗೆ ತುಂಬಾ ಬೇಸರ ಆಗಿ ಬಿಕ್ಕಿಬಿಕ್ಕಿ ಅತ್ತುಬಿಟ್ಟಿದ್ದರಂತೆ.

  ಕಣ್ಣೀರಿಟ್ಟು ಭಾವುಕರಾದ ಸನ್ನಿ ಲಿಯೋನ್.! ಕಾರಣವೇನು.?ಕಣ್ಣೀರಿಟ್ಟು ಭಾವುಕರಾದ ಸನ್ನಿ ಲಿಯೋನ್.! ಕಾರಣವೇನು.?

  ಮಹಾ ಪಾಪ ಮಾಡಿಬಿಟ್ಟೆ

  ಮಹಾ ಪಾಪ ಮಾಡಿಬಿಟ್ಟೆ

  ''ಜೀವನದಲ್ಲಿ ಮೊದಲ ಬಾರಿಗೆ ನೀಲಿ ಚಿತ್ರ ನೋಡಿದಾಗ ಬಿಕ್ಕಿಬಿಕ್ಕಿ ಅತ್ತಿದ್ದೆ. ಮಹಾ ಪಾಪ ಮಾಡಿಬಿಟ್ಟೆ ಎಂದು ದುಃಖದಿಂದ ಬಾಬಾ ಗುರುನಾನಕ್ ಫೋಟೋ ಮೇಲೆ ಕೈ ಇಟ್ಟು ''ತಪ್ಪು ಮಾಡಿದೆ, ದಯವಿಟ್ಟು ಕ್ಷಮಿಸಿ'' ಎಂದು ಬೇಡಿಕೊಂಡಿದ್ದೆ'' ಎಂದು ಸನ್ನಿ ಲಿಯೋನ್ 'ಆ' ಸೀನ್ ಬಗ್ಗೆ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

  21ನೇ ವಯಸ್ಸಿನಲ್ಲಿ ಸನ್ನಿ ಲಿಯೋನ್ ಎದುರಿಸಿದ್ದಳು ಗಂಭೀರ ಸಮಸ್ಯೆ.!21ನೇ ವಯಸ್ಸಿನಲ್ಲಿ ಸನ್ನಿ ಲಿಯೋನ್ ಎದುರಿಸಿದ್ದಳು ಗಂಭೀರ ಸಮಸ್ಯೆ.!

  ಪೋರ್ನ್ ಜಾಲಕ್ಕೆ ಸನ್ನಿ ಲಿಯೋನ್ ಸಿಲುಕಿದ್ದು ಹೇಗೆ.?

  ಪೋರ್ನ್ ಜಾಲಕ್ಕೆ ಸನ್ನಿ ಲಿಯೋನ್ ಸಿಲುಕಿದ್ದು ಹೇಗೆ.?

  ತಮ್ಮ ಕುಟುಂಬದ ವಾಸ್ತವ, ಆರ್ಥಿಕ ಮುಗ್ಗಟ್ಟು, ಮಾನಸಿಕ ತುಮುಲ... ಇವೆಲ್ಲದರಿಂದ ಪೋರ್ನ್ ಜಾಲಕ್ಕೆ ಸನ್ನಿ ಲಿಯೋನ್ ಸಿಲುಕಿದ್ದು ಹೇಗೆ ಎಂಬುದರ ಬಗ್ಗೆ 'ಕರೆನ್ಜೀತ್ ಕೌರ್: ದಿ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್' ವೆಬ್ ಸೀರೀಸ್ ನಲ್ಲಿ ವಿವರಣೆ ಇದೆ. ಇದರಲ್ಲಿ ತಮ್ಮ ಪಾತ್ರವನ್ನ ಸನ್ನಿ ಲಿಯೋನ್ ತಾವೇ ನಿರ್ವಹಿಸಿರುವುದು ವಿಶೇಷ.

  ಲೈಟರ್ ಹಿಡಿದು ಟೀ ಮಾಡಲು ಹೋದ ಸನ್ನಿ ಲಿಯೋನ್ ಕಂಡು ಆಡಿಕೊಂಡವರೇ ಹೆಚ್ಚು!ಲೈಟರ್ ಹಿಡಿದು ಟೀ ಮಾಡಲು ಹೋದ ಸನ್ನಿ ಲಿಯೋನ್ ಕಂಡು ಆಡಿಕೊಂಡವರೇ ಹೆಚ್ಚು!

  ಸಹೋದರನ ಹೆಸರು ಬಳಕೆ

  ಸಹೋದರನ ಹೆಸರು ಬಳಕೆ

  ಅಸಲಿಗೆ, 'ಸನ್ನಿ' ಎನ್ನುವುದು ಕರೆನ್ಜೀತ್ ಕೌರ್ ಸಹೋದರನ ಹೆಸರು. ನೀಲಿ ಜಗತ್ತಿನಲ್ಲಿ ಆಕೆ ತನ್ನ ನಿಜವಾದ ಹೆಸರನ್ನು ಮರೆಮಾಚಿ ಸಹೋದರನ ಹೆಸರು ಬಳಸಿಕೊಂಡು ಮಿನುಗಲು ಆರಂಭಿಸಿದರು.

  English summary
  Did you know: Sunny Leone cried after watching porn movie for the first time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X