For Quick Alerts
  ALLOW NOTIFICATIONS  
  For Daily Alerts

  ಸನ್ನಿ ಲಿಯೋನ್‌ಗೆ ಯಾಕೆ ಸ್ಟಾರ್ ನಟರ ಪತ್ನಿಯರ ಮೇಲೆ ಕೆಂಡದಷ್ಟು ಕೋಪ?

  By Harshitha
  |

  'ರಯೀಸ್' ಸಿನಿಮಾದಲ್ಲಿ ಬಳ್ಳಿಯಂತೆ ಸೊಂಟ ಬಳುಕಿಸಿದ ಬಳಿಕ 'ನೀಲಿ ಚಿತ್ರಗಳ ರಾಣಿ' ಸನ್ನಿ ಲಿಯೋನ್ ಬಾಲಿವುಡ್ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿದ್ದೇ ತೀರಾ ಅಪರೂಪ.

  ನಿಜ ಹೇಳ್ಬೇಕು ಅಂದ್ರೆ, ತೊಂಡೆ ಹಣ್ಣಿನಂಥ ಚೆಲುವೆ ಸನ್ನಿ ಲಿಯೋನ್ ಗೆ ಬಾಲಿವುಡ್ ನಲ್ಲಿ ಬೇಡಿಕೆ ಕಮ್ಮಿ ಅಗುತ್ತಿದೆ. ಆಕೆಯ ಕೈಯಲ್ಲಿ ಸದ್ಯ ಮೂರ್ನಾಲ್ಕು ಚಿತ್ರಗಳಿದ್ರೆ ಹೆಚ್ಚು.!

  'ಹೀಗ್ಯಾಕೆ.?' ಅಂತ ಪ್ರಶ್ನೆ ಮಾಡಿದರೆ, ನಟಿ ಸನ್ನಿ ಲಿಯೋನ್ ಮುನಿಸಿಕೊಳ್ಳುತ್ತಾರೆ... ಕೆಂಡದಷ್ಟು ಕೋಪ ಮಾಡಿಕೊಳ್ಳುತ್ತಾರೆ... ಅದು ಸ್ಟಾರ್ ನಟರ ಪತ್ನಿಯರ ಕಡೆ ಬೆಟ್ಟು ಮಾಡಿ ತೋರಿಸುತ್ತಾ.! ಕಾರಣ ಏನಪ್ಪಾ ಅಂದ್ರೆ....

  ಸ್ಟಾರ್ ನಟರ ಪತ್ನಿಯರು ಪರ್ಮಿಷನ್ ಕೊಡುತ್ತಿಲ್ಲ.!

  ಸ್ಟಾರ್ ನಟರ ಪತ್ನಿಯರು ಪರ್ಮಿಷನ್ ಕೊಡುತ್ತಿಲ್ಲ.!

  ಸನ್ನಿ ಲಿಯೋನ್ ಜೊತೆ ತೆರೆ ಹಂಚಿಕೊಳ್ಳಲು ಬಾಲಿವುಡ್ ನ ಪ್ರಖ್ಯಾತ ಸ್ಟಾರ್ ನಟರಿಗೆ ಅವರ ಪತ್ನಿಯರು ಪರ್ಮಿಷನ್ ಕೊಡುತ್ತಿಲ್ಲವಂತೆ. ಹೀಗಾಗಿ, ಸನ್ನಿ ಲಿಯೋನ್ ಗೆ ಉತ್ತಮ ಅವಕಾಶ ಸಿಗುತ್ತಿಲ್ಲವಂತೆ. ಹೀಗಂತ ಸ್ವತಃ ಸನ್ನಿ ಲಿಯೋನ್ ಬಾಯ್ಬಿಟ್ಟಿದ್ದಾರೆ.

  ಸನ್ನಿ ಲಿಯೋನ್ ಜೊತೆ ವರ್ಕ್ ಮಾಡಲು ಭಯ!

  ಸನ್ನಿ ಲಿಯೋನ್ ಜೊತೆ ವರ್ಕ್ ಮಾಡಲು ಭಯ!

  ''ಬಾಲಿವುಡ್ ನ ಹಲವು ನಟರು ನನ್ನ ಜೊತೆ ಕೆಲಸ ಮಾಡಲು ಭಯ ಪಡುತ್ತಾರೆ. ಅದಕ್ಕೆ ಕಾರಣ ಅವರ ಪತ್ನಿಯರೇ.!'' ಎಂದು ಕಣ್ಣು ಕೆಂಪಗೆ ಮಾಡಿಕೊಳ್ಳುತ್ತಾರೆ ಸನ್ನಿ ಲಿಯೋನ್

  ನನಗೆ ನಿಮ್ಮ ಗಂಡ ಬೇಡ

  ನನಗೆ ನಿಮ್ಮ ಗಂಡ ಬೇಡ

  ''ನನಗೆ ನಿಮ್ಮ ಗಂಡ ಬೇಡ. ನನಗೂ ಪತಿ ಇದ್ದಾರೆ. ನಾನು ನನ್ನ ಪತಿಯನ್ನ ಪ್ರೀತಿಸುತ್ತೇನೆ. ನನ್ನ ಎಲ್ಲ ಆಸೆಗಳನ್ನ ಈಡೇರಿಸುವ ಶಕ್ತಿ ನನ್ನ ಪತಿಗಿದೆ. ನನ್ನ ಕೆಲಸ ಮುಗಿದ ಕೂಡಲೆ ನಾನು ನನ್ನ ಪತಿ ಜೊತೆ ಮನೆಗೆ ಹೋಗಲು ಬಯಸುತ್ತೇನೆ ಹೊರತು ನಿಮ್ಮ ಪತಿ ಜೊತೆ ಅಲ್ಲ'' - ಎಂದು ಸ್ಟಾರ್ ನಟರ ಪತ್ನಿಯರನ್ನ ಉದ್ದೇಶಿಸಿ ಬೇಸರದಿಂದ ನುಡಿಯುತ್ತಾರೆ ಸನ್ನಿ ಲಿಯೋನ್.

  ಅನುಮಾನ, ಅಭದ್ರತೆ ಯಾಕೆ.?

  ಅನುಮಾನ, ಅಭದ್ರತೆ ಯಾಕೆ.?

  ''ನಾನು ಈಗಾಗಲೇ ಕೆಲಸ ಮಾಡಿರುವ ಅನೇಕ ನಟರಿಗೆ ಮದುವೆ ಆಗಿದೆ. ನಾನು ನಟರಿಗಿಂತ ಅವರ ಪತ್ನಿಯರ ಜೊತೆಗೇ ಹೆಚ್ಚು ಕ್ಲೋಸ್ ಆಗಿದ್ದೆ. ಆದರೂ, ಅವರೆಲ್ಲ ನನ್ನ ಮೇಲೆ ಅನುಮಾನ ಪಡುತ್ತಿದ್ದರು. ಅಂಥವರಿಗೆಲ್ಲ ನಾನು ಹೇಳಲು ಬಯಸುವುದು ಒಂದೇ - ನನಗೆ ನಿಮ್ಮ ಪತಿ ಬೇಡ. ನನಗೆ ಕೆಲಸ ಬೇಕು'' ಎನ್ನುತ್ತಾರೆ ಸನ್ನಿ ಲಿಯೋನ್.

  ದೊಡ್ಡ ಕನಸಿದೆ, ಅದು ಈಡೇರುತ್ತಾ.?

  ದೊಡ್ಡ ಕನಸಿದೆ, ಅದು ಈಡೇರುತ್ತಾ.?

  ''ರಯೀಸ್' ಸಿನಿಮಾದ ಆಫರ್ ಬಂದಾಗ, ಅವರು ರಾಂಗ್ ನಂಬರ್ ಗೆ ಡಯಲ್ ಮಾಡಿರಬಹುದು ಎಂದು ಭಾವಿಸಿದ್ದೆ. ಆದ್ರೆ, ಅದು ನಿಜವೇ ಆಗಿತ್ತು. ಶಾರುಖ್ ಖಾನ್ ಜೊತೆ ಕೆಲಸ ಮಾಡುವುದು ನನ್ನ ಕನಸಾಗಿತ್ತು. ಅದು ನೆರವೇರಿತು. ಇನ್ನೂ ಅಮೀರ್ ಖಾನ್ ಹಾಗೂ ಸಲ್ಮಾನ್ ಖಾನ್ ರವರ ಸಿನಿಮಾಗಳಲ್ಲೂ ನಟಿಸುವ ಆಸೆ ಇದೆ. ಅದು ಈಡೇರುತ್ತೋ, ಇಲ್ವೋ ನೋಡಬೇಕು'' - ಸನ್ನಿ ಲಿಯೋನ್

  English summary
  Bollywood Actress Sunny Leone is furious with Wives of Bollywood leading Actors, for not allowing their Husbands to work with her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X