For Quick Alerts
  ALLOW NOTIFICATIONS  
  For Daily Alerts

  ಸಲಿಂಗಸ್ತ್ರೀಕಾಮಿ ಪಾತ್ರದಲ್ಲಿ ತಾರೆ ಸನ್ನಿ ಲಿಯೋನ್

  By ಉದಯರವಿ
  |

  ನೀಲಿ ಚಿತ್ರಗಳಲ್ಲಿ ಅಭಿನಯಿಸಿ ಅನುಭವ ಸಂಪಾದಿಸಿಕೊಂಡ ತಾರೆ ಸನ್ನಿ ಲಿಯೋನ್ ಈಗ ಬಾಲಿವುಡ್ ಚಿತ್ರರಂಗದಲ್ಲಿ ಠಿಕಾಣಿ ಹೂಡಿದ್ದಾರೆ. 'ಜಿಸ್ಮ್ 2' ಚಿತ್ರದ ಬಳಿಕ ಸನ್ನಿ ಅಭಿನಯಿಸುತ್ತಿರುವ ಚಿತ್ರ 'ರಾಗಿಣಿ ಎಂಎಂಎಸ್ 2'. ಈ ಚಿತ್ರದಲ್ಲಿನ ಸನ್ನಿ ಸಲಿಂಗಸ್ತ್ರೀಕಾಮಿ ಪಾತ್ರವನ್ನು ಪೋಷಿಸುತ್ತಿದ್ದಾರೆ.

  ತೆರೆಯ ಮೇಲೆ ಸನ್ನಿಗೆ ಸಾಥ್ ನೀಡುತ್ತಿರುವವರು ಕಿರುತೆರೆ ನಟಿ ಸಂಧ್ಯಾ ಮೃದುಲ್. ಇವರಿಬ್ಬರೂ ತುಂಬಾ ರೋಚಕವಾಗಿ ಅಭಿನಯಿಸಿದ್ದಾರೆ ಎಂಬ ಸುದ್ದಿ ಇದೆ. ಇವರಿಬ್ಬರೂ ಅಪ್ಪಿಕೊಳ್ಳುವುವ, ಚುಂಬಿಸಿಕೊಳ್ಳುವ ಕೆಲವು ಸನ್ನಿವೇಶಗಳನ್ನು ಇತ್ತೀಚೆಗೆ ಚಿತ್ರೀಕರಿಸಿಕೊಳ್ಳಲಾಗಿದೆ.

  ಆದರೆ ಚಿತ್ರದಲ್ಲಿ ಎಲ್ಲೂ ಅಸಭ್ಯ, ಅಶ್ಲೀಲ ಸನ್ನಿವೇಶಗಳು, ದೃಶ್ಯಗಳು ಇಲ್ಲ ಎಂದಿದ್ದಾರೆ ಬಾಲಾಜಿ ಮೋಷನ್ ಪಿಕ್ಚರ್ಸ್ ಸಿಇಓ ತನುಜ್ ಗಾರ್ಗ್. ರಾಗಿಣಿ ಎಂಎಂಎಸ್ ಚಿತ್ರದ ಮುಂದುವರಿದ ಭಾಗವಾಗಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ಮೇ 10,2013ಕ್ಕೆ ಚಿತ್ರ ತೆರೆಗೆ ಅಪ್ಪಳಿಸಲಿದೆ.

  ಈ ಚಿತ್ರಕ್ಕಾಗಿ ಸನ್ನಿ ಲಿಯೋನ್ ಒಂದು ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹಾರರ್ ಥ್ರಿಲ್ಲರ್ ಚಿತ್ರವಾಗಿರುವ ರಾಗಿಣಿ ಎಂಎಂಎಸ್ 2 ಚಿತ್ರಕ್ಕೆ ಭೂಷಣ್ ಪಟೇಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್.

  ರಾಗಿಣಿ ಎಂಎಂಎಸ್ ಚಿತ್ರದ ಬಳಿಕ ಸನ್ನಿ ಲಿಯೋನ್ ಕನ್ನಡ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ. ಸನ್ನಿಯನ್ನು ಕನ್ನಡಕ್ಕೆ ಕರೆತರುತ್ತಿರುವ ನಿರ್ಮಾಪಕ ಕೆ ಮಂಜು. ಕನ್ನಡ ಹಾಗೂ ಹಿಂದಿ ದ್ವಿಭಾಷಾ ಚಿತ್ರ ಇದಾಗಿದ್ದು ಸನ್ನಿಗೆ ರು.1.5 ಕೋಟಿ ಸಂಭಾವನೆ ನೀಡಲಾಗಿದೆಯಂತೆ.

  English summary
  Adult entertainment actress Sunny Leone is all set to do the unbelievable in her upcoming movie Ragini MMS 2. The last we heard was that actress Richa Chadda backing out of the film, courtesy some lesbian scenes with Ms Leone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X