»   » ಸಿನಿಮಾ ಆಯ್ಕೆಯಲ್ಲಿ ತಪ್ಪು ಹೆಜ್ಜೆಯಿಟ್ಟಿದ್ದ ಐಶ್ವರ್ಯ ರೈ

ಸಿನಿಮಾ ಆಯ್ಕೆಯಲ್ಲಿ ತಪ್ಪು ಹೆಜ್ಜೆಯಿಟ್ಟಿದ್ದ ಐಶ್ವರ್ಯ ರೈ

Posted By: ರಾಜೇಶ್ ಕಾಮತ್
Subscribe to Filmibeat Kannada

ಬಚ್ಚನ್ ಕುಟುಂಬದ ಸೊಸೆಯಾಗುವ ಮುನ್ನ ಮತ್ತು ನಂತರ ಕೂಡಾ ಐಶ್ವರ್ಯ ರೈ ಬಚ್ಚನ್ ಗೆ ಸಿನಿಮಾ ಅವಕಾಶಗಳು ತಾನಾಗಿಯೇ ಹುಡುಕಿಕೊಂಡು ಬರುತ್ತಿದ್ದವು, ಮತ್ತು ಈಗಲೂ ಬರುತ್ತಿವೆ.

ಹೆಣ್ಣು ಮಗುವಿನ ತಾಯಿಯಾದ ಮೇಲೆ ಅಂದರೆ ಐದು ವರ್ಷಗಳ ಲಾಂಗ್ ಗ್ಯಾಪಿನ ನಂತರ ಐಶ್ವರ್ಯ ಎರಡು ಸಿನಿಮಾಗೆ ಸಹಿ ಹಾಕಿದ್ದಾರೆ. ಇದರಲ್ಲಿ ಸಂಜಯ್ ಗುಪ್ತಾ ನಿರ್ದೇಶನದ ಜಸ್ಬಾ ಚಿತ್ರ ಕೂಡಾ ಒಂದು.

ಮದುವೆಗೆ ಮುನ್ನ ಮತ್ತು ನಂತರ ಕೂಡಾ ಐಶ್ವರ್ಯ ರೈ, ಸಿನಿಮಾ ಆಯ್ಕೆ ವಿಚಾರದಲ್ಲಿ ಕೆಲವೊಂದು ತಪ್ಪು ಹೆಜ್ಜೆಯನ್ನಿಟ್ಟು ಸೂಪರ್ ಹಿಟ್ ಚಿತ್ರದ ತಾರಾಗಣದಲ್ಲಿ ನಾನೂ ಒಬ್ಬಳಾಗಿದ್ದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಚಾನ್ಸ್ ಕಳೆದುಕೊಂಡಿದ್ದರು. (ಹಲವು ಭಾಷೆಗಳಿಗೆ ರಿಮೇಕ್ ಆದ ಚಿತ್ರಗಳು)

ಹಾಗಂತ, ಐಶ್ವರ್ಯ ಕೈಬಿಟ್ಟಿದ್ದ ಚಿತ್ರಗಳು ಹೊಸಬರ ಚಿತ್ರವಾಗಿರಲಿಲ್ಲ ಅಥವಾ ಸಂಭಾವನೆ ವಿಚಾರದಲ್ಲಿ ಐಶ್ವರ್ಯ ರಾಜಿ ಮಾಡಿಕೊಳ್ಳ ಬೇಕಾಗಿಯೂ ಇರಲಿಲ್ಲ.

ಐಶ್ವರ್ಯ ರೈ ರಿಜೆಕ್ಟ್ ಮಾಡಿದ ಕೆಲವೊಂದು ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಆ ಚಿತ್ರಗಳ ಪೈಕಿ ಕೆಲವೊಂದನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಭೂಲ್ ಭಲಯ್ಯಾ

ಐದಾರು ಭಾಷೆಗೆ ರಿಮೇಕ್ ಆಗಿದ್ದ ಮೂಲ ಮಲಯಾಳಂ, ಕನ್ನಡದ ಆಪ್ತಮಿತ್ರ ಚಿತ್ರದ ಹಿಂದಿ ಅವತರಣಿಕೆ ಅಕ್ಷಯ್ ಕುಮಾರ್ ಪ್ರಮುಖ ಭೂಮಿಕೆಯಲ್ಲಿದ್ದ ಭೂಲ್ ಭಲಯ್ಯಾ ಚಿತ್ರಕ್ಕೂ ಐಶ್ವರ್ಯ ನಾಯಕಿಯಾಗಬೇಕಿತ್ತು. ಆ ಚಿತ್ರಕ್ಕೂ ಅವರು ನೋ ಎಂದಿದ್ದರು. ನಂತರ ಐಶ್ವರ್ಯ ಪಾತ್ರಕ್ಕೆ ವಿದ್ಯಾ ಬಾಲನ್ ಆಯ್ಕೆಯಾದರು.

ರಾಜಾ ಹಿಂದೂಸ್ಥಾನಿ

ಈ ಚಿತ್ರದ ನಿರ್ದೇಶಕ ಧರ್ಮೇಶ್ ಅವರಿಗೆ ತನ್ನ ಚಿತ್ರಕ್ಕೆ ಐಶ್ವರ್ಯ ನಾಯಕಿಯಾಗ ಬೇಕೆನ್ನುವ ಮಹದಾಸೆ ಇತ್ತಂತೆ. ಆದರೆ ಐಶ್ವರ್ಯ ಈ ಸಿನಿಮಾ ಆಫರ್ ಅನ್ನು ತಿರಸ್ಕರಿಸಿದ್ದರು. ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಅಮೀರ್ ಖಾನ್, ಕರಿಷ್ಮಾ ಕಪೂರ್ ಇದ್ದರು.

ಕುಚ್ ಕುಚ್ ಹೋತಾಹೇ

ಬಾಲಿವುಡ್ ಇತಿಹಾಸದಲ್ಲಿ ಬ್ಲಾಕ್ ಬಸ್ಟರ್ ಚಿತ್ರಗಳ ಪೈಕಿ ಕುಚ್ ಕುಚ್ ಹೋತಾಹೇ ಚಿತ್ರ ಕೂಡಾ. ಕಾಲ್ಶೀಟ್ ಇಲ್ಲ ಎನ್ನುವ ಕಾರಣಕ್ಕಾಗಿ ಐಶ್ವರ್ಯ ಚಿತ್ರಕ್ಕೆ ನೋ ಎಂದಿದ್ದರು. ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಶಾರೂಖ್, ಕಾಜಲ್, ರಾಣಿ ಮುಖರ್ಜಿ ಇದ್ದರು.

ದೋಸ್ತಾನ

ಅಭಿಷೇಕ್, ಐಶ್ವರ್ಯ ಮತ್ತು ಸೈಫ್ ಆಲಿ ಖಾನ್ ಚಿತ್ರದ ಪ್ರಮುಖ ತಾರಾಗಣದಲ್ಲಿ ಇರಬೇಕಾಗಿತ್ತು. ಇದಕ್ಕೂ ಐಶ್ವರ್ಯ ಒಲ್ಲೆ ಎಂದಿದ್ದರು, ಸೈಫ್ ಕೂಡಾ ಕೊನೇ ಗಳಿಗೆಯಲ್ಲಿ ಚಿತ್ರದ ತಾರಾಗಣದಿಂದ ಹೊರಬಿದ್ದರು. ಅಭಿಷೇಕ್ ಬಚ್ಚನ್, ಜಾನ್ ಅಬ್ರಹಾಂ ಮತ್ತು ಪ್ರಿಯಾಂಕ ಚೋಪ್ರಾ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು.

ಚಲ್ತೇ.. ಚಲ್ತೇ..

ಶಾರೂಖ್ ಪ್ರಮುಖ ತಾರಾಗಣದಲ್ಲಿದ್ದ ಈ ಚಿತ್ರಕ್ಕೆ ಐಶ್ವರ್ಯ ಆಯ್ಕೆಯಾಗಿದ್ದರೂ, ಶಾರೂಖ್ ಮತ್ತು ಐಶ್ವರ್ಯ ನಡುವೆ ಚಿತ್ರದ ಸಮಯದಲ್ಲಿ ಉಂಟಾದ ಮನಸ್ತಾಪದಿಂದ ಐಶ್ವರ್ಯ ಚಿತ್ರದಿಂದ ಹೊರನಡೆದಿದ್ದರು. ಕೊನೆಗೆ ರಾಣಿ ಮುಖರ್ಜಿ ಚಿತ್ರಕ್ಕೆ ಹಿರೋಯಿನ್ ಆದರು.

ಶಾರೂಖ್ ಜೊತೆಗಿನ ಮತ್ತೊಂದು ಚಿತ್ರ

ಶಾರೂಖ್ ಖಾನ್ ಜೊತೆಗಿನ ಮತ್ತೊಂದು ಚಿತ್ರ ವೀರ್ ಜರಾ ಚಿತ್ರಕ್ಕೂ ಐಶ್ವರ್ಯ ನಾಯಕಿಯಾಗಬೇಕಿತ್ತು. ಐಶ್ವರ್ಯ ಕಾಲ್ಶೀಟ್ ಇಲ್ಲದ ಕಾರಣ ಈ ಆಫರ್ ರಾಣಿ ಮುಖರ್ಜಿ ಮತ್ತು ಪ್ರೀತಿ ಜಿಂತಾ ಪಾಲಾಯಿತು.

ಅಶೋಕಾ

ಬಾಲಿವುಡ್ ಬಾದಶಾ ಶಾರೂಖ್ ಚಿತ್ರವೊಂದಕ್ಕೆ ಮತ್ತೆ ಐಶ್ವರ್ಯ ನೋ ಎಂದ ಉದಾಹರಣೆ ಅಶೋಕಾ ಚಿತ್ರ. ಸಂತೋಶ್ ಶಿವನ್ ನಿರ್ದೇಶನದ ಈ ಚಿತ್ರಕ್ಕೆ ಕೊನೆಗೆ ಕರೀನಾ ಕಪೂರ್, ಶಾರೂಖ್ ಖಾನಿಗೆ ನಾಯಕಿಯಾಗಿ ಆಯ್ಕೆಯಾದರು.

ಮುನ್ನಭಾಯ್ ಎಂಬಿಬಿಎಸ್

ಸಂಜಯ್ ದತ್ ವೃತ್ತಿ ಜೀವನದ ಬ್ಲಾಕ್ ಬಸ್ಟರ್ ಚಿತ್ರ ಮುನ್ನಭಾಯ್ ಎಂಬಿಬಿಎಸ್. ಈ ಚಿತ್ರದ ಆಫರ್ ಅನ್ನೂ ಐಶ್ವರ್ಯ ರಿಜೆಕ್ಟ್ ಮಾಡಿದ್ದರಂತೆ. ಶಾರೂಖ್ ಕೈ ನೋವಿನಿಂದಾಗಿ ಈ ಸಿನಿಮಾದಲ್ಲಿ ನಟಿಸಲು ಒಪ್ಪಲಿಲ್ಲ, ಐಶ್ವರ್ಯ ಕೂಡಾ ಚಿತ್ರದಲ್ಲಿ ನಟಿಸಲು ಕಾಲ್ಶೀಟ್ ನೀಡಲಿಲ್ಲವಂತೆ.

English summary
List of Super Hit Bollywood Film Roles Rejected By Aishwarya Rai Bachchan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada