For Quick Alerts
ALLOW NOTIFICATIONS  
For Daily Alerts

ಸೂಪರ್ ಸ್ಟಾರ್ ಶ್ರೀದೇವಿಗೆ 50

By Mahesh
|

ಹಿಂದಿ ಚಿತ್ರರಂಗದ ಮೊಟ್ಟಮೊದಲ ಸೂಪರ್ ಸ್ಟಾರ್ ಶ್ರೀದೇವಿಗೆ ಇಂದು 50ನೇ ಹುಟ್ಟುಹಬ್ಬದ ಸಂಭ್ರಮ. ದಕ್ಷಿಣ ಭಾರತದಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರೀದೇವಿ ಬಾಲಿವುಡ್ ಅಂಗಳದಲ್ಲಿ ಬೆಳೆದ ರೀತಿ ಅನುಕರಣೀಯ.

ಶ್ರೀದೇವಿ ಅಯ್ಯಪ್ಪನ್ ತಮಿಳು, ತೆಲುಗು, ಹಿಂದಿ, ಮಲೆಯಾಳಂ, ಹಿಂದಿ ಅಲ್ಲದೆ ಕೆಲವು ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ಕಾಮಿಡಿ, ಡ್ರಾಮಾ, ಸಾಹಸ, ಪ್ರಣಯ ಹೀಗೆ ನವರಸಗಳನ್ನು ಪ್ರದರ್ಶಿಸುವ ಪಾತ್ರಗಳಲ್ಲಿ ಶ್ರೀದೇವಿ ಲೀಲಾಜಾಲವಾಗಿ ನಟಿಸಿ ಸೈ ಎನಿಸಿಕೊಂಡವರು.

ಬಾಲ ಮುರುಗನ ಪಾತ್ರಧಾರಿಯಾಗಿ ಬಣ್ಣ ಹಚ್ಚಿದಾಗ ಶ್ರೀದೇವಿಗಿನ್ನೂ ನಾಲ್ಕರ ಪ್ರಾಯ. ನಂತರ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಂಡ ಶ್ರೀದೇವಿ ಬಾಲಿವುಡ್ ಗೆ ಕಾಲಿಟ್ಟಿದ್ದು 1975ರ ಜೂಲಿ ಚಿತ್ರದ ಮೂಲಕ. ತಮಿಳಿನಲ್ಲಿ ಮೂನ್ಡ್ರು ಮುಡಿಚ್ಚು ಚಿತ್ರದಲ್ಲಿ ನಟಿಸಿದರೂ ಶ್ರೀದೇವಿ ಪ್ರತಿಭೆ ಅನಾವರಣಗೊಂಡಿದ್ದು 16 ವಯಾಧಿನಿಲೆ(1977) ನಂತರ ಸಿಗಪ್ಪು ರೋಜಕ್ಕಲ್, ಮೀನ್ಡುಂ ಕೋಕಿಲ, ಮೂನ್ ಡ್ರಾಂ ಪಿರೈ, ವರುಮಾಯಿನ್ ನಿರಮ್ ಸಿವಪ್ಪು, ಪ್ರೇಮಾಭಿಷೇಕಂ, ಆಖರಿ ಪೋರಾಟಂ, ಜಗದೇಕ ವೀರುಡು ಅತಿಲೋಕ ಸುಂದರಿ, ಕ್ಷಣ ಕ್ಷಣಂ ತನಕ ದಕ್ಷಿಣ ಭಾರತದಲ್ಲಿ ಅಗ್ರ ನಾಯಕಿಯಾಗಿ ಮೆರೆದರು.

ಕಮಲ್ ಹಾಸನ್ ಹಾಗೂ ಶ್ರೀದೇವಿ ಜೋಡಿ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿ ಕಾಂತ್ ವಿಲನ್ ರೋಲ್ ಮಾಡಿದ್ದರೆ ಸಾಕು ಜನ ಮುಗಿ ಬಿದ್ದು ಚಿತ್ರಮಂದಿರಕ್ಕೆ ಬರುತ್ತಿದ್ದರು. ನಾಯಕಿಯಾಗಿ ಸೊಲ್ವಾ ಸಾವನ್ (1978) ಚಿತ್ರದಲ್ಲಿ ಕಾಣಿಸಿಕೊಂಡರೂ ಶ್ರೀದೇವಿ ಚಿತ್ರ ಹಿಟ್ ಆಗಿದ್ದು 'ಜಂಪಿಂಗ್ ಜಾಕ್' ಜಿತೇಂದ್ರ ಜೋಡಿಯ ಹಿಮ್ಮತ್ ವಾಲ ಚಿತ್ರದ ಮೂಲಕ. ಮುಂದೆ ಹಿಂದಿ ಚಿತ್ರರಂಗ ಆಳಿದ್ದು, ಬೋನಿ ಕಪೂರ್ ಜತೆ ಮದುವೆ, ಮಕ್ಕಳು, ಚಿತ್ರರಂಗದಿಂದ ದೂರಾಗಿದ್ದು ಇನ್ನಷ್ಟು ವಿಷಯ ಇಲ್ಲಿದೆ ತಪ್ಪದೇ ನೋಡಿ...

ಮೊದಲ ಮಹಿಳಾ ಸ್ಟಾರ್

ಮೊದಲ ಮಹಿಳಾ ಸ್ಟಾರ್

ವಕ್ತ್ ಕಿ ಅವಾಜ್, ಚಾಂದಿನಿ, ಸದ್ಮಾ, ನಗೀನಾ, ಚಾಲ್ ಬಾಜ್, ಲಮ್ಹೆ, ಖುದಾ ಗವಾ, ಗುಮ್ರಾ, ಲಾಡ್ಲಾ, ಜುದಾಯಿಮುಂತಾದ ಚಿತ್ರಗಳು ಶ್ರೀದೇವಿಗೆ ಹೆಸರು ತಂದು ಕೊಟ್ಟಿತು. 2012ರಲ್ಲಿ 15 ವರ್ಷಗಳ ಅಂತರದ ನಂತರ ಮತ್ತೆ ಬಣ್ಣ ಹಚ್ಚಿದ ಶ್ರೀದೇವಿ ಇಂಗ್ಲೀಷ್ ವಿಂಗ್ಲೀಷ್ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡು ಯಶಸ್ವಿಯಾದರು. ಸಿಎನ್ ಎನ್ ಐಬಿಎನ್ ನ ಭಾರತದ ಶ್ರೇಷ್ಠ 100 ನಟಿಯರ ಪಟ್ಟಿಯಲ್ಲಿ ಶ್ರೀದೇವಿ ಕಾಣಿಸಿಕೊಂಡಿದ್ದಾರೆ.

ಕುಟುಂಬ, ಮದುವೆ, ಮಕ್ಕಳು

ಕುಟುಂಬ, ಮದುವೆ, ಮಕ್ಕಳು

1963ರ ಆಗಸ್ಟ್ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ರಾಜೇಶ್ವರಿ-ಅಯಪ್ಪನ್ ದಂಪತಿಗೆ ಶ್ರೀದೇವಿ ಜನಿಸಿದರು. ಅಯ್ಯಪ್ಪನ್ ವೃತ್ತಿಯಲ್ಲಿ ವಕೀಲರು. 1996ರಲ್ಲಿ ನಿರ್ಮಾಪಕ ಬೋನಿ ಕಪೂರ್ ಮದುವೆಯಾದ ಶ್ರೀದೇವಿ ಜಾಹ್ನವಿಯನ್ನು ಪುತ್ರಿಯಾಗಿ ಪಡೆದ ಮೇಲೂ ಬೋನಿ ಕಪೂರ್ ತನ್ನ ಮೊದಲ ಪತ್ನಿ ಮೋನ ಶೌರಿ ಜತೆ ಸಂಬಂಧ ಇಟ್ಟುಕೊಂಡಿದ್ದರು.

ಶ್ರೀದೇವಿಗೆ ಜಾಹ್ನವಿ ಅಲ್ಲದೆ ಖುಷಿ ಎಂಬ ಇನ್ನೊಬ್ಬ ಪುತ್ರಿ ಇದ್ದಾರೆ.

ಕಿರುತೆರೆಯಲ್ಲಿ ಶ್ರೀದೇವಿ

ಕಿರುತೆರೆಯಲ್ಲಿ ಶ್ರೀದೇವಿ

ಮದುವೆ ನಂತರ ಕೆಲವು ಚಿತ್ರಗಳಲ್ಲಿ ನಟಿಸಿದರೂ ನಂತರ 2004-2005ರಲ್ಲಿ ಸಹಾರಾ ಟಿವಿಯಲ್ಲಿ ಮಾಲಿನಿ ಐಯರ್ ಪಾತ್ರದಲ್ಲಿ ಕಾಣಿಸಿಕೊಂಡರು. ಜೀನಾ ಇಸಿ ಕಾ ನಾಮ್ ಹೇ, ಕಬೂಮ್ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡರು. ಫಿಲಂಫೇರ್ ಹಾಗೂ ಕೆಲವು ಸಮಾರಂಭದಲ್ಲಿ ನೃತ್ಯ ಪ್ರದರ್ಶನ ಕೂಡಾ ನೀಡಿದ್ದರು.

ಸಲ್ಮಾನ್ ಖಾನ್ ಅವರ ದಸ್ ಕ ಧಮ್, ಅಮೀರ್ ಖಾನ್ ಅವರ ಸತ್ಯಮೇವ್ ಜಯತೇ ಕಾರ್ಯಕ್ರಮದಲ್ಲಿ ಶ್ರೀದೇವಿ ಕಾಣಿಸಿಕೊಂಡಿದ್ದರು.

ಫ್ಯಾಷನ್ ದಿವಾ

ಫ್ಯಾಷನ್ ದಿವಾ

ಶ್ರೀದೇವಿ ನನ್ನ ಹೀರೋ ಆಕೆ ನೋಡಿ ನನ್ನ ಸ್ಟೈಲ್ ಬದಲಾಯಿಸಿಕೊಂಡಿದ್ದೇನೆ ಎಂದು ಕರೀನಾ ಕಪೂರ್ ಹೇಳಿದ್ದರು. ಶ್ರೀದೇವಿ ಬಾಲಿವುಡ್ ಗೆ ಕಾಲಿಟ್ಟ ಮೇಲೆ ಸಂಪೂರ್ಣವಾಗಿ ತಮ್ಮ ಉಡುಗೆ ತೊಡುಗೆಗಳ ಶೈಲಿಯನ್ನು ಬದಲಾಯಿಸಿಕೊಂಡರು.

2012ರಲ್ಲಿ ಲಾಕ್ಮೆ ಫ್ಯಾಷನ್ ವೀಕ್ಸ್ ನಲ್ಲಿ ಬೂದು ಬಣ್ನದ ಶಾರ್ಟ್ ಹಾಕಿಕೊಂಡು ಬಂದು ದಿಟ್ಟತನ ಮೆರೆದರು. ನೀತಾ ಲುಲ್ಲಾ, ಕ್ವಿನೀ ಧೋಡಿ, ಪ್ರಿಯಾ ಚಿಂತನ್ ಅವರ ವಸ್ತ್ರ ವಿನ್ಯಾಸಕ್ಕೆ ಶ್ರೀದೇವಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ. HDIL couture ವೀಕ್ ನಲ್ಲಿ Showstopper ಆಗಿದ್ದರು. ಈಗಲೂ ಅವರ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಬಾಲಿವುಡ್ ಹೆಮ್ಮೆಯಿಂದ ಹೊಗಳುತ್ತದೆ.

ಮರು ಪ್ರವೇಶ

ಮರು ಪ್ರವೇಶ

ಸುಮಾರು 15 ವರ್ಷಗಳ ನಂತರ ಚಿತ್ರರಂಗಕ್ಕೆ ಮರು ಪ್ರವೇಶ ಬಯಸಿದ ಶ್ರೀದೇವಿ ಅವರು ಇಂಗ್ಲೀಷ್ ತಿಳಿಯದ ಮಧ್ಯಮ ವರ್ಗದ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಇಂಗ್ಲೀಷ್ ಭಾಷೆ ಕಲಿಯುವುದಷ್ಟೇ ಮುಖ್ಯವಲ್ಲ. ಭಾಷೆ ಜತೆಗೆ ಭಾವನೆ, ಕುಟುಂಬದ ಬಾಂಧವ್ಯಕ್ಕೂ ಬೆಲೆ ನೀಡಬೇಕು ಎಂದು ಚಿತ್ರ ಸಂದೇಶ ಸಾರಿತ್ತು. ಇಂಗ್ಲೀಷ್ ವಿಂಗ್ಲೀಷ್ ಚಿತ್ರ ಜನ ಮೆಚ್ಚುಗೆ ಗಳಿಸಿತು.

ಶ್ರೀದೇವಿಗೆ ರೇಖಾ ವಾಯ್ಸ್

ಶ್ರೀದೇವಿಗೆ ರೇಖಾ ವಾಯ್ಸ್

ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಾಗ ಶ್ರೀದೇವಿಗೆ ಹಿಂದಿ ಡಬ್ ಮಾಡುವಷ್ಟು ಭಾಷೆ ಮೇಲೆ ಹಿಡಿತವಿರಲಿಲ್ಲ. ಹೀಗಾಗಿ ನಟಿ ನಾಜ್ ಅವರು ಕೆಲಕಾಲ ವಾಯ್ಸ್ ಡಬ್ ಮಾಡುತ್ತಿದ್ದರು. ರೇಖಾ ಅವರು ಆಖ್ರೀ ರಾಸ್ತಾ ಚಿತ್ರದಲ್ಲಿ ಶ್ರೀದೇವಿಗೆ ದನಿ ದಾನ ಮಾಡಿದ್ದರು. ಚಾಂದಿನಿ ಚಿತ್ರದಲ್ಲಿ ವಾಯ್ ಡಬ್ ಮಾಡಿದ ಶ್ರೀದೇವಿ, ಶೀರ್ಷಿಕೆ ಗೀತೆಯನ್ನು ಹಾಡಿದರು. ಸದ್ಮಾ ಚಿತ್ರದಲ್ಲಿ ಕಮಲ್ ಜತೆ ಕೂಡಾ ಹಿನ್ನೆಲೆ ಗಾಯನ ಮಾಡಿದ್ದರು.

ಪದ್ಮ ಪ್ರಶಸ್ತಿ ಸ್ವೀಕಾರ

ಪದ್ಮ ಪ್ರಶಸ್ತಿ ಸ್ವೀಕಾರ

ಚಿತ್ರನಟಿ ಶ್ರೀದೇವಿ ಅವರು ಕಾಂಜೀವರಂ ಸೀರೆ ಧರಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. PTI Photo by Atul Yadav

ಮ್ಯಾಗಜೀನ್ ಗಾಗಿ

ಮ್ಯಾಗಜೀನ್ ಗಾಗಿ

ಪ್ರಸಿದ್ಧ ಫ್ಯಾಷನ್, ಸಿನಿ ಮ್ಯಾಗಜೀನ್ ಮುಖಪುಟಕ್ಕಾಗಿ ಫೋಟೋ ಶೂಟ್ ನಲ್ಲಿ ಶ್ರೀದೇವಿ

ಕರೀನಾ ಜತೆ

ಕರೀನಾ ಜತೆ

ತನ್ನ ನೆಚ್ಚಿನ ಹೀರೋ(ನಟಿ) ಜತೆ ಕರೀನಾ ಕಪೂರ್

ಕುಟುಂಬದ ಜತೆ

ಕುಟುಂಬದ ಜತೆ

ಪತಿ ಬೋನಿ ಕಪೂರ್ ಹಾಗೂ ಪುತ್ರಿ ಜಾಹ್ನವಿ ಜತೆ ಶ್ರೀದೇವಿ

ಕೆಬಿಸಿಯಲ್ಲಿ

ಕೆಬಿಸಿಯಲ್ಲಿ

ಅಮಿತಾಬ್ ಬಚ್ಚನ್ ನಿರೂಪಣೆಯ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಶ್ರೀದೇವಿ

ಪ್ರಿಯಾಂಕಾ ಜತೆ

ಪ್ರಿಯಾಂಕಾ ಜತೆ

ಜನಪ್ರಿಯ ನಟಿ ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಛೋಪ್ರಾ ಜತೆ ಶ್ರೀದೇವಿ

ಶ್ರೀದೇವಿ ಕುಣಿತ

ಶ್ರೀದೇವಿ ಕುಣಿತ

ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಜತೆ ಐಐಎಫ್ ಎ ಪ್ರಶಸ್ತಿ ಸಮಾರಂಭದಲ್ಲಿ ಶ್ರೀದೇವಿ ಕುಣಿತ

ಕುಟುಂಬದ ಜೊತೆ

ಕುಟುಂಬದ ಜೊತೆ

ಸಮಾರಂಭವೊಂದಕ್ಕೆ ಹೊರಡಲು ರೆಡಿಯಾಗಿರುವ ಶ್ರೀದೇವಿ ಬೋನಿ ಕಪೂರ್ ಕುಟುಂಬ

ಅಟಲ್ ಜೀ ಜತೆ

ಅಟಲ್ ಜೀ ಜತೆ

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ, ಮಾಜಿ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಜತೆ ಶ್ರೀದೇವಿ

ಹಾಲಿ ಡೇ ಮೂಡ್

ಹಾಲಿ ಡೇ ಮೂಡ್

ಕುಟುಂಬದ ಜತೆ ಹಾಲಿಡೇ ಆಚರಿಸುವಾಗ ಶ್ರೀದೇವಿ ಕಂಡಿದ್ದು ಹೀಗೆ

ಶುಭ ಹಾರೈಸಿ

ಶುಭ ಹಾರೈಸಿ

ನಿಮ್ಮ ನೆಚ್ಚಿನ ತಾರೆ ಶ್ರೀದೇವಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿ ಕಾಮೆಂಟ್ ಮಾಡಿ

English summary
This gorgeous actress can easily pass off as a 30-year-old. In fact it is hard for many to believe that Sridevi Boney Kapoor is already 50-years-old and celebrating her golden birthday on August 13, 2013.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more