»   » ವಿವಾದಿತ 'ಇಂದು ಸರ್ಕಾರ್' ಬಿಡುಗಡೆಗೆ ಸುಪ್ರೀಂ ಕೋರ್ಟ್‌ ಗ್ರೀನ್ ಸಿಗ್ನಲ್

ವಿವಾದಿತ 'ಇಂದು ಸರ್ಕಾರ್' ಬಿಡುಗಡೆಗೆ ಸುಪ್ರೀಂ ಕೋರ್ಟ್‌ ಗ್ರೀನ್ ಸಿಗ್ನಲ್

Posted By:
Subscribe to Filmibeat Kannada

ಮಧುರ್ ಭಂಡಾರ್ಕರ್ ನಿರ್ದೇಶನದ 'ಇಂದು ಸರ್ಕಾರ್' ಚಿತ್ರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ದಿವಂಗತ ಸಂಜಯ್ ಗಾಂಧಿ 'ಪುತ್ರಿ' ಎಂದು ಹೇಳಿಕೊಂಡು ಚಿತ್ರ ಬಿಡುಗಡೆಗೆ ತಡೆ ಕೋರಿ ಪ್ರಿಯಾ ಪೌಲ್ ಎಂಬುವವರು ನೀಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು (ಗುರುವಾರ) ವಜಾಗೊಳಿಸಿದೆ.

'ಇಂದು ಸರ್ಕಾರ್' ಬಿಡುಗಡೆಗೆ ವಿಘ್ನ, ಕೋರ್ಟ್ ಮೊರೆ ಹೋದ ಸಂಜಯ್ 'ಪುತ್ರಿ'

ತ್ರಿಸದಸ್ಯ ಪೀಠದ ನ್ಯಾಯಮೂರ್ತಿ ದೀಪಕ್ ಮಿಶ್ರ ರವರು, '1975-1977 ರ ಅವಧಿಯ ತುರ್ತು ಪರಿಸ್ಥಿತಿ ಆಧಾರಿತ 'ಇಂದು ಸರ್ಕಾರ್' ಚಿತ್ರವು ಕೇವಲ ಒಂದು 'ಕಲಾತ್ಮಕ ಅಭಿವ್ಯಕ್ತಿ' ಸ್ವತಂತ್ರದಡಿಯಲ್ಲಿ ನಿರ್ಮಿತವಾದ ಚಿತ್ರವಾಗಿದ್ದು, ಕಾನೂನಿನ ನಿಯಮಗಳನ್ವಯ ರಿಲೀಸ್ ಗೆ ತಡೆಯೊಡ್ಡಲು ಯಾವುದೇ ಸಮರ್ಥನೆಗಳು ಇಲ್ಲ' ಎಂದು ಹೇಳಿರುವುದು ಮೂಲಗಳಿಂದ ತಿಳಿದಿದೆ. ಆದ್ದರಿಂದ ಮೊದಲೇ ಉದ್ದೇಶಿಸಿದಂತೆ ನಾಳೆ ಚಿತ್ರ ಬಿಡುಗಡೆ ಆಗಲಿದೆ.

Supreme Court junks plea against Indu Sarkar, film to release tomorrow

ಕೆಲದಿನಗಳ ಹಿಂದೆಯೇ ಸಿಬಿಎಫ್‌ಸಿ ಸೂಚಿಸಿದಂತೆ 12 ದೃಶ್ಯಗಳಿಗೆ ಕತ್ತರಿ ಹಾಕಲಾಗಿದ್ದು, ಚಿತ್ರದಲ್ಲಿ ಮತ್ಯಾವುದೇ ಆಕ್ಷೇಪಾರ್ಹ ಅಂಶಗಳಿಲ್ಲ ಎಂದು ಮಧುರ್ ಭಂಡಾರ್ಕರ್ ಪರ ವಕೀಲರು ವಾದ ಮಾಡಿದ್ದಾರೆ.

ದಿವಂಗತ ಸಂಜಯ್ ಗಾಂಧಿ 'ಪುತ್ರಿ' ಎಂದು ಹೇಳಿಕೊಂಡು ಪ್ರಿಯಾ ಪೌಲ್ 'ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪುತ್ರ ಸಂಜಯ್ ಗಾಂಧಿ ಅವರ ಇಮೇಜ್ ಗೆ ಧಕ್ಕೆ ಉಂಟಾಗುವ ಅಂಶಗಳು ಇವೆ' ಎಂದು ಆರೋಪಿಸಿ ಚಿತ್ರ ತಡೆಗಾಗಿ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ 24 ರಂದೇ ವಜಾಗೊಳಿಸಿತ್ತು. ನಂತರ ಪ್ರಿಯಾ ಪೌಲ್ ಈ ವಿಚಾರವಾಗಿ ಮತ್ತೆ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.

ಅಂತೂ ಈಗ 'ಇಂದು ಸರ್ಕಾರ್' ಚಿತ್ರ ಯಾವುದೇ ಕಾನೂನು ಅಡೆತಡೆಗಳು ಇಲ್ಲದೇ ನಾಳೆ ಬಿಡುಗಡೆ ಆಗುತ್ತಿದೆ. ಈ ಬಗ್ಗೆ ಸಿಬಿಎಫ್‌ಸಿ ಮರುಪರಿಶೀಲನಾ ಮಂಡಳಿಗೆ ನಿರ್ದೇಶಕ ಮಧುರ್ ಭಂಡಾರ್ಕರ್ ಧನ್ಯವಾದಗಳನ್ನು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಏನಾದರೂ ಮತ್ತೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳು ಇವೆಯೇ ಎಂಬುದಕ್ಕೆ ಕಾಲವೇ ಉತ್ತರಿಸಿಬೇಕು.

English summary
Supreme Court junks plea against 'Indu Sarkar', film to release tomorrow.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada