Don't Miss!
- News
ಕಿಚ್ಚ ಸುದೀಪ್ ಭೇಟಿಯ ಹಿಂದಿನ ಕಾರಣ ಬಹಿರಂಗಪಡಿಸಿದ ಡಿಕೆಶಿ: ಏನದು ಕುತೂಹಲಕರ ಸಂಗತಿ?
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾಳಿ ಪೋಸ್ಟರ್ ವಿವಾದ, ನಿರ್ದೇಶಕಿ ಲೀನಾ ಮಣಿಮೇಘಲೈ ಬಂಧಿಸದಂತೆ ತಡೆ
ಕಳೆದ ವರ್ಷ ಜುಲೈ ತಿಂಗಳಲ್ಲಿ ಕಾಳಿ ಸಿನಿಮಾ ಪೋಸ್ಟರ್ ಮೂಲಕ ಭಾರಿ ವಿವಾದ ಎಬ್ಬಿಸಿದ್ದ ಭಾರತ ಮೂಲದ ಕೆನಡಾದಲ್ಲಿ ನೆಲೆಸಿರುವ ಸಿನಿಮಾ ನಿರ್ದೇಶಕಿ ಲೀನಾ ಮಣಿಮೇಘಲೈ ಬಂಧನಕ್ಕೆ ತಡೆ ನೀಡಲಾಗಿದೆ.
ತಮಿಳುನಾಡು ಮೂಲದ ಲೀನಾ ಮಣಿಮೇಘಲೈ, 'ಕಾಳಿ' ಹೆಸರಿನ ಡಾಕ್ಯುಮೆಂಟರಿ ನಿರ್ದೇಶಿಸಲು ಯೋಜಿಸಿ ಡಾಕ್ಯುಮೆಂಟರಿಯ ಪೋಸ್ಟರ್ ಬಿಡುಗಡೆ ಮಾಡಿದ್ದರು. ಪೋಸ್ಟರ್‌ನಲ್ಲಿ ಸ್ವತಃ ತಾವೇ ಕಾಳಿಯಂತೆ ವೇಷ ಧರಿಸಿ, ಬೀಡಿ ಸೇದುತ್ತಿರುವಂತೆ ಚಿತ್ರ ತೆಗೆಸಿಕೊಂಡಿದ್ದರು. ಕಾಳಿ ದೇವತೆ ಒಂದು ಕೈಯಲ್ಲಿ ತ್ರಿಲಿಂಗಿಗಳ ಸಮಾನತೆಯ ಬಾವುಟವನ್ನು ಹಿಡಿದಂತೆಯೂ ಪೋಸ್ಟರ್ ಅನ್ನು ರೂಪಿಸಲಾಗಿತ್ತು.
ಕಾಳಿ ಮಾತೆ ಸಿಗರೇಟು ಸೇದುತ್ತಿರುವಂತೆ ಚಿತ್ರಿಸಿದ ಲೀನಾ ಮಣಿಮೇಘಲೈ ವಿರುದ್ಧ ದೇಶದ ಹಲವೆಡೆ ದೂರುಗಳು ದಾಖಲಾದವು. ಆದರೆ ಲೀನಾ, ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಪೋಸ್ಟರ್ ಪರವಾಗಿ ವಾದಿಸಿದ್ದರು.
ಇದೀಗ ಲೀನಾ, ತಮ್ಮ ಮೇಲೆ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಿದ್ದು, ''ನಾನು ಯಾರ ಭಾವನೆಗೂ ಧಕ್ಕೆ ತರುವ ಕಾರಣಕ್ಕೆ ಕಾಳಿಯನ್ನು ಹಾಗೆ ಚಿತ್ರಿಸಿಲ್ಲವೆಂದು, ಎಲ್ಲರನ್ನೂ ಒಳಗೊಳ್ಳುವ ಅರ್ಥ ನೀಡುವ ಕಾರಣ ಕಾಳಿ ಪೋಸ್ಟರ್ ಅನ್ನು ಹಾಗೆ ಚಿತ್ರಿಸಿದೆ'' ಎಂದು ಲೀನಾ ಹೇಳಿಕೆ ನೀಡಿದ್ದಾರೆ.
ಲೀನಾರ ಹೇಳಿಕೆ ದಾಖಲಿಸಿಕೊಂಡಿರುವ ಸುಪ್ರೀಂಕೋರ್ಟ್, ಲೀನಾರನ್ನು ಬಂಧಿಸದಂತೆ ತಡೆಯಾಜ್ಞೆ ಜಾರಿ ಮಾಡಿದೆ. ಹಾಗೂ ಲೀನಾ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಎಲ್ಲ ರಾಜ್ಯಗಳಿಗೂ ನೊಟೀಸ್ ಜಾರಿ ಮಾಡಿದ್ದು, ಎಲ್ಲ ಎಫ್‌ಐಆರ್ ಅನ್ನು ಒಂದು ಮಾಡಿ ದೂರು ದಾಖಲಿಸುವಂತೆ ಸೂಚಿಸಿದ್ದು, ಆ ಪ್ರಕ್ರಿಯೆಯ ಬಳಿಕ ಲೀನಾ, ಎಫ್‌ಐಆರ್ ರದ್ದಿಗೆ ಅರ್ಜಿ ಹಾಕಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ.
ಕಾಳಿ ವಿವಾದ ಎದ್ದಿದ್ದಾಗ ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ನಿರ್ದೇಶಕಿ ಲೀನಾ, ''''ನನ್ನ ಕಾಳಿ ಕ್ವೀರ್, ಆಕೆ ಸ್ವತಂತ್ರ್ಯ ಚೇತನ, ಆಕೆ ಪುರುಷ ಪ್ರಧಾನ ಪ್ರಭುತ್ವಕ್ಕೆ ಉಗಿಯುವವಳು, ಆಕೆ ಬಂಡವಾಳಶಾಹಿಯನ್ನು ನಿರ್ಮೂಲನೆ ಮಾಡುತ್ತಾಳೆ. ಆಕೆ ತನ್ನ ಸಾವಿರ ಕೈಗಳಿಂದ ಎಲ್ಲರನ್ನೂ ಅಪ್ಪಿಕೊಳ್ಳುತ್ತಾಳೆ ಎಂದಿರುವ ಲೀನಾ, ಮಾಧ್ಯಮದಲ್ಲಿ ಹೇಳಿರುವಂತೆ ''ಹಿಂದು ದೇವತೆ ಮೇಲೆ ಮಾಡಲಾಗುತ್ತಿರುವ ಸಿನಿಮಾ ಭಾರತದಲ್ಲಿ ದ್ವೇಷ ಹೆಚ್ಚಿಸಿದೆ' ಎಂದಿದ್ದರು. ಬಳಿಕ, ''ತೆಲುಗು ರಾಜ್ಯಗಳು, ತಮಿಳುನಾಡುಗಳಲ್ಲಿ ಕಾಳಿ ಜನಪದರ ದೇವರು, ಆಕೆ ಊರಿನ ಜನರ ಮೈಮೇಲೆ ಆವಾಹಿಸುತ್ತಾಳೆ, ಆಕೆ ಮಾಂಸ ತಿನ್ನುತ್ತಾಳೆ, ಗಾಂಜಾ ಸೇದುತ್ತಾಳೆ, ಕಳ್ಳು ಸಾರಾಯಿ ಕುಡಿಯುತ್ತಾಳೆ, ಊರ ಮಧ್ಯೆ ಮೂತ್ರ ಮಾಡುತ್ತಾಳೆ, ಮನಬಂದಂತೆ ನರ್ತಿಸುತ್ತಾಳೆ. ಅಂಥಹಾ ಕಾಳಿ ನನ್ನ ಸಿನಿಮಾಕ್ಕೆ ಸ್ಪೂರ್ತಿ. ಅಲ್ಲದೆ, ಕಾಳಿ ಯಾರ ಸ್ವತ್ತೂ ಅಲ್ಲ, ಆಕೆ ಮರಣದ ದೇವತೆ, ಆಕೆಯನ್ನು ಯಾರೂ ಸ್ವಾಧೀನಪಡಿಸಿಕೊಳ್ಳಲಾರರು'' ಎಂದಿದ್ದರು ಲೀನಾ, ಶಿವ ಪಾರ್ವತಿ ವೇಷ ತೊಟ್ಟವರು ಬೀಡಿ ಸೇದುತ್ತಿರುವ ಚಿತ್ರವನ್ನು ಲೀನಾ ಹಂಚಿಕೊಂಡಿದ್ದರು.