For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಅನ್ನು ಗೇಲಿ ಮಾಡಿದ ರಣ್ವೀರ್ ಸಿಂಗ್!? ಜಾಹೀರಾತು ನಿಷೇಧಕ್ಕೆ ಒತ್ತಾಯ

  |

  ನಟ ರಣ್ವೀರ್ ಸಿಂಗ್‌ ರ ಜಾಹೀರಾತು ಈಗ ಚರ್ಚೆಯ ವಿಷಯವಾಗಿದೆ. ಚಿಪ್ಸ್ ಜಾಹೀರಾತೊಂದರಲ್ಲಿ ರಣ್ವೀರ್ ಸಿಂಗ್, ದಿವಂಗತ ನಟ ಸುಶಾಂತ್ ಸಿಂಗ್ ಗೇಲಿ ಮಾಡಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

  ಚಿಪ್ಸ್ ಬ್ರ್ಯಾಂಡ್ ಒಂದರ ಜಾಹೀರಾತಿನಲ್ಲಿ ನಟ ರಣ್ವೀರ್ ಸಿಂಗ್, 'ಫೋಟಾನ್, ಆಲ್ಗೊರಿಥಮ್, ಏಲಿಯನ್ಸ್' ಇನ್ನೂ ಕೆಲವು ವಿಜ್ಞಾನ, ಬಾಹ್ಯಾಕಾಶ ಸಂಬಂಧಿ ಡೈಲಾಗ್ ಹೇಳುತ್ತಾರೆ. ಅದರೆ ರಣ್ವೀರ್‌ರ ಈ ಡೈಲಾಗ್ ಸುಶಾಂತ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ.

  ಸುಶಾಂತ್ ಗೆ ಏಲಿಯನ್ಸ್, ಫೋಟಾನ್, ಬಾಹ್ಯಾಕಾಶ ಇವುಗಳ ಮೇಲೆಲ್ಲಾ ವಿಪರೀತ ಆಕರ್ಷಣೆ ಇತ್ತು. ಇವು ಸುಶಾಂತ್‌ನ ಇಷ್ಟದ ವಿಷಯಗಳಾಗಿದ್ದವು. ಜಾಹೀರಾತು ಮಾಡಿರುವವರು ಸುಶಾಂತ್ ಅನ್ನು ಗೇಲಿ ಮಾಡಲೆಂದೇ ಈ ರೀತಿಯ ಜಾಹೀರಾತು ಮಾಡಿದ್ದಾರೆ ಎಂದು ಸುಶಾಂತ್ ಅಭಿಮಾನಿಗಳು ಆರೋಪಿಸಿದ್ದಾರೆ

  ಜಾಹೀರಾತಿನಲ್ಲಿ ಸುಶಾಂತ್ ಕುರಿತು ಉಲ್ಲೇಖವಿಲ್ಲ

  ಜಾಹೀರಾತಿನಲ್ಲಿ ಸುಶಾಂತ್ ಕುರಿತು ಉಲ್ಲೇಖವಿಲ್ಲ

  ಜಾಹೀರಾತಿನಲ್ಲಿ ಸುಶಾಂತ್ ಕುರಿತ ಯಾವುದೇ ಉಲ್ಲೇಖ ಇಲ್ಲ. ಇದೊಂದು ತಮಾಷೆಯ ಜಾಹೀರಾತಾಗಿದ್ದು, 'ಮುಂದೆ ಏನು ಮಾಡಬೇಕೆಂದಿರುವೆ?' ಎಂದು ರಣ್ವೀರ್‌ನನ್ನು ಆತನ ಸಂಬಂಧಿಗಳು ಕೇಳಿದಾಗ, ಅವರನ್ನು ಕನ್ಫ್ಯೂಸ್ ಮಾಡಲೆಂದು, ರಣ್ವೀರ್ ಅಷ್ಟೇಲ್ಲಾ ವಿಜ್ಞಾನ ವಿಷಯಗಳನ್ನು ಒಟ್ಟಿಗೆ ಹೇಳುತ್ತಾರೆ. ಇದರಲ್ಲಿ ಸುಶಾಂತ್‌ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.

  ಜಾಹೀರಾತು ನಿಷೇಧಕ್ಕೆ ಒತ್ತಾಯ

  ಜಾಹೀರಾತು ನಿಷೇಧಕ್ಕೆ ಒತ್ತಾಯ

  ಚಿಪ್ಸ್ ಜಾಹೀರಾತು, ಸುಶಾಂತ್‌ ಗೆ ಮಾಡಿರುವ ಅವಮಾನ ಎಂದು ವಾದಿಸಿರುವ ಸುಶಾಂತ್ ಅಭಿಮಾನಿಗಳು, ರಣ್ವೀರ್ ಸಿಂಗ್‌ರ ಈ ಹೊಸ ಚಿಪ್ಸ್ ಜಾಹೀರಾತನ್ನು ನಿಷೇಧಿಸಬೇಕು, ಅಷ್ಟೇ ಅಲ್ಲದೆ ರಣ್ವೀರ್‌ರ ಸಿನಿಮಾಗಳಿಗೂ ನಿಷೇಧ ಹೇರಲು ಒತ್ತಾಯ ಮಾಡಿದ್ದಾರೆ.

  ಬಾಹ್ಯಾಕಾಶದ ಬಗ್ಗೆ ಸುಶಾಂತ್‌ಗೆ ಕುತೂಹಲ

  ಬಾಹ್ಯಾಕಾಶದ ಬಗ್ಗೆ ಸುಶಾಂತ್‌ಗೆ ಕುತೂಹಲ

  ಎಂಜಿನಿಯರಿಂಗ್ ವಿದ್ಯಾರ್ಥಿ ಆಗಿದ್ದ ಸುಶಾಂತ್ ಸಿಂಗ್ ಗೆ ಬಾಹ್ಯಾಕಾಶ, ವಿಜ್ಞಾನ, ಏಲಿಯನ್‌ಗಳ ಬಗ್ಗೆ ಬಹಳ ಕುತೂಹಲವಿತ್ತು. ಭಾರಿ ದೊಡ್ಡ ಬೈನ್ಯಾಕುಲರ್ ಇಟ್ಟುಕೊಂಡಿದ್ದ ಸುಶಾಂತ್ ರಾತ್ರಿ ಹೊತ್ತು ಬೈನ್ಯಾಕ್ಯುಲರ್‌ನಿಂದ ಅಂತರಿಕ್ಷವನ್ನು ನೋಡುತ್ತಾ ಇರುತ್ತಿದ್ದರು.

  ತಮಿಳು ಸ್ಟಾರ್ ಡೈರೆಕ್ಟರ್ ಸಿನಿಮಾ ಮೂಲಕ ಮತ್ತೆ ಒಂದಾದ ಶಿವಣ್ಣ, ಡಾಲಿ | Filmibeat Kannada
  ಸುಶಾಂತ್ ಸಾವಿನ ತನಿಖೆ ನಡೆಸುತ್ತಿರುವ ಸಿಬಿಐ

  ಸುಶಾಂತ್ ಸಾವಿನ ತನಿಖೆ ನಡೆಸುತ್ತಿರುವ ಸಿಬಿಐ

  ಸುಶಾಂತ್ ಸಿಂಗ್ ಜೂನ್ 14 ರಂದು ನಿಧನ ಹೊಂದಿದರು. ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯನ್ನು ಅವರ ದೇಹ ಪತ್ತೆಯಾಗಿತ್ತು. ಸುಶಾಂತ್ ಸಿಂಗ್ ಸಾವು ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಯಸಿ ರಿಯಾ ಸೇರಿದಂತೆ ಹಲವರ ಮೇಲೆ ಎಫ್‌ಐಆರ್ ದಾಖಲಾಗಿದೆ

  English summary
  Sushant Singh's fans demand to ban Ranveer Singh's new chips ad. They saying Ranveer mocks Sushant.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X