For Quick Alerts
  ALLOW NOTIFICATIONS  
  For Daily Alerts

  ಕುತೂಹಲಕಾರಿ ತಿರುವು ಪಡೆಯಲಿದೆಯೇ ಸುಶಾಂತ್ ಸಿಂಗ್ ಸಾವು?

  |

  ಬಾಲಿವುಡ್‌ನಲ್ಲಿ ತನ್ನದೇ ಛಾಪು ಮೂಡಿಸುತ್ತಿದ್ದ ವೇಳೆಗೆ ಸುಶಾಂತ್ ಸಿಂಗ್ ರಜಪೂತ್ ಜೀವನ ಅಂತ್ಯವಾಗಿದೆ. ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದ್ದು, ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

  ಉತ್ತಮ ನಟರಾಗಿದ್ದ ಸಾಕಷ್ಟು ಅವಕಾಶಗಳನ್ನೂ ಹೊಂದಿದ್ದ, ವಿದ್ಯಾವಂತರೂ ಆಗಿದ್ದ ಸುಶಾಂತ್‌ ಗೆ ಆತ್ಮಹತ್ಯೆ ಮಾಡಿಕೊಳ್ಳಲು ದೊಡ್ಡ ಕಾರಣಗಳಿದ್ದುವು ಎಂಬುದು ಮೇಲ್ನೋಟಕ್ಕೆ ಕಾಣುತ್ತಿಲ್ಲ.

  ನಟ ಸುಶಾಂತ್ ಸಿಂಗ್ ಆತ್ಮಹತ್ಯೆ: ಇಲ್ಲಿದೆ ತನಿಖೆಯ ಪ್ರಾಥಮಿಕ ಮಾಹಿತಿನಟ ಸುಶಾಂತ್ ಸಿಂಗ್ ಆತ್ಮಹತ್ಯೆ: ಇಲ್ಲಿದೆ ತನಿಖೆಯ ಪ್ರಾಥಮಿಕ ಮಾಹಿತಿ

  ಅವರ ಪ್ರೇಮ ಪ್ರಕರಣ, ವೈಯಕ್ತಿಕ ಸಂಬಂಧಗಳಲ್ಲಿದ್ದ ಗೋಜಲುಗಳಿಂದ ಸುಶಾಂತ್ ಸಾವಿಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ ಎಂಬ ಅನುಮಾನಗಳನ್ನು ವ್ಯಕ್ತಪಡಿಸಲಾಗುತ್ತಿದೆ. ಸುಶಾಂತ್ ಸಾವಿನ ಪ್ರಕರಣ ಒಟ್ಟಾರೆ ಕುತೂಹಲಕಾರಿ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ಅದಕ್ಕೆ ಕಾರಣಗಳೂ ಇವೆ.

  ಕೆಲವೇ ದಿನಗಳ ಹಿಂದೆ ಮಾಜಿ ಮ್ಯಾನೇಜರ್ ಆತ್ಮಹತ್ಯೆ

  ಕೆಲವೇ ದಿನಗಳ ಹಿಂದೆ ಮಾಜಿ ಮ್ಯಾನೇಜರ್ ಆತ್ಮಹತ್ಯೆ

  ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಐದು ದಿನಗಳ ಹಿಂದಷ್ಟೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಲಾಡ್‌ನ ಅಪಾರ್ಟ್‌ಮೆಂಟ್ ಮೇಲಿದ್ದು ಬಿದ್ದು ಸಾವನ್ನಪ್ಪಿದ್ದರು. ಈ ಸಾವಿಗೂ ಸುಶಾಂತ್ ಸಾವಿಗೂ ನಂಟಿದೆಯಾ ಎಂಬುದು ಪೊಲೀಸರ ತನಿಖೆಯ ಭಾಗವಾಗಿರಲಿದೆ.

  ಸುಶಾಂತ್-ಅಂಕಿತಾ ಲೋಕಂಡೆ

  ಸುಶಾಂತ್-ಅಂಕಿತಾ ಲೋಕಂಡೆ

  ಸುಶಾಂತ್ ಸಿಂಗ್ ಗೆ ಕೆಲವು ಮಾಜಿ ಪ್ರೇಯಸಿಯರು, ಹಾಲಿ ಪ್ರೇಯಸಿ ಇದ್ದರು. ಟಿವಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ಅಂಕಿತಾ ಲೋಕಂಡೆ ಜೊತೆ ಸುಶಾಂತ್ ಪ್ರೀತಿಯಲ್ಲಿದ್ದರು, ಇವರ ಪ್ರೀತಿ ಬಹುದಿನಗಳ ವರೆಗೆ ನಡೆಯಿತು. ನಂತರ ಇಬ್ಬರು ಬೇರಾದರು.

  ಅಂಕಿತಾ ಲೋಕಂಡೆ ನಿಶ್ಚಿತಾರ್ಥವಾಯಿತು

  ಅಂಕಿತಾ ಲೋಕಂಡೆ ನಿಶ್ಚಿತಾರ್ಥವಾಯಿತು

  ಏಪ್ರಿಲ್ ತಿಂಗಳಲ್ಲಿ ಅಂಕಿತಾ ಲೋಕಂಡೆ ಅವರ ನಿಶ್ಚಿತಾರ್ಥ ಆಗಿತ್ತು. ಅವರು ವಿಕ್ಕಿ ಜೈನ್ ಎಂಬುವರ ಜೊತೆ ಎಂಗೇಜ್ ಆದರು. ಮಧ್ಯಮವರ್ಗದ ಕುಟುಂಬದಿಂದ ಬಂದಿದ್ದ ಸುಶಾಂತ್‌ ಗೆ ಪ್ರೇಮವೈಫಲ್ಯ ಸಹಿಸಿಕೊಳ್ಳಲಾಗಲಿಲ್ಲವಾ ಎಂಬ ಅನುಮಾನವೂ ಇದೆ.

  ಕೃತಿ ಸೆನನ್ ಜೊತೆಗೂ ಹೆಸರು ತಳುಕುಹಾಕಿಕೊಂಡಿತ್ತು

  ಕೃತಿ ಸೆನನ್ ಜೊತೆಗೂ ಹೆಸರು ತಳುಕುಹಾಕಿಕೊಂಡಿತ್ತು

  ಅಂಕಿತಾ ಲೋಕಂಡೆ ಹೊರತುಪಡಿಸಿ ಅವರ ಹೆಸರು ನಾಯಕ ನಟಿ ಕೃತಿ ಸೆನನ್ ಜೊತೆಗೂ ಕೇಳಿಬಂದಿತ್ತು. ಆದರೆ ಕೃತಿ ಸೆನನ್ ಅದನ್ನು ತಳ್ಳಿ ಹಾಕಿದ್ದರು. ಇವರಿಬ್ಬರ ಬಗೆಗಿನ ಗಾಳಿ ಸುದ್ದಿ ಬೇಗನೆ ಅಂತ್ಯವಾಯಿತು.

  ರಿಹಾ ಚಕ್ರೊಬರ್ತಿ ಜೊತೆ ಮನಸ್ತಾಪ?

  ರಿಹಾ ಚಕ್ರೊಬರ್ತಿ ಜೊತೆ ಮನಸ್ತಾಪ?

  ನಂತರ ಸುಶಾಂತ್ ಸಿಂಗ್ ಹೆಸರು ಗಾಢವಾಗಿ ಕೇಳಿಬಂದಿದ್ದು ರಿಹಾ ಚಕ್ರೊಬರ್ತಿ ಜೊತೆ. ಇವರೂ ಸಹ ನಟಿಯಾಗಿದ್ದು, ತೆಲುಗಿನ ಒಂದು ಹಾಗೂ ಆರು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾರ್ಚ್‌ 11 ರಂದು ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇವರಿಬ್ಬರ ನಡುವೆ ಏನಾದರೂ ಮನಸ್ತಾಪವಾಯಿತೆ ಎಂಬುದು ತನಿಖೆಯಿಂದಲೇ ಗೊತ್ತಾಗಬೇಕಿದೆ.

  English summary
  Sushant Singh Rajput found dead in his home in Mumbai. People searching what could be the reason.
  Monday, June 15, 2020, 9:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X