For Quick Alerts
  ALLOW NOTIFICATIONS  
  For Daily Alerts

  ನಟ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಆತ್ಮಹತ್ಯೆಗೆ ಶರಣು

  |

  ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯ 14ನೇ ಮಹಡಿಯಿಂದ ಹಾರಿ ದಿಶಾ ಆತ್ಮಹತ್ಯೆಗೆ ಮಾಕೊಂಡಿದ್ದಾರೆ. ನಿನ್ನೆ(ಜೂನ್ 9) ಮುಂಬೈನ ದಿಶಾ ನಿವಾಸದಲ್ಲಿ ಈ ಘಟನೆ ನಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಆಸ್ಪತ್ರೆಗೆ ಹೋಗುವ ಮೊದಲೆ ದಿಶಾ ಪ್ರಾಣಪಕ್ಷಿ ಹಾರಿಹೋಗಿತ್ತು.

  ಸಾವಿಗೆ ಕಾರಣವೇನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ದಿಶಾ ಜೊತೆ ಭಾವಿ ಪತಿ ಕೂಡ ವಾಸವಿದ್ದರು ಎಂದು ಹೇಳಲಾಗುತ್ತಿದೆ. ಆತ್ಮ ಹತ್ಯೆ ಸಮಯದಲ್ಲಿ ಭಾವಿ ಪತಿ ಕೂಡ ಮನೆಯಲ್ಲಿಯೆ ಇದ್ದರಂತೆ. ದಿಶಾಗೆ ಈಗಾಗಲೆ ಮದುವೆ ಫಿಕ್ಸ್ ಆಗಿದ್ದು, ಭಾವಿ ಪತಿಯ ಜೊತೆಯೆ ಇದ್ದರು ಎಂದು ಕುಟುಂಬದವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  ಬಲೂನ್ ಮಾರುವ ಬಡವರನ್ನು ಕರೆದು ಫೋಟೋ ಕೊಟ್ಟ ನಟ ಸುಶಾಂತ್ಬಲೂನ್ ಮಾರುವ ಬಡವರನ್ನು ಕರೆದು ಫೋಟೋ ಕೊಟ್ಟ ನಟ ಸುಶಾಂತ್

  ದಿಶಾ, ಬಾಲಿವುಡ್ ನಟ ಸುಶಾಂತ್ ಸಿಂಗ್ ಗೆ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ. ಸುಶಾಂತ್ ಸಿಂಗ್ ಮಾತ್ರವಲ್ಲದೆ ಭಾರತಿ ಶರ್ಮಾ, ರಿಯಾ ಚಕ್ರವರ್ತಿ ಮತ್ತು ವರುಣ್ ಶರ್ಮಾ ಅವರ ಜೊತೆಯು ದಿಶಾ ಕೆಲಸ ಮಾಡಿದ್ದಾರೆ.

  ದಿಶಾ ಸಾವಿಗೆ ಸುಶಾಂತ್ ಸಿಂಗ್, ವರುಣ್ ಶರ್ಮಾ, ಸೋನಾಕ್ಷಿ ಸಿಹ್ನಾ, ಮೌನಿ ರಾಯ್ ಸೇರಿದ್ದಂತೆ ಬಾಲಿವುಡ್ ನ ಅನೇಕರು ಸಂತಾಪ ಸೂಚಿಸಿದ್ದಾರೆ.

  ಈಗಾಗಲೆ ಪೋಲೀಸರು ತನಿಖೆ ಆರಂಭಿಸಿದ್ದು, ದಿಶಾ ಪೋಷಕರು ಮತ್ತು ಭಾವಿ ಪತಿಯ ಹೇಳಿಕೆಯನ್ನು ಪಡೆದಿದ್ದಾರೆ.

  English summary
  Bollywood Actor Sushant Singh Rajput ex manager Disha Salian committed suicide.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X