For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಸ್ನೇಹಿತನಿಗೆ ಪ್ರಾಣ ಬೆದರಿಕೆ: ಹುಡುಗಿಯೊಬ್ಬಳು ರಹಸ್ಯವಾಗಿ ಭೇಟಿಯಾಗಿ ಹೇಳಿದ್ದೇನು?

  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಗಮನ ಸೆಳೆದಿದೆ. ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆಯಾ ಅಥವಾ ಕೊಲೆಯಾ ಎನ್ನುವ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಈ ಪ್ರಕರಣ ಈಗ ಸಿಬಿಐ ಅಂಗಳದಲ್ಲಿದ್ದು, ತನಿಖೆ ನಡೆಸಲಾಗುತ್ತಿದೆ.

  ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ಸಿಗಬೇಕು ಎಂದು ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬದವರು ಹೋರಾಟ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಪ್ರತಿಭಟಿಸುತ್ತಿದ್ದಾರೆ. ಈ ನಡುವೆ ಸುಶಾಂತ್ ಸಿಂಗ್ ಸ್ನೇಹಿತರಾದ ಗಣೇಶ್ ಹಿರ್ವಾಕರ್ ಮತ್ತು ಮಾಜಿ ಸಿಬ್ಬಂದಿ ಅಂಕಿತ್ ಆಚಾರ್ಯ್ ಸೇರಿದಂತೆ ಅನೇಕರು ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆಯನ್ನು ಪ್ರಾಂಭಿಸಿದ್ದರು.

  ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರಂತೆ ರಿಯಾ ಚಕ್ರವರ್ತಿ!ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರಂತೆ ರಿಯಾ ಚಕ್ರವರ್ತಿ!

  ಆದರೆ ಈ ಪ್ರತಿಭಟನೆ ಬಳಿಕ ಗೆಳೆಯ ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಅನೇಕರಿಗೆ ಶಾಕ್ ನೀಡಿದೆ. ಅದರಲ್ಲೂ ಸುಶಾಂತ್ ಪರ ನ್ಯಾಯಕ್ಕಾಗಿ ಹೋರಾಡುತ್ತಿರುವವರಿಗೆ ಆಘಾತವುಂಟು ಮಾಡಿದೆ. ತಮಗೆ ಜೀವ ಬೆದರಿಕೆ ಇದೆ ಎಂದು ಹೇಳಿರುವ ಗಣೇಶ್, ಕೇಂದ್ರ ಸಚಿವಾಲಯದ ಹುಡುಗಿಯೊಬ್ಬಳು ಭೇಟಿಯಾಗಿ ಈ ವಿಷಯ ನನಗೆ ಹೇಳಿದ್ದಾರೆ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

  ಗಣೇಶ್ ಮಾಡಿರುವ ಟ್ವೀಟ್ ನಲ್ಲಿ, ಕೇಂದ್ರ ಸಚಿವಾಲಯದಿಂದ ಹುಡುಗಿಯೊಬ್ಬಳು 2 ದಿನ ತನ್ನನ್ನು ಭೇಟಿಯಾಗಿದ್ದಳು. ಮುಂಬೈ ಮತ್ತು ದೆಹಲಿಯಲ್ಲಿ ನಿನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾಳೆ. ಯಾರೆ ನನ್ನನ್ನು ಸಾಯಿಸಿದರೂ ನ್ಯಾಯ ಬೇಗನೆ ಬರುತ್ತದೆ. ನನಗೆ ಶತ್ರುಗಳಿಲ್ಲ, ಆದರೆ ಯಾರಾದರು ನನ್ನನ್ನು ಸಾಯಿಸಿದರೆ ಅದು ಸುಶಾಂತ್ ಸಿಂಗ್ ಸಾಯಿಸಿದವರೇ ಆಗಿರುತ್ತಾರೆ." ಎಂದು ಬರೆದುಕೊಂಡಿದ್ದಾರೆ.

  ಈ ಟ್ವೀಟ್ ಅಚ್ಚರಿ ಮೂಡಿಸಿದೆ. ಜೊತೆಗೆ ಗಣೇಶ್ ನನ್ನು ಭೇಟಿಯಾಗಿ ಬೆದರಿಕೆ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವಾಲಯದ ಆ ಹುಡುಗಿ ಯಾರು? ಎನ್ನುವುದು ಬಹಿರಂಗವಾಗಿಲ್ಲ. ಕೇಂದ್ರ ಸಚಿವಾಲಯಕ್ಕು ಆಕೆಗು ಏನು ಸಂಬಂಧ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

  ಎಷ್ಟೇ ಪ್ರಯತ್ನ ಪಟ್ರು KGF ತಂಡದಿಂದ ಇದನ್ನು ತಡೆಯೋಕೇ ಆಗ್ತಿಲ್ಲಾ | Filmibeat Kannada

  ಇನ್ನು ಸುಶಾಂತ್ ಸಿಂಗ್ ಪ್ರಕರಣದಲ್ಲಿ ಜೈಲು ಸೇರಿದ್ದ ಪ್ರೇಯಸಿ ರಿಯಾ ಚಕ್ರವರ್ತಿ ಜಾಮೀನು ಪಡೆದು ಹೊರಬಂದಿದ್ದಾರೆ. ರಿಯಾ, ಡ್ರಗ್ಸ್ ಜಾಲದ ಸಂಬಂಧ ಜೈಲು ಸೇರಿದ್ದರು. ಸುಶಾಂತ್ ಗೆ ಮಾದಕ ವಸ್ತು ಪೂರೈಸುತ್ತಿದ್ದರು ಎನ್ನುವ ಆರೋಪ ರಿಯಾ ಮೇಲಿದೆ.

  English summary
  Sushant Singh rajput friend ganesh hiwarkar life in danger. He says, A girl met me 2day from central ministry told me,my life is in danger in Mumbai n Delhi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X