For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್ ನ 'ಅವೆಂಜರ್ಸ್: ಇನ್ಫಿನಿಟಿ ವಾರ್' ದಾಖಲೆ ಮುರಿದ ಸುಶಾಂತ್ ಸಿಂಗ್ ಕೊನೆಯ ಸಿನಿಮಾದ ಟ್ರೈಲರ್

  |

  ನಟ ಸುಶಾಂತ್ ಸಿಂಗ್ ಅಭಿನಯದ ಕೊನೆಯ ಸಿನಿಮಾ ದಿಲ್ ಬೆಚಾರ ಟ್ರೈಲರ್ ರಿಲೀಸ್ ಆಗಿದ್ದು ಯೂಟ್ಯೂಬ್ ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ. ಅಗಲಿದ ನೆಚ್ಚಿನ ನಟ ಕೊನೆಯ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಟ್ರೈಲರ್ ಗಾಗಿ ಕಾದುಕುಳಿತ್ತಿದ್ದ ಅಭಿಮಾನಿಗಳಿಗೆ ಸುಶಾಂತ್ ಅನ್ನು ಮತ್ತೆ ತೆರೆಮೇಲೆ ನೋಡಿ ಭಾವುಕರಾಗಿದ್ದಾರೆ.

  ಅಂಬರೀಷ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ | Sumalatha Ambareesh | Filmibeat Kannada

  ಜುಲೈ 6ಕ್ಕೆ ಸಿನಿಮಾ ಟ್ರೈಲರ್ ಅಭಿಮಾನಿಗಳ ಮುಂದೆ ಬಂದಿದೆ. ರೊಮ್ಯಾಂಟಿಕ್ ಲವ್ ಸ್ಟೋರಿ ದಿಲ್ ಬೆಚಾರ ವೀಕ್ಷಕರ ಕಣ್ಣು ಒದ್ದೆ ಮಾಡಿದೆ. ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ನಾಯಕಿಯನ್ನು ಪ್ರೀತಿಸುವ ನಾಯಕನ ಪ್ರೇಮ ಕಥೆ ನೋಡುಗರನ್ನು ಭಾವುಕರನ್ನಾಗಿಸುತ್ತೆ. ಮುಂದೆ ಓದಿ..

  ಸಿನಿಮಾದಿಂದ ಸುಶಾಂತ್ ಕೈಬಿಡಲು ಕಾರಣವೇನು?: ಪೊಲೀಸರ ಮುಂದೆ ಭನ್ಸಾಲಿ ನೀಡಿದ ವಿವರಣೆಸಿನಿಮಾದಿಂದ ಸುಶಾಂತ್ ಕೈಬಿಡಲು ಕಾರಣವೇನು?: ಪೊಲೀಸರ ಮುಂದೆ ಭನ್ಸಾಲಿ ನೀಡಿದ ವಿವರಣೆ

  ಟ್ರೆಂಡಿಂಗ್ ನಲ್ಲಿ ಟ್ರೈಲರ್

  ಟ್ರೆಂಡಿಂಗ್ ನಲ್ಲಿ ಟ್ರೈಲರ್

  ಟ್ರೈಲರ್ ರಿಲೀಸ್ ಆಗಿ 19 ಗಂಟೆಯಾದರು ಟಾಪ್ ಟ್ರೆಂಡಿಂಗ್ ನಲ್ಲಿದೆ. ಅಭಿಮಾನಿಗಳು ಚಿತ್ರದ ಟ್ರೈಲರ್ ಅನ್ನು ಟ್ರೆಂಡ್ ಮಾಡುತ್ತಿದ್ದಾರೆ. ಇಲ್ಲಿ ಸುಶಾಂತ್ ಸಿಂಗ್ ಗೆ ನಾಯಕಿಯಾಗಿ ಸಂಜನಾ ಸಂಘಿ ಕಾಣಿಸಿಕೊಂಡಿದ್ದಾರೆ. ಸಂಜನಾಗೆ ಇದು ಮೊದಲ ಸಿನಿಮಾ. ಈ ಸಿನಿಮಾ ಮೂಲಕ ಬಾಲಿವುಡ್ ನಲ್ಲಿ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.

  ಸುಶಾಂತ್ ಸಿಂಗ್ ಸಿನಿಮಾಕ್ಕೆ ಸಲ್ಮಾನ್ ಖಾನ್ ಅಭಿಮಾನಿಗಳ ಅಡ್ಡಗಾಲು?ಸುಶಾಂತ್ ಸಿಂಗ್ ಸಿನಿಮಾಕ್ಕೆ ಸಲ್ಮಾನ್ ಖಾನ್ ಅಭಿಮಾನಿಗಳ ಅಡ್ಡಗಾಲು?

  ಹಾಲಿವುಡ್ ಸಿನಿಮಾಗಳ ದಾಖಲೆ ಬ್ರೇಕ್

  ಹಾಲಿವುಡ್ ಸಿನಿಮಾಗಳ ದಾಖಲೆ ಬ್ರೇಕ್

  ದಿಲ್ ಬೆಚಾರ ಟ್ರೈಲರ್ ರಿಲೀಸ್ ಆಗಿ ಇನ್ನೂ 24 ಗಂಟೆಯಾಗಿಲ್ಲ ಆಗಲೆ ಯೂಟ್ಯೂಬ್ ನಲ್ಲಿ 5.5 ಮಿಲಿಯನ್ ಲೈಕ್ಸ್ ಗಿಟ್ಟಿಸಿಕೊಂಡಿದೆ. ಅಲ್ಲದೆ 16ನೇ ಗಂಟೆಯಲ್ಲಿ ಬರೋಬ್ಬರಿ 21 ಮಿಲಿಯನ್ ವೀಕ್ಷಣೆ ಪಡೆದಿದೆ. ವಿಶೇಷ ಅಂದರೆ ಈ ಟ್ರೈಲರ್ ಸಾರ್ವಕಾಲಿಕ ದಾಖಲೆ ಹೊಂದಿದ್ದ ಹಾಲಿವುಡ್ ನ ಬ್ಲಾಕ್ ಬಸ್ಟರ್ ಅವೆಂಜರ್ಸ್: ಇನ್ಫಿನಿಟಿ ವಾರ್ ಮತ್ತು ಅವೆಂಜರ್ಸ್: ಎಂಡ್ ಗೇಮ್ ಸಿನಿಮಾಗಳ ದಾಖಲೆಯನ್ನು ಬ್ರೇಕ್ ಮಾಡಿದೆ.

  ಜೀವನದ ಪ್ರೀತಿ ತುಂಬವ ಪಾತ್ರ

  ಜೀವನದ ಪ್ರೀತಿ ತುಂಬವ ಪಾತ್ರ

  ಸಾವಿನಂಚಿನಲ್ಲಿರುವ ಕ್ಯಾನ್ಸರ್ ರೋಗಿಗೆ ಜೀವನ ಪ್ರೀತಿ ತುಂಬುವ ಪಾತ್ರ ಸುಶಾಂತ್ ಸಿಂಗ್‌ನದ್ದು, ಸಾವಿಗೆ ಹತ್ತಿರವಿರುವ ನಾಯಕಿಯನ್ನು ಪ್ರೇಮಿಸುವ ನಾಯಕನ ಪಾತ್ರಕ್ಕೆ ಸುಶಾಂತ್ ಜೀವ ತುಂಬಿದ್ದಾರೆ. ಎಂಥಹಾ ವೈಚಿತ್ರ್ಯ, ಸ್ವತಃ ಸಾವಿನೆಡೆಗೆ ಹೊರಟಿದ್ದ ಸುಶಾಂತ್ ಸಿನಿಮಾದಲ್ಲಿ ಮಾತ್ರ ವೈರುಧ್ಯದ ಪಾತ್ರ ನಿರ್ವಹಿಸಿದ್ದಾರೆ.

  ಸುಶಾಂತ್ ಸಿಂಗ್ ಸಿನಿಮಾ ದಿಲ್ ಬೇಚಾರಾ ಟ್ರೇಲರ್ ಬಿಡುಗಡೆ: ಕಣ್ಣೀರು ತಡೆಯಲಾದೀತೆ?ಸುಶಾಂತ್ ಸಿಂಗ್ ಸಿನಿಮಾ ದಿಲ್ ಬೇಚಾರಾ ಟ್ರೇಲರ್ ಬಿಡುಗಡೆ: ಕಣ್ಣೀರು ತಡೆಯಲಾದೀತೆ?

  ಜುಲೈ 24ಕ್ಕೆ ರಿಲೀಸ್

  ಜುಲೈ 24ಕ್ಕೆ ರಿಲೀಸ್

  ದಿಲ್ ಬೆಚಾರ ಹಾಲಿವುಡ್ ನ ಖ್ಯಾತ ಸಿನಿಮಾ ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್ ಸಿನಿಮಾದ ರಿಮೇಕ್ ಆಗಿದೆ. ಇದು ಜಾನ್ ಗ್ರೀನ್ ಬರೆದ ಕಾದಂಬರಿಯಾಧಾರಿತ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಸೈಫ್ ಅಲಿ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎ. ಆರ್ ರಹಮಾನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಚಿತ್ರ ಇದೆ ತಿಂಗಳು 24ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗುತ್ತಿದೆ.

  English summary
  Sushant Singh starrer dil bechara trailer breaks most liked Avengers Infinity war record. Dil bechara trailer released on July 6th,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X