For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆ ಡಿಲೀಟ್ ಮಾಡಿದ ಸುಶಾಂತ್ ಸಿಂಗ್ ಸಹೋದರಿ ಶ್ವೇತಾ ಸಿಂಗ್

  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಹೊಂದಿ ಇವತ್ತಿಗೆ 4 ತಿಂಗಳಾಗಿದೆ. 2020 ಜೂನ್ 14ರಂದು ಸುಶಾಂತ್ ಸಿಂಗ್ ಮುಂಬೈನ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಹೋದರಿ ಸ್ವೇತಾ ಸಿಂಗ್ ಸಹೋದರನನ್ನು ಕಳೆದುಕೊಂಡ ದಿನ ತನ್ನ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಸ್ವೇತಾ ಈಗ ಸಾಮಾಜಿಕ ಜಾಲತಾಣದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

  ಇಂದು ಕುಟುಂಬದವರು ಸುಶಾಂತ್ ಸಿಂಗ್ ನಾಲ್ಕು ತಿಂಗಳ ಪೂಜೆಯನ್ನು ಮಾಡಿದ್ದಾರೆ. ಬಳಿಕ ಸ್ವೇತಾ ಸಿಂಗ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಖಾತೆ ಡಿಲೀಟ್ ಮಾಡುವ ಮೊದಲು ಶ್ವೇತಾ ಸಿಂಗ್ ಸಹೋದರನ ಸ್ಫೂರ್ತಿದಾಯಕ ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಸುಶಾಂತ್ ಸಿನಿಮಾಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು. ಮುಂದೆ ಓದಿ...

  ಸುಶಾಂತ್ ಸಿಂಗ್ ಜ್ಯೂಸ್ ಕುಡಿದ ಗ್ಲಾಸನ್ನು ಪೊಲೀಸರು ಯಾಕೆ ಸಂಗ್ರಹಿಸಿಲ್ಲ? ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

  ಯುಎಸ್ ನಲ್ಲಿ ನೆಲೆಸಿರುವ ಶ್ವೇತಾ ಸಿಂಗ್

  ಯುಎಸ್ ನಲ್ಲಿ ನೆಲೆಸಿರುವ ಶ್ವೇತಾ ಸಿಂಗ್

  ಸದ್ಯ ಯುಎಸ್ ನಲ್ಲಿ ನೆಲೆಸಿರುವ ಶ್ವೇತಾ ಭಾರತದಲ್ಲಿರುವ ಸುಶಾಂತ್ ಸಿಂಗ್ ಅಭಿಮಾನಿಗಳ ಗೌರವವನ್ನು ಹಂಚಿದ್ದಾರೆ. ಜೊತೆಗೆ ಸಿಬಿಐ ಮೇಲೆ ನಂಬಿಕೆ ಇದೆ. ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ಸಿಗಲಿದೆ. ಸತ್ಯಹೊರಬರುವವರೆಗೂ ಕಾಯುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

  ನಾಲ್ಕು ತಿಂಗಳಿಂದ ನ್ಯಾಯಕ್ಕಾಗಿ ಹೋರಾಟ

  ನಾಲ್ಕು ತಿಂಗಳಿಂದ ನ್ಯಾಯಕ್ಕಾಗಿ ಹೋರಾಟ

  ಕಳೆದ ನಾಲ್ಕು ತಿಂಗಳಿಂದ ಸ್ವೇತಾ ಸಾಮಾಜಿಕ ಜಾಲತಾಣದ ಮೂಲಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಲೇ ಇದ್ದಾರೆ. ನ್ಯಾಯದ ಹೋರಾಟಕ್ಕೆ ಅಭಿಮಾನಿಗಳನ್ನು ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂದು ಮನ್ ಕೀಬಾತ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಬಳಿಕ ಶ್ವೇತಾ ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿದ್ದಾರೆ.

  ಮಾಧ್ಯಮಗಳ ವಿರುದ್ಧ ತಿರುಗಿಬಿದ್ದ ಬಾಲಿವುಡ್: ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ ನಿರ್ಮಾಪಕರು

  ಜುಲೈನಲ್ಲಿ ರಿಯಾ ವಿರುದ್ಧ ದೂರು ನೀಡಿದ ಸುಶಾಂತ್ ತಂದೆ

  ಜುಲೈನಲ್ಲಿ ರಿಯಾ ವಿರುದ್ಧ ದೂರು ನೀಡಿದ ಸುಶಾಂತ್ ತಂದೆ

  ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್, ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ದೂರು ಜುಲೈನಲ್ಲಿ ದಾಖಲಿಸಿದ್ದರು. ಆತ್ಮಹತ್ಯೆ ಪ್ರಚೋದನೆ, ಹಣದುರುಪಯೋಗ ಸೇರಿದಂತೆ ರಿಯಾ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದಾರೆ. ಮೊದಲು ಸುಶಾಂತ್ ಸಿಂಗ್ ಪ್ರಕರಣವನ್ನು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದರು. ನಂತರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸಿಬಿಐಗೆ ವರ್ಗಾಯಿಸಲಾಯಿತು.

  ಸಿಬಿಐ ಅಂಗಳದಲ್ಲಿ ಸುಶಾಂತ್ ಪ್ರಕರಣ

  ಸಿಬಿಐ ಅಂಗಳದಲ್ಲಿ ಸುಶಾಂತ್ ಪ್ರಕರಣ

  ಸದ್ಯ ಸುಶಾಂತ್ ಸಿಂಗ್ ಪ್ರಕರಣ ಸಿಬಿಐ ಅಂಗಳದಲ್ಲಿದೆ. ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದಂತೆ ಏಮ್ಸ್ ವರದಿ ನೀಡಿದ್ದು, ಸುಶಾಂತ್ ಅವರದ್ದು ಕೊಲೆ ಎನ್ನುವುದನ್ನು ತಳ್ಳಿ ಹಾಕಿದೆ. ಸುಶಾಂತ್ ಪ್ರಕರಣದ ಡ್ರಗ್ಸ್ ಜಾಲದ ಸಂಬಂಧ ಪ್ರೇಯಸಿ ರಿಯಾ ಚಕ್ರವರ್ತಿ ಸೇರಿದಂತೆ ಅನೇಕರನ್ನು ಬಂಧಿಸಲಾಗಿದೆ. ರಿಯಾ ಚಕ್ರವರ್ತಿ ಸದ್ಯ ಜಾಮೀನು ಪಡೆದು ಹೊರಬಂದಿದ್ದಾರೆ. ರಿಯಾ ಸಹೋದರ ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

  English summary
  Sushant Singh Rajput's sister Shweta Singh deletes her Twitter and Instagram account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X