For Quick Alerts
  ALLOW NOTIFICATIONS  
  For Daily Alerts

  ಸುಪ್ರೀಂಕೋರ್ಟ್‌ನಲ್ಲಿ ಸುಶಾಂತ್ ಸಿಂಗ್ ಸಹೋದರಿಗೆ ಹಿನ್ನಡೆ: ರಿಯಾ ದೂರಿಗೆ ಮನ್ನಣೆ

  |

  ಸುಶಾಂತ್ ಸಿಂಗ್ ಅಕಾಲಿಕ ಸಾವು, ಬಾಲಿವುಡ್‌ನ ಹಲವರ ಜೀವನವನ್ನು ಅಲ್ಲೋಲ-ಕಲ್ಲೋಲ ಮಾಡಿಬಿಟ್ಟಿತು. ಸುಶಾಂತ್ ಸಿಂಗ್‌ಗೆ ನೇರವಾಗಿ ಸಂಬಂಧಿಸಿದವರು ಒಂದಲ್ಲಾ-ಒಂದು ರೀತಿಯಲ್ಲಿ ಬಾಧೆ ಅನುಭವಿಸಿದರು, ಅನುಭವಿಸುತ್ತಿದ್ದಾರೆ. ಸುಶಾಂತ್‌ಗೆ ಸಿಂಗ್‌ಗೆ ನೇರವಾಗಿ ಸಂಬಂಧಿಸಿಲ್ಲದವರೂ ಸಹ ಸಾಕಷ್ಟು ಅವಮಾನ, ಮೂದಲಿಕೆಗಳಿಗೆ ಒಳಗಾಗಬೇಕಾಯಿತು.

  ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಸಿಂಗ್ ಅಂತೂ ಮೂರು ಜನ್ಮಕ್ಕಾಗುವಷ್ಟು ಮೂದಲಿಕೆಗಳನ್ನು, ನಿಂದನೆಗಳನ್ನು ಕೇಳಿಬಿಟ್ಟರು. ಸುಶಾಂತ್ ಸಿಂಗ್ ಕುಟುಂಬದವರು ರಿಯಾ ಚಕ್ರವರ್ತಿಯೇ ಸುಶಾಂತ್ ಸಿಂಗ್‌ನ ಕೊಲೆ ಮಾಡಿದ್ದಾಳೆ ಎಂದು ನೇರ ಆರೋಪಗಳನ್ನು ಮಾಧ್ಯಮಗಳ ಮುಂದೆ ಮಾಡಿದ್ದರು.

  ಅದೇ ಸಂದರ್ಭದಲ್ಲಿ ತಿರುಗಿ ಬಿದ್ದ ರಿಯಾ ಸಿಂಗ್, ಸುಶಾಂತ್ ಸಿಂಗ್ ಸಹೋದರಿ ಮೇಲೆ ದೂರೊಂದನ್ನು ಮುಂಬೈ ಪೊಲೀಸರ ಬಳಿ ದಾಖಲಿಸಿದರು. ದೂರು ಆಧರಿಸಿ ಮುಂಬೈ ಪೊಲೀಸರು ಸುಶಾಂತ್ ಸಿಂಗ್‌ರ ಸಹೋದರಿಯರಾದ ಪ್ರಿಯಾಂಕಾ ಸಿಂಗ್ ಹಾಗೂ ಮೀತು ಸಿಂಗ್ ಹಾಗೂ ವೈದ್ಯರೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

  ಮುಂಬೈ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಅನ್ನು ರದ್ದು ಮಾಡುವಂತೆ ಪ್ರಿಯಾಂಕಾ ಸಿಂಗ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಲ್ಲಿ ಕೇವಲ ಮೀತು ಸಿಂಗ್ ವಿರುದ್ಧ ತನಿಖೆಗೆ ಮಾತ್ರವೇ ತಡೆ ನೀಡಲಾಯಿತು. ಇದರಿಂದ ತೃಪ್ತಿಯಾಗದ ಪ್ರಿಯಾಂಕಾ ಸಿಂಗ್ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋದರು ಆದರೆ ಅಲ್ಲಿಯೂ ಪ್ರಿಯಾಂಕಾಗೆ ನಿರಾಸೆ ಆಗಿದೆ.

  'ಈ ಪ್ರಕರಣದಲ್ಲಿ ಪ್ರಿಯಾಂಕಾ ಸಿಂಗ್ ಅಪರಾಧ ಮಾಡಿರಬಹುದಾದ ಅನುಮಾನ ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ. ಹಾಗಾಗಿ ಎಫ್‌ಐಆರ್ ರದ್ದು ಮಾಡಲು ಆಗದು' ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.

  ಸುಶಾಂತ್ ಸಿಂಗ್‌ಗೆ ಕೆಲವು ಮಾತ್ರೆಗಳನ್ನು ಪ್ರಿಯಾಂಕಾ ಸಿಂಗ್ ಕೊಟ್ಟಿದ್ದರು. ಜೊತೆಗೆ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯ ಡಾ.ತರುಣ್ ಸಿಂಗ್ ಸಹ ರೋಗಿಯನ್ನು ನೋಡದೆಯೇ ಕೆಲವು ಮಾತ್ರೆಗಳನ್ನು ಸುಶಾಂತ್‌ಗೆ ತೆಗೆದುಕೊಳ್ಳುವಂತೆ ಹೇಳಿದ್ದರು. ಇದು ಸುಶಾಂತ್‌ನ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಆರೋಪಿಸಿ ರಿಯಾ ಚಕ್ರವರ್ತಿ ಮುಂಬೈ ಪೊಲೀಸರ ಬಳಿ ದೂರು ನೀಡಿದ್ದರು.

  Smrithi Irani Marriage Story : ಆಪ್ತ ಗೆಳತಿಯ ಪತಿಯನ್ನೇ ಮದುವೆಯಾದ ಸ್ಮೃತಿ ಇರಾನಿ | Filmibeat Kannada

  2020 ರ ಜೂನ್ 14 ರಂದು ಮುಂಬೈನ ತಮ್ಮ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ಪತ್ತೆಯಾಗಿದ್ದರು. ಸುಶಾಂತ್ ಸಿಂಗ್‌ರ ಸಾವಿನ ಸುತ್ತಾ ಸಾಕಷ್ಟು ಅನುಮಾನಗಳು ಎದ್ದಿದ್ದವು. ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.

  English summary
  Sushanth Singh's sister Priyanka Singh plea to squash FIR against her rejected in Supreme court. Mumbai police filed FIR against Priyanka based on Rhea Chakraborty's complaint.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X