Don't Miss!
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- News
ಬೆಂಗಳೂರು ಏರ್ಪೋರ್ಟ್ ಭದ್ರತೆಗೆ 1,700 ಹೆಚ್ಚುವರಿ ಸಿಬ್ಬಂದಿ
- Sports
ನ್ಯೂಜಿಲೆಂಡ್ ವಿರುದ್ಧ ಗೆದ್ದು ಸರಣಿ ಸಮಬಲಗೊಳಿಸಿದರೂ ಅಚ್ಚರಿ ವ್ಯಕ್ತಪಡಿಸಿದ ನಾಯಕ ಹಾರ್ದಿಕ್ ಪಾಂಡ್ಯ
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಕ್ರಮ್ ಭಟ್‌ರಿಂದ ಲಲಿತ್ ಮೋದಿ ವರೆಗೆ ಸುಶ್ಮಿತಾ ಪ್ರೀತಿಸಿದ ಆ ಹತ್ತು ಸೆಲೆಬ್ರಿಟಿಗಳ ಪಟ್ಟಿ
ಹದಿನಂಟರ ವಯಸ್ಸಿನಲ್ಲಿಯೇ ಭುವನ ಸುಂದರಿಯಾದ ಸುಶ್ಮಿತಾ ಸೇನ್, ಹಿಂದಿ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಗ್ಲಾಮರಸ್ ನಡೆಗೆ, ನುಡಿಗೆ ಖ್ಯಾತರಾಗಿರುವ ಸುಷ್ಮಿತಾ ಸೇನ್ ಇದೀಗ ಸುದ್ದಿಯಲ್ಲಿರುವುದು ಲಲಿತ್ ಮೋದಿಯೊಂದಿಗಿನ ಡೇಟಿಂಗ್‌ನಿಂದಾಗಿ. ಹೌದು, ನಟಿ ಸುಷ್ಮಿತಾ ಸೇನ್ ಐಪಿಎಲ್ ಜನಕ ಲಲಿತ್ ಮೋದಿ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಹೀಗೆಂದು ಸ್ವತಃ ಲಲಿತ್ ಮೋದಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಸುಶ್ಮಿತಾ
ಸೇನ್
ಕೋಟಿ,
ಕೋಟಿ
ಆಸ್ತಿಯ
ಒಡತಿ!
ಸುಷ್ಮಿತಾ ಸೇನ್ ಸಹ ಇದನ್ನು ಅಲ್ಲಗಳೆದಿಲ್ಲ, ಬದಲಿಗೆ ಪ್ರೀತಿಸುವವರಿಂದ ನಾನು ಸುತ್ತವರಿದಿದ್ದೇನೆ ಎಂದಷ್ಟೆ ಹೇಳಿದ್ದಾರೆ. ಆ ಮೂಲಕ ಲಲಿತ್ ಮೋದಿಯೊಂದಿಗಿನ ಇಳಿ ವಯಸ್ಸಿನ ಪ್ರೇಮದ ಸುದ್ದಿಗೆ ಮೌನ ಸಮ್ಮತಿಯನ್ನೇ ನೀಡಿದ್ದಾರೆ. ಸುಶ್ಮಿತಾ ಸೇನ್‌ಗೆ ಈಗ ವಯಸ್ಸು 46 ಈವರೆಗೆ ಅವರಿಗೆ ಅವರ ಜೀವನದಲ್ಲಿ ಸಾಕಷ್ಟು ಬಾಯ್‌ಫ್ರೆಂಡ್‌ಗಳು ಬಂದು ಹೋಗಿದ್ದಾರೆ ಅವರ ಪಟ್ಟಿ ಇಲ್ಲಿದೆ ನೋಡಿ.

ಲಲಿತ್ ಮೋದಿ-ಸುಶ್ಮಿತಾ ಸೇನ್
ಲಲಿತ್ ಮೋದಿ ಜೊತೆ ಇದೀಗ ನಟಿ ಸುಶ್ಮಿತಾ ಸೇನ್ ಡೇಟಿಂಗ್ ಮಾಡುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಲಲಿತ್ ಮೋದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಾವಿನ್ನೂ ವಿವಾಹವಾಗಿಲ್ಲ ಎಂದು ಸಹ ಲಲಿತ್ ಮೋದಿ ಹೇಳಿಕೊಂಡಿದ್ದಾರೆ. ಇಬ್ಬರು ಆಪ್ತವಾಗಿರುವ ಕೆಲ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹರಿದಾಡುತ್ತಿವೆ. ಇಬ್ಬರೂ ವಿವಾಹವಾಗುತ್ತಾರಾ ಕಾದು ನೋಡಬೇಕಿದೆ.

ರೊಹ್ಮನ್ ಸಾವಲ್-ಸುಶ್ಮಿತಾ
ಫ್ಯಾಷನ್ ಮಾಡೆಲ್ ರೊಹ್ಮನ್ ಸಾವಲ್ ಜೊತೆ ಸತತ ಮೂರು ವರ್ಷಗಳ ಕಾಲ ಪ್ರೀತಿಯಲ್ಲಿದ್ದರು ಸುಶ್ಮಿತಾ ಸೇನ್. ಈ ಜೋಡಿ ಒಟ್ಟಿಗೆ ಜೀವನ ನಡೆಸುತ್ತಿತ್ತು. ಇಬ್ಬರೂ ಪರಸ್ಪರ ಲಿವಿನ್ ರಿಲೇಶನ್‌ಶಿಪ್‌ನಲ್ಲಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು ಸುಶ್ಮಿತಾ ಆದರೆ 2021 ರ ಡಿಸೆಂಬರ್‌ನಲ್ಲಿ ತಾವಿಬ್ಬರೂ ದೂರಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದರು.

ನಿರ್ದೇಶಕ ವಿಕ್ರಂ ಭಟ್-ಸುಶ್ಮಿತಾ
ಸುಶ್ಮಿತಾ ಸೇನ್ ತಮ್ಮ ಮೊದಲ ಸಿನಿಮಾದಲ್ಲಿ ನಟಿಸುವಾಗಲೇ ಆ ಸಿನಿಮಾದ ನಿರ್ದೇಶಕ ವಿಕ್ರಂ ಭಟ್ ಜೊತೆ ಪ್ರೀತಿಗೆ ಬಿದ್ದಿದ್ದರು. ಅದಾಗಲೇ ವಿಕ್ರಂ ಭಟ್‌ಗೆ ವಿವಾಹವಾಗಿದ್ದಾರೂ ಸುಶ್ಮಿತಾ ಸೇನ್ ಆತನನ್ನು ಪ್ರೀತಿಸಿದ್ದರು. ಇವರಿಬ್ಬರ ಸಂಬಂಧದಿಂದ ವಿಕ್ರಂ ಭಟ್‌ರ ಕುಟುಂಬ ಬುಡಮೇಲಾಯಿತು. ವಿಕ್ರಂ ಭಟ್ ತಮ್ಮ ಕುಟುಂಬವನ್ನೇ ಬಿಡಬೇಕಾಗಿ ಬಂತು.

ವಸೀಂ ಅಕ್ರಂ-ಸುಶ್ಮಿತಾ
ಪಾಕಿಸ್ತಾನದ ಕ್ರಿಕೆಟಿಗ ವಸೀಂ ಅಕ್ರಂ ಜೊತೆಗೂ ಸುಶ್ಮಿತಾ ಸೇನ್ ಹೆಸರು ಜೋರಾಗಿ ಕೇಳಿ ಬಂದಿತ್ತು. ಡಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು. ಆದರೆ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ವರ್ಕೌಟ್ ಆಗದ ಕಾರಣ ಬ್ರೇಕ್ ಅಪ್ ಮಾಡಿಕೊಂಡರು.

ಸುಶ್ಮಿತಾ ಸೇನ್-ರಣ್ದೀಪ್ ಹೂಡಾ
ಬಾಲಿವುಡ್‌ನ ಜನಪ್ರಿಯ ನಟ ರಣ್ದೀಪ್ ಹೂಡಾ ಜೊತೆಗೂ ಕೆಲ ಕಾಲ ಸಂಬಂಧದಲ್ಲಿದ್ದರು ನಟಿ ಸುಶ್ಮಿತಾ ಸೇನ್. ಇಬ್ಬರೂ ಒಟ್ಟಿಗೆ 'ಕರ್ಮಾ' ಮತ್ತು 'ಹೋಲಿ' ಸಿನಿಮಾಗಳಲ್ಲಿ ನಟಿಸಿದ್ದರು. ಈ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಸುಶ್ಮಿತಾ ಸೇನ್ ಹಾಗೂ ರಣ್ಬೀಪ್ ಹೂಡಾ ಪ್ರೇಮಿಸಿ ಜೊತೆಯಾಗಿ ಓಡಾಡಿದ್ದರು. ನಂತರ ಬ್ರೇಕ್ ಅಪ್ ಮಾಡಿಕೊಂಡರಾದರೂ ಇಬ್ಬರ ಗೆಳೆತನ ಹಾಗೆಯೇ ಮುಂದುವರೆದಿದೆ.

ರಿತಿಕ್ ಬಾಸಿನ್-ಸುಶ್ಮಿತಾ
ಯುವ ಉದ್ಯಮಿ ರಿತಿಕ್ ಬಾಸಿನ್ ಜೊತೆಗೆ ಸುಶ್ಮಿತಾ ಹೆಸರು ಜೋರಾಗಿ ಕೇಳಿ ಬಂದಿತ್ತು. ಮುಂಬೈ ಮೂಲದ ರೆಸ್ಟೊರೆಂಟ್ ಉದ್ಯಮಿ ರಿತಿಕ್ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಸುಶ್ಮಿತಾ ಕಾಣಿಸಿಕೊಂಡಿದ್ದರು. ಜಹೀರ್ ಖಾನ್ ವಿವಾಹಕ್ಕೆ ಒಟ್ಟಿಗೆ ಹೋಗಿದ್ದರು. ಆದರೆ ಇವರ ಸಂಬಂಧ ಸಹ ಹೆಚ್ಚು ದಿನ ಇರಲಿಲ್ಲ.

ಸಬೀರ್ ಭಾಟಿಯಾ-ಸುಶ್ಮಿತಾ ಸೇನ್
ಉದ್ಯಮಿ ಸಬೀರ್ ಭಾಟಿಯಾ ಹಾಗೂ ಸುಶ್ಮಿತಾ ಸೇನ್ ಸಹ ಕೆಲ ಸಮಯ ಒಟ್ಟಿಗಿದ್ದರು. ಆದರೆ ಹಾಟ್‌ಮೇಲ್ ಸಂಸ್ಥಾಪಕ ಸಬೀರ್ ಭಾಟಿಯಾ ಹೆಚ್ಚು ದಿನ ಸುಶ್ಮಿತಾ ಸೇನ್ ಜೊತೆ ಇರಲಾರದೇ ಹೋದರು. ಇವರ ಸಂಬಂಧ ಬಹಳ ಬೇಗ ಮುರಿದು ಬಿದ್ದಿತು.

ಬಂಟಿ ಸಚ್ಚದೇವ್-ಸುಶ್ಮಿತಾ
ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಯೊಂದನ್ನು ನಡೆಸುತ್ತಿದ್ದ ಉದ್ಯಮಿ ಬಂಟಿ ಸಚ್ಚದೇವ್ ಜೊತೆಗೆ ಸುಶ್ಮಿತಾ ಸೇನ್ ಕೆಲ ಕಾಲ ಸಂಬಂಧ ಹೊಂದಿದ್ದರು. ಕೆಲ ಕಾಲ ಬಂಟಿ ಸಚ್ಚದೇವ್, ಸುಶ್ಮಿತಾರ ಮ್ಯಾನೇಜರ್ ಸಹ ಆಗಿದ್ದರು. ಆದರೆ ಇಬ್ಬರೂ ಆಪ್ತ ಸಂಬಂಧ ಹೊಂದಿದ್ದರು. ಆದರೆ ಈ ಸುದ್ದಿಯನ್ನು ಆಗ ಸುಶ್ಮಿತಾ ನಕ್ಕು ನಿರಾಕರಿಸಿದ್ದರು.

ಇಮ್ತಿಯಾಜ್ ಖತ್ರಿ-ಸುಶ್ಮಿತಾ ಸೇನ್
ನಿರ್ಮಾಪಕ, ಉದ್ಯಮಿ ಇಮ್ತಿಯಾಜ್ ಖತ್ರಿ ಜೊತೆಗೂ ಸುಶ್ಮಿತಾ ಸೇನ್ ಪ್ರೇಮದಲ್ಲಿದ್ದರು. ಇಮ್ತಿಯಾಜ್‌ಗಿಂತಲೂ ಸುಶ್ಮಿತಾ ಹದಿನಾಲ್ಕು ವರ್ಷ ದೊಡ್ಡವರಾಗಿದ್ದರು. ಹಾಗಿದ್ದರೂ ಸಹ ಇಬ್ಬರು ಕೆಲ ಕಾಲ ಒಟ್ಟಿಗಿದ್ದರು. ಆದರೆ ಉದ್ಯಮಿ ಇಮ್ತಿಯಾಜ್‌ನ ಕುಟುಂಬದವರ ಒತ್ತಡದ ಕಾರಣ ಇವರಿಬ್ಬರ ಸಂಬಂಧದಲ್ಲಿ ಬಿರುಕುಂಟಾಗಿ ಬ್ರೇಕ್ ಅಪ್ ಮಾಡಿಕೊಂಡರು.

ಮುದಸ್ಸರ್ ಅಜೀಜ್-ಸುಶ್ಮಿತಾ
ಹಲವು ಹಿಂದಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮುದಸ್ಸರ್ ಅಜೀಜ್ ಜೊತೆಗೂ ಸುಶ್ಮಿತಾ ಸೇನ್ ಕೆಲ ಕಾಲ ಪ್ರೀತಿಯಲ್ಲಿದ್ದರು. ಆದರೆ ಈ ಪ್ರೀತಿ ಸಹ ಹೆಚ್ಚು ದಿನ ಸಾಗಲಿಲ್ಲ.