For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ವಿಶ್ವ ಸುಂದರಿ ಸುಷ್ಮಿತಾ ಸೇನ್ ಪಡೆದ ಮರೆಯಲಾಗದ ಸ್ವಾಗತ

  |

  ನಟಿ ಸುಷ್ಮಿತಾ ಸೇನ್ ವಿಶ್ವ ಸುಂದರಿ ಪಟ್ಟ ಪಡೆದ ಮೊದಲ ಭಾರತೀಯ ಮಾಡಲ್. ಈ ಸಾಧನೆ ಮಾಡಿದ ಸುಷ್ಮಿತಾ ಸೇನ್ ಇಂದು (ನವೆಂಬರ್ 19) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ.

  1994 ರಲ್ಲಿ ಸುಷ್ಮಿತಾ ಸೇನ್ ಮೊದಲ ಬಾರಿಗೆ ವಿಶ್ವ ಸುಂದರಿ ಕಿರೀಟ ತೊಟ್ಟು ಭಾರತಕ್ಕೆ ಹೆಸರು ತಂದು ಕೊಟ್ಟರು. ಆ ದಿನ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಗಿತ್ತು. ಸುಷ್ಮಿತಾ ಸೇನ್ ಹುಟ್ಟುಹಬ್ಬದ ವಿಶೇಷ ಆ ಅಪರೂಪದ ವಿಡಿಯೋ ಇಲ್ಲಿದೆ.

  ದತ್ತು ಮಗಳ 'ಆ' ಮಾತು ಕೇಳಿ ಭಾವುಕರಾದ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ದತ್ತು ಮಗಳ 'ಆ' ಮಾತು ಕೇಳಿ ಭಾವುಕರಾದ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್

  25 ವರ್ಷಗಳ ಹಿಂದಿನ ಈ ವಿಡಿಯೋ ತುಂಬ ಸುಂದರವಾಗಿದೆ. ಕುದುರೆ ರಥದ ಮೇಲೆ ಸುಷ್ಮಿತಾ ಸೇನ್ ಮೆರವಣಿಗೆ ಮಾಡಲಾಗಿತ್ತು. ಸುತ್ತಲು ನೂರಾರೂ ಜನರು ಆಕೆಯನ್ನು ಸ್ವಾಗತ ಮಾಡಿದ್ದರು. ಶಾಲಾ ಮಕ್ಕಳು ಸಂಭ್ರಮಿದರು. ಈ ದೃಶ್ಯ ಕಂಡ ಸುಷ್ಮಿತಾ ಸೇನ್ ಮಾತೆ ಬಾರದಂತೆ ಆಗಿತ್ತು.

  ದಾರಿಯ ನಡುವೆ ಅಭಿಮಾನಿಗಳನ್ನು ಮಾತನಾಡಿಸುತ್ತಾ, ಅವರ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ, ಹಾಯ್, ಹಲೋ ಎಂದು ಕೈ ಬೀಸುತ್ತಾ ರಾಣಿಯಂತೆ ರಥದ ಮೇಲೆ ಸುಷ್ಮಿತಾ ಸೇನ್ ಬಂದರು.

  18 ವರ್ಷದಲ್ಲಿ ಮಿಸ್ ಇಂಡಿಯಾ ಗೆದ್ದ ಸುಷ್ಮಿತಾ ಸೇನ್ ಅದೇ ವರ್ಷ ಮಿಸ್ ಯುನಿವರ್ಸ್ ಆದರು. ನಂತರ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟು, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  Video: Sushmita Sen grand welcome video as Miss Universe.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X