»   » ವಿಚ್ಛೇದನದ ಅಸಲಿ ಕಾರಣ ಹೇಳಿದ ಹೃತಿಕ್ ಮಾಜಿ ಪತ್ನಿ ಸುಸೇನ್

ವಿಚ್ಛೇದನದ ಅಸಲಿ ಕಾರಣ ಹೇಳಿದ ಹೃತಿಕ್ ಮಾಜಿ ಪತ್ನಿ ಸುಸೇನ್

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಅವರ ಸಂಬಂಧ ಮುರಿದು ಬಿದ್ದಿರುವ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಇವರಿಬ್ಬರ ಡೈವೋರ್ಸ್ ಕೂಡ ಆಗಿದೆ.

ಸುಮಾರು 14 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಹೃತಿಕ್ ಮತ್ತು ಸುಸೇನ್ ಖಾನ್ ದಂಪತಿಗಳ ಡೈವೋರ್ಸ್ ವಿಚಾರ ಇಡೀ ಬಿಟೌನ್ ನಲ್ಲಿ ಭಯಂಕರ ದೊಡ್ಡ ಸುದ್ದಿಯಾಗಿತ್ತು.[ಹೃತಿಕ್-ಕಂಗನಾ ವಿವಾದದ ಬಗ್ಗೆ ಹೃತಿಕ್ ಮಾಜಿ ಪತ್ನಿ ಏನಂತಾರೆ?]

Sussanne Khan opens up on her divorce with Hrithik Roshan

ಅಂದಹಾಗೆ ಇದೀಗ ತಮ್ಮಿಬ್ಬರ ವಿಚ್ಛೇದನದ ಅಸಲಿ ಕಾರಣವನ್ನು ಹೃತಿಕ್ ಅವರ ಮಾಜಿ ಪತ್ನಿ ಸುಸೇನ್ ಖಾನ್ ಅವರು ಫೆಮಿನಾ ಮ್ಯಾಗಜೀನ್ ಗೆ ತಿಳಿಸುತ್ತಾ ಮನಬಿಚ್ಚಿ ಮಾತನಾಡಿದ್ದಾರೆ.

Sussanne Khan opens up on her divorce with Hrithik Roshan

'ನಮ್ಮಿಬ್ಬರ ದಾಂಪತ್ಯ ಒಂದು ಘಟ್ಟಕ್ಕೆ ಬಂದ ನಂತರ, ಇನ್ನು ಮುಂದಕ್ಕೆ ಇಬ್ಬರು ಬೇರೆ ಬೇರೆ ಆಗಿ ಇರೋದೇ ಲೇಸು ಅಂದುಕೊಂಡಂರಂತೆ. ಇದಕ್ಕೆ ಪ್ರತಿಯಾಗಿ ಕ್ರಮೇಣ ನಟ ಹೃತಿಕ್ ರೋಷನ್ ಅವರು ಕೂಡ ತನ್ನಿಂದ ದೂರ ಸರಿಯುತ್ತಿರುವುದನ್ನು ಅರಿತುಕೊಂಡ ಸುಸೇನ್ ಖಾನ್ ಬರೀ ತೋರಿಕೆಯ ದಾಂಪತ್ಯ ಜೀವನ ನಡೆಸುವ ಬದಲು ದೂರವಾಗಿ ಜೀವನ ಮಾಡುವುದೇ ಒಳ್ಳೆಯದು ಅನ್ನೋ ನಿರ್ಧಾರಕ್ಕೆ ಬಂದ್ವಿ' ಎಂದಿದ್ದಾರೆ.[ಕಂಗನಾ-ಹೃತಿಕ್ ಅಫೇರ್ ಕೇಸ್ ನಲ್ಲಿ ಮಹತ್ತರ ತಿರುವು]

Sussanne Khan opens up on her divorce with Hrithik Roshan

'ಆದರೂ ನಾವು ನಮ್ಮಿಬ್ಬರ ಮಕ್ಕಳ ಭವಿಷ್ಯಕ್ಕೋಸ್ಕರ ಇಂದಿಗೂ ಒಳ್ಳೆ ಗೆಳೆಯರಾಗಿದ್ದೇವೆ, ನಾನು ಹೃತಿಕ್ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದೇನೆ' ಎನ್ನುತ್ತಾರೆ ಸುಸೇನ್ ಖಾನ್.['ಕ್ವೀನ್' ಕಂಗನಾ-ಹೃತಿಕ್ ಬಗ್ಗೆ ಹೊರಬಿದ್ದಿರುವ ಶಾಕಿಂಗ್ ನ್ಯೂಸ್]

Sussanne Khan opens up on her divorce with Hrithik Roshan

ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ 2014 ರಲ್ಲಿ ಡೈವೋರ್ಸ್ ಮೂಲಕ ದೂರವಾಗಿದ್ದರು. ಮೂಲಗಳ ಪ್ರಕಾರ ಸುಸೇನ್ ಗೆ ನಟ ಅರ್ಜುನ್ ರಾಂಪಾಲ್ ಅವರ ಜೊತೆ ಹತ್ತಿರದ ಸಂಬಂಧವಿದ್ದು, ಹೃತಿಕ್ ಅವರ ಹೆಸರು ನಟಿ ಕಂಗನಾ ರನೌತ್ ಅವರ ಜೊತೆ ತಳುಕು ಹಾಕಿಕೊಂಡಿದ್ದಕ್ಕೆ ಗಂಡ-ಹೆಂಡತಿ ಸಂಬಂಧ ಮುರಿದು ಬಿತ್ತು ಅನ್ನೋ ಗುಮಾನಿ ಇದೆ.

English summary
An interview to Femina, Hrithik Roshan's wife Sussanne Khan came clear about her split with Hrithik and revealed the real reason behind their divorce.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada