For Quick Alerts
  ALLOW NOTIFICATIONS  
  For Daily Alerts

  OMG! ಮದುವೆಗೂ ಮುನ್ನವೇ ತಾಯಿ ಆಗಲಿರುವ ಸ್ವರಾ ಭಾಸ್ಕರ್!

  |

  ಬಾಲಿವುಡ್‌ನ ಖ್ಯಾತ ನಟಿ ಸ್ವರಾ ಭಾಸ್ಕರ್ ತಮ್ಮ ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈಗಾಗಲೇ ಸ್ವರಾ ಭಾಸ್ಕರ್ ಬಾಲಿವುಡ್‌ನಲ್ಲಿ ತಮ್ಮದೇ ಆದ ಪ್ರತ್ಯೇಕ ಛಾಪು ಮೂಡಿಸಿರುವ ನಟಿ. ಇದೀಗ ವೈಯಕ್ತಿಕ ಜೀವನದ ವಿಚಾರದಲ್ಲಿ ಸ್ವರಾ ಸದ್ದು ಮಾಡುತ್ತಾ ಇದ್ದಾರೆ.

  ಸ್ವರಾ ಭಾಸ್ಕರ್ ಸಿಹಿ ಸುದ್ದಿಯನ್ನು ಒಂದನ್ನು ಕೊಟ್ಟಿದ್ದಾರೆ. ಈ ಸುದ್ದಿ ಅಚ್ಚರಿಗೂ ಕಾರಣ ಆಗಿದೆ. ಯಾಕೆಂದರೆ ಸ್ವರಾ ಭಾಸ್ಕರ್ ಸದ್ಯದಲ್ಲಿಯೇ ತಾಯಿ ಆಗುತ್ತಿದ್ದಾರೆ. ಈ ಸುದ್ದಿ ಸಂಚಲನ ಮೂಡಿಸಿದೆ. ಸ್ವರಾ ಭಾಸ್ಕರ್ ತಾಯಿ ಆಗುತ್ತಿದ್ದಾರೆ ಎನ್ನುವ ವಿಚಾರ ಸಂಚಲನ ಮೂಡಿಸಿದೆ. ಆದರೆ ತಾಯಿ ಆಗಬೇಕು, ಕುಟುಂಬ ಹೊಂದಬೇಕು ಎನ್ನುವ ವಿಚಾರ ಈ ಹಿಂದೆಯೇ ಸ್ವರಾ ಹಂಚಿಕೊಂಡಿದ್ದರು.

  ದತ್ತು ಮಗು ಪಡೆಯಲು ಸ್ವರಾ ನಿರ್ಧಾರ!

  ದತ್ತು ಮಗು ಪಡೆಯಲು ಸ್ವರಾ ನಿರ್ಧಾರ!

  ಮದುವೆಗೂ ಮೊದಲೇ ಸ್ವರಾ ಭಾಸ್ಕರ್‌ ಮಗು ಪಡೆಯುತ್ತಿದ್ದಾರೆ. ಹಾಗಂತ ಸ್ವರಾ ಭಾಸ್ಕರ್ ಪ್ರಿಯತಮ ಅಥವಾ ಮುಂದೆ ಮದುವೆ ಆಗಲಿರುವ ವ್ಯಕ್ತಿಯೊಂದಿಗೆ ಮಗು ಪಡೆಯುತ್ತಿಲ್ಲ. ಬದಲಿಗೆ ಸ್ವರಾ ಭಾಸ್ಕರ್ ದತ್ತು ಮಗುವನ್ನು ಪಡೆದು ಕೊಳ್ಳಲು ನಿರ್ಧರಿಸಿದ್ದಾರೆ. ಸ್ವರಾ ಭಾಸ್ಕರ್ ದತ್ತು ಮಗುವನ್ನು ಪಡೆದುಕೊಳ್ಳಲು ಈಗಾಗಲೆ ಪ್ರಕ್ರಿಯೆ ಆರಂಭಿಸಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಸ್ವರಾ ಭಾಸ್ಕರ್‌ ಮಗುವಿನ ಜೊತೆಗೆ ಪ್ರತ್ಯಕ್ಷ ಆಗಲಿದ್ದಾರೆ.

  ಮಗುವನ್ನು ಹುಡುಕಲು ಅನಾಥಾಶ್ರಮ ಸುತ್ತಿದ್ದ ಸ್ವರಾ ಭಾಸ್ಕರ್!

  ಮಗುವನ್ನು ಹುಡುಕಲು ಅನಾಥಾಶ್ರಮ ಸುತ್ತಿದ್ದ ಸ್ವರಾ ಭಾಸ್ಕರ್!

  ಮಗುವನ್ನು ದತ್ತು ಪಡೆಯುವ ಮುನ್ನ ಸ್ವರಾ ಭಾಸ್ಕರ್ ಸಾಕಷ್ಟು ಅನಾಥಾಶ್ರಮಗಳನ್ನು ಸುತ್ತಿದ್ದಾರೆ. ಅಲ್ಲಿ ಲಕ್ಷಾಂತರ ಮಕ್ಕಳನ್ನು ನೋಡಿ ಬಂದಿದ್ದಾರೆ ಸ್ವರಾ ಭಾಸ್ಕರ್. ಜೊತೆಗೆ ದತ್ತು ಮಕ್ಕಳನ್ನು ಹೊಂದಿರುವ ಸಾಕಷ್ಟು ಪೋಷಕರನ್ನೂ ಸ್ವರಾ ಭಾಸ್ಕರ್ ಭೇಟಿ ಮಾಡಿ ಮಾತನಾಡಿದ್ದಾರೆ.

  ಅಷ್ಟೇ ಅಲ್ಲ "ನನ್ನ ಕನಸನ್ನು ನನಸಾಗಿಸಿಕೊಳ್ಳುವ ಏಕೈಕ ಮಾರ್ಗವೆಂದರೆ ಮಗುವನ್ನು ದತ್ತು ಪಡೆದುಕೊಳ್ಳುವುದು ಎಂದು ನಾನು ಭಾವಿಸುತ್ತೇನೆ" ಎಂದು ಸಂದರ್ಶನ ಒಂದರಲ್ಲಿ ಸ್ವರಾ ಭಾಸ್ಕರ್‌ ಹೇಳಿ ಕೊಂಡಿದ್ದರು.

  ಮಗುವನ್ನು ದತ್ತು ಪಡೆಯುವ ಮುನ್ನ ಸ್ವರಾ ಸಂಶೋಧನೆ ಮಾಡಿದ್ದಾರೆ ಅದರ ಬಗ್ಗೆಯೂ ಮಾತನಾಡಿದ್ದಾರೆ. "ನಮ್ಮ ದೇಶದಲ್ಲಿ ಒಂಟಿ ಮಹಿಳೆಯರಿಗೆ ಮಕ್ಕಳನ್ನು ದತ್ತು ಪಡೆಯಲು ಅವಕಾಶ ನೀಡಿರುವುದು ಅದೃಷ್ಟ. ಇದರಿಂದಾಗಿ ಮಗುವನ್ನು ದತ್ತು ಪಡೆದ ಅನೇಕ ದಂಪತಿಗಳನ್ನು ನಾನು ಭೇಟಿ ಮಾಡಿದ್ದೇನೆ. ಅನೇಕ ಮಕ್ಕಳು ಈಗ ವಯಸ್ಕರಾಗಿದ್ದಾರೆ. ಅವರ ಪ್ರಕ್ರಿಯೆ ಮತ್ತು ಅನುಭವದ ಬಗ್ಗೆ ನಾನು ವ್ಯಾಪಕ ಸಂಶೋಧನೆ ಮಾಡಿದ್ದೇನೆ" ಎಂದಿದ್ದಾರೆ.

  ಮಕ್ಕಳನ್ನು ದತ್ತು ಪಡೆದ ಹಲವು ಬಾಲಿವುಡ್‌ ತಾರೆಯರು!

  ಮಕ್ಕಳನ್ನು ದತ್ತು ಪಡೆದ ಹಲವು ಬಾಲಿವುಡ್‌ ತಾರೆಯರು!

  ಬಾಲಿವುಡ್‌ನಲ್ಲಿ ಈಗಾಗಲೇ ಹಲವು ತಾರೆಯರು ಮಕ್ಕಳನ್ನು ದತ್ತು ಪಡೆದಿದ್ದಾರೆ. ನಟಿ ಸುಶ್ಮಿತಾ ಸೇನ್ ತನ್ನ ಮೊದಲ ಮಗು ಅಲಿಸಾಳನ್ನು ದತ್ತು ಪಡೆದಾಗ ಆಕೆಗೆ ಕೇವಲ 25 ವರ್ಷ ವಯಸ್ಸಿತ್ತು. 2010 ರಲ್ಲಿ ಮತ್ತೊಂದು ಮಗುವನ್ನು ದತ್ತು ಪಡೆದರು. ಇಬ್ಬರೂ ಹೆಣ್ಣು ಮಕ್ಕಳನ್ನು ಸುಶ್ಮಿತಾ ಸೇನ್ ದತ್ತು ಪಡೆದಿದ್ದಾರೆ. ಸಿಂಗಲ್‌ ಪೇರೆಂಟ್‌ ಆಗಿ ಸುಶ್ಮಿತಾ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.

  ದತ್ತು ಮಕ್ಕಳನ್ನು ಪಡೆದ ರವೀನಾ ಟಂಡನ್, ಮಂದಿರ ಬೇಡಿ, ಸನ್ನಿಲಿಯೋನೆ!

  ದತ್ತು ಮಕ್ಕಳನ್ನು ಪಡೆದ ರವೀನಾ ಟಂಡನ್, ಮಂದಿರ ಬೇಡಿ, ಸನ್ನಿಲಿಯೋನೆ!

  ಇನ್ನು ನಟಿ ರವೀನಾ ಟಂಡನ್ ಕೂಡ ತಮ್ಮ 21ನೇ ವಯಸ್ಸಿಗೆ ದತ್ತು ಮಕ್ಕಳನ್ನು ಪಡೆದು ಕೊಂಡಿದ್ದರು. ಪೂಜಾ ಮತ್ತು ಛಾಯ ಎನ್ನುವ ಇಬ್ಬರು ಹೆಣ್ಣು ಮಕ್ಕಳನ್ನು ರವೀನಾ ದತ್ತು ಪಡೆದಿದ್ದರು. ನಂತರ ರವೀನಾ ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿದರು. ಇವರನ್ನು ಹೊರತು ಪಡಿಸಿ ಮಂದಿರಾ ಬೇಡಿ, ಸನ್ನಿಲಿಯೋನ್ ಕೂಡ ದತ್ತು ಮಕ್ಕಳೊಂದಿಗೆ ಖುಷಿಯ ಜೀವನ ಸಾಗಿಸುತ್ತಾ ಇದ್ದಾರೆ.

  English summary
  Bollywood Actress Swara Bhaskar to become mother without marriage, know more

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X