For Quick Alerts
  ALLOW NOTIFICATIONS  
  For Daily Alerts

  ಮೆಡಿಕಲ್ ಶಾಪ್‌ನಲ್ಲಿ 2 ಪ್ಯಾಕೇಟ್ ಕಾಂಡೋಮ್ ಕೇಳಿದ ಮಿಲ್ಕಿ ಬ್ಯೂಟಿ ತಮನ್ನಾ!

  |

  ಮುಂಬೈ ಬ್ಯೂಟಿ ತಮನ್ನಾ ಟಾಲಿವುಡ್‌, ಕಾಲಿವುಡ್‌ನಲ್ಲಿ ಮಿಂಚಿದ್ದೇ ಹೆಚ್ಚು. ಕನ್ನಡದ ಎರಡು ಐಟಂ ಸಾಂಗ್‌ನಲ್ಲೂ ಕುಣಿದ ಚೆಲುವೆ ಈಗ ಮಹಿಳಾ ಪ್ರಧಾನ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಮಿಲ್ಕಿ ಬ್ಯೂಟಿ ನಟನೆಯ 'ಬಬ್ಲಿ ಬೌನ್ಸರ್' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿತ್ರದಲ್ಲಿ ತಮನ್ನಾ ಮೆಡಿಕಲ್ ಶಾಪ್‌ಗೆ ಹೋಗಿ ಕಾಂಡೋಮ್ ಕೇಳುವ ದೃಶ್ಯವೂ ಇದೆ.

  ಮಧುರ್ ಭಂಡಾರ್‌ಕರ್ ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ ಸಿನಿಮಾ 'ಬಬ್ಲಿ ಬೌನ್ಸರ್'. ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ನೇರವಾಗಿ ಈ ಸಿನಿಮಾ ರಿಲೀಸ್ ಆಗ್ತಿದೆ. ಚಿತ್ರದಲ್ಲಿ ಲೇಡಿ ಬೌನ್ಸರ್‌ ಆಗುವ ಯುವತಿಯ ಪಾತ್ರದಲ್ಲಿ ತಮನ್ನಾ ಬಾಟಿಯಾ ನಟಿಸಿದ್ದಾರೆ. ಫತೇಫುರ್ ಬೇರಿ ಅನ್ನುವ ಊರು. ಅದು ಪೈಲ್ವಾನರ ನಾಡು. ಆ ಊರಿನ ಗಂಡಸರೆಲ್ಲಾ ಪೈಲ್ವಾನರಾಗಿ ಬೌನ್ಸರ್‌ ಕೆಲಸಕ್ಕೆ ಹೋಗುತ್ತಿರುತ್ತಾರೆ. ಊರಿನಲ್ಲಿ ಗಂಡುಬೀರಿಯಂತೆ ಇರುವ ಬಬ್ಲಿ ಕೂಡ ಲೇಡಿ ಬೌನ್ಸರ್ ಕೆಲಸಕ್ಕೆ ಸೇರುತ್ತಾಳೆ. ಮುಂದೇನಾಗುತ್ತದೆ ಅನ್ನುವುದೇ ಸಿನಿಮಾ ಕಥೆ.

  ರಣ್ಬೀರ್-ಆಲಿಯಾರ ಬ್ರಹ್ಮಾಸ್ತ್ರಗೆ ಬಲ ತುಂಬಿದ ದೆಹಲಿ ಹೈಕೋರ್ಟ್ರಣ್ಬೀರ್-ಆಲಿಯಾರ ಬ್ರಹ್ಮಾಸ್ತ್ರಗೆ ಬಲ ತುಂಬಿದ ದೆಹಲಿ ಹೈಕೋರ್ಟ್

  'ಬಬ್ಲಿ ಬೌನ್ಸರ್' ಸಿನಿಮಾ ಹಿಂದಿ ಜೊತೆಗೆ ತಮಿಳು, ತೆಲುಗಿಗೂ ಡಬ್ ಆಗಿ ರಿಲೀಸ್ ಆಗ್ತಿದೆ. 3 ಭಾಷೆಗಳಲ್ಲೂ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ತಮನ್ನಾ ಲೇಡಿ ಪೈಲ್ವಾನ್ ಅವತಾರದಲ್ಲಿ ಅಬ್ಬರಿಸೋಕೆ ಬರ್ತಿದ್ದಾರೆ. ಟ್ರೈಲರ್‌ನಲ್ಲಿ ಬಬ್ಲಿ ಮೆಡಿಕಲ್ ಶಾಪ್‌ಗೆ 2 ಪ್ಯಾಕೇಟ್‌ ಕಾಂಡೋಮ್ ಕೊಂಡುಕೊಳ್ಳುವ ದೃಶ್ಯ ಹೈಲೆಟ್‌ ಆಗಿದೆ. ತಮನ್ನಾ ಜೊತೆಗೆ ಅಭಿಷೇಕ್ ಬಜಾಜ್, ಸಹೀಲ್ ವೈದ್, ಸೌರಭ್ ಶುಕ್ಲಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸ್ಟಾರ್ ಸ್ಟುಡಿಯೋಸ್, ಜಂಗ್ಲಿ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ 'ಬಬ್ಲಿ ಬೌನ್ಸರ್' ಸಿನಿಮಾ ನಿರ್ಮಾಣವಾಗಿದೆ.

  5 ತಿಂಗಳ ಹಿಂದೆ ಸೆಟ್ಟೇರಿದ 'ಬಬ್ಲಿ ಬೌನ್ಸರ್' ಸಿನಿಮಾ ಈಗ ನೇರವಾಗಿ ಓಟಿಟಿಗೆ ಬರಲು ಸಿದ್ಧವಾಗಿದೆ. ತನೀಷ್ ಬಾಗ್ಚಿ, ಕರಣ್ ಮಲ್ಹೋತ್ರಾ ಸಂಗೀತ, ಹಿಮ್ಮಾ ದಮೀಜಾ ಛಾಯಾಗ್ರಹಣ ಚಿತ್ರಕ್ಕಿದೆ. ಸದ್ಯ ಟಾಲಿವುಡ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ತಮನ್ನಾ ಹೆಚ್ಚು ನಟಿಸ್ತಿದ್ದಾರೆ. ಒಂದ್ಕಾಲದಲ್ಲಿ ಸೂಪರ್‌ ಸ್ಟಾರ್‌ಗಳ ಜೊತೆ ಮಿಂಚಿದ ತಮನ್ನಾ ಈಗ ಯುವ ನಟರ ಜೊತೆಗೂ ಸ್ಕ್ರೀನ್‌ಶೇರ್ ಮಾಡಿಕೊಳ್ಳುತ್ತಿದ್ದಾರೆ.

  ಕನ್ನಡದ 'ಲವ್‌ ಮಾಕ್ಟೇಲ್' ತೆಲುಗು ರೀಮೆಕ್‌ 'ಗುರ್ತುಂದಾ ಸೀತಾಕಾಲಂ' ಚಿತ್ರದಲ್ಲಿ ನಾಯಕಿಯಾಗಿ ಮಿಲ್ಕಿ ಬ್ಯೂಟಿ ಮಿಂಚಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಜೊತೆ 'ಭೋಳಾ ಶಂಕರ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ಬೋಲೆ ಚೂಡಿಯಾನ್' ಹಾಗೂ 'ಪ್ಲ್ಯಾನ್ A ಪ್ಲ್ಯಾನ್ B' ಅನ್ನುವ ಮತ್ತೆರಡು ಹಿಂದಿ ಸಿನಿಮಾಗಳ ಚಿತ್ರೀಕರಣವೂ ನಡೀತಿದೆ. ಹೊಸ ನಟಿಯರ ಭರಾಟೆ ನಡುವೆ ತಮನ್ನಾ ಸೈಡ್‌ ಲೈನ್‌ ಆಗ್ತಿದ್ದು, ಸಿಕ್ಕ ಪಾತ್ರಗಳಲ್ಲಿ ನಟಿಸಿ ಕಾಲ ದೂಡುತ್ತಿದ್ದಾರೆ. 'ಬಬ್ಲಿ ಬೌನ್ಸರ್' ಆಗಿ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ತಮನ್ನಾ ಬರ್ತಿದ್ದಾರೆ.

  English summary
  Tamannaah Bhatia Starrer Babli Bouncer Movie Trailer Released. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X