ಬ್ರಹ್ಮಾಸ್ತ್ರ ಚಿತ್ರೀಕರಣ ಮುಗಿಸಿದ ತೆಲುಗು ನಟ ನಾಗಾರ್ಜುನ
ಸೌತ್ ಸೂಪರ್ ಸ್ಟಾರ್ ನಾಗಾರ್ಜುನ ಅಕ್ಕಿನೇನಿ ಮಂಗಳವಾರ ಬ್ರಹ್ಮಾಸ್ತ್ರ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಮುಂಬೈನಲ್ಲಿ ಅಂತಿಮ ಹಂತದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ನಾಗಾರ್ಜುನ ತನ್ನ ಭಾಗದ ದೃಶ್ಯಗಳ ಚಿತ್ರೀಕರಣ ಸಂಪೂರ್ಣವಾಗಿ ಮುಗಿಸಿಕೊಟ್ಟಿದ್ದಾರೆ.
ಬ್ರಹ್ಮಾಸ್ತ್ರ ಶೂಟಿಂಗ್ ಮುಗಿಸಿದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ನಾಗಾರ್ಜುನ ''ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಅವರ ಜೊತೆ ಶೂಟಿಂಗ್ ಮಾಡಿದ್ದು ಅದ್ಭುತ ಅನುಭವ. ಅನಯ್ ಮುಖರ್ಜಿ ರಚಿಸಿರುವ ಅದ್ಭುತ ಜಗತ್ತು ನೋಡಲು ಕಾಯುತ್ತಿದ್ದೇನೆ'' ಎಂದು ಖುಷಿಯಾಗಿದ್ದಾರೆ.
ರಣ್ಬೀರ್ ಕಪೂರ್, ಆಲಿಯಾ ಭಟ್, ನಾಗಾರ್ಜುನ, ಅಮಿತಾಭ್ ಬಚ್ಚನ್, ಮೌನಿ ರಾಯ್ ಸೇರಿದಂತೆ ಬಹುದೊಡ್ಡ ತಾರಬಳಗ ಚಿತ್ರದಲ್ಲಿದೆ. ಈ ಚಿತ್ರವನ್ನು ಅಯನ್ ಮುಖರ್ಜಿ ನಿರ್ದೇಶಿಸುತ್ತಿದ್ದು, ಧರ್ಮ ಪ್ರೊಡಕ್ಷನ್ ಮತ್ತು ಫಾಕ್ಸ್ ಸ್ಟಾರ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದ್ದಾರೆ.

ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಆಗುತ್ತಿದೆ. ಬಜೆಟ್ ವಿಚಾರದಲ್ಲಿ ಬ್ರಹ್ಮಾಸ್ತ್ರ ಭಾರಿ ಚರ್ಚೆಯಲ್ಲಿದೆ. 150-300 ಕೋಟಿವರೆಗೂ ಬಂಡವಾಳ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು 2019ರಲ್ಲಿ ಶೂಟಿಂಗ್ ಆರಂಭಿಸಿದ್ದ ಚಿತ್ರತಂಡ 2020ರಲ್ಲಿ ತೆರೆಗೆ ಬರುವುದಾಗಿ ಘೋಷಿಸಿತ್ತು. ಆದರೆ, ಲಾಕ್‌ಡೌನ್ ಕಾರಣದಿಂದ ಮತ್ತಷ್ಟು ವಿಳಂಬವಾಗಿದೆ. ಕೊನೆಯ ಹಂತದ ಶೂಟಿಂಗ್‌ನಲ್ಲಿ ತೊಡಗಿಕೊಂಡಿರುವ ಬ್ರಹ್ಮಾಸ್ತ್ರ ಈ ವರ್ಷದ ಅಂತ್ಯಕ್ಕೆ ಚಿತ್ರಮಂದಿರದಲ್ಲಿ ದರ್ಶನ ಕೊಡಬಹುದು.


Click it and Unblock the Notifications