For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ತೊರೆದ 'ಆರ್ಟಿಕಲ್-15' ನಿರ್ದೇಶಕ ಅನುಭವ್ ಸಿನ್ಹ ಸಿನಿಮಾ ಜರ್ನಿ

  By ಫಿಲ್ಮ್ ಡೆಸ್ಕ್
  |

  ಬಾಲಿವುಡ್ ನಲ್ಲಿ ಬೇರುಬಿಟ್ಟಿರುವ ಸ್ವಜನ ಪಕ್ಷಪಾತದ ವಿರುದ್ಧ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಇದರ ವಿರುದ್ಧ ಅನೇಕರ ಕಲಾವಿದರು ಧ್ವನಿ ಎತ್ತಿದ್ದಾರೆ. ನಟ ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ನ ಕರಾಳಮುಖ ಬಹಿರಂಗವಾಗಿದೆ. ಬಾಲಿವುಡ್ ಒಳರಾಜಕಿಯದ ಬಗ್ಗೆ ಕೇಳಿ ಸಿನಿಪ್ರಿಯರು ಅಸಮಾಧಾನ ಹೊರಹಾಕುತ್ತಿದ್ದಾರೆ.

  Danish Sait ಬಡಿಸಲಿರುವ French Biryani ಹಿಂದಿನ ಕಥೆ ಕೇಳಿ | Filmibeat Kannada

  ನಟಿ ಕಂಗನಾ ರಣವಾತ್ ಈ ವಿಚಾರವಾಗಿ ಬಾಲಿವುಡ್ ನ ಪ್ರಬಲ ವ್ಯಕ್ತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿಗಷ್ಟೆ ದಬಂಗ್ ಸಿನಿಮಾ ನಿರ್ದೇಶಕ ಅಭಿನವ್ ಕಶ್ಯಪ್ ಸಲ್ಮಾನ್ ಖಾನ್ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಇದೀಗ ಖ್ಯಾತ ನಿರ್ದೇಶಕ ಅನುಭವ್ ಸಿನ್ಹ ಬಾಲಿವುಡ್ ಗೆ ಗುಡ್ ಬೈ ಹೇಳಿರುವುದು ಅಚ್ಚರಿ ಮೂಡಿಸಿದೆ. ಮುಂದೆ ಓದಿ...

  ಅನುಭವ್ ಸಿನ್ಹ ಸಿನಿಮಾಗಳು

  ಅನುಭವ್ ಸಿನ್ಹ ಸಿನಿಮಾಗಳು

  ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುಭವ್ ಸಿನ್ಹ ಬಾಲಿವುಡ್ ಮೇಲೆ ಬೇಸರ ಹೊರಹಾಕಿದ್ದಾರೆ. ರಾ ಒನ್, ಮುಲ್ಕ್, ಆರ್ಟಿಕಲ್ 15 ಮತ್ತು ಥಪ್ಪಡ್ ಅಂತಹ ಅದ್ಭುತ ಸಿನಿಮಾಗಳನ್ನು ನೀಡಿದ ನಿರ್ದೇಶಕ ಬಾಲಿವುಡ್ ಬಿಡುತ್ತಿರುವುದಾಗಿ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಅಚ್ಚರಿ ಮೂಡಿಸಿದೆ. ಸಮಕಾಲಿನ ಸಮಸ್ಯೆಯನ್ನು, ಸೂಕ್ಷ್ಮ ವಿಚಾರಗಳನ್ನುಅಷ್ಟೆ ಅಚ್ಚುಕಟ್ಟಾಗಿ ತೆರೆಮೇಲೆ ತರುವಲ್ಲಿ ಅನುಭವ್ ಎತ್ತಿದ ಕೈ. ಭಿನ್ನವಾದ ಸಿನಿಮಾಗಳನ್ನು ಕಟ್ಟಿಕೊಡುತ್ತಿದ್ದ ನಿರ್ದೇಶಕ ಸಿನಿಮಾರಂಗ ತೊರೆದಿರುವುದು ಅಭಿಮಾನಿಗಳಿಗೆ ಬೇಸರ ಸಂಗತಿ.

  ಬಾಲಿವುಡ್ ಗೆ ರಾಜಿನಾಮೆ ನೀಡಿರುವುದಾಗಿ ಅನುಭವ್ ಪೋಸ್ಟ್

  ಬಾಲಿವುಡ್ ಗೆ ರಾಜಿನಾಮೆ ನೀಡಿರುವುದಾಗಿ ಅನುಭವ್ ಪೋಸ್ಟ್

  "ಎನಫ್..ಬಾಲಿವುಡ್ ಗೆ ರಾಜಿನಾಮೆ ನೀಡಲು ನಿರ್ಧರಿಸಿದ್ದೀನಿ" ಎಂದು ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಅನುಭವ್ ಸಿನ್ಹ ಎನ್ನುವ ಟ್ವಿಟ್ಟರ್ ಹ್ಯಾಂಡಲ್ ಪಕ್ಕದಲ್ಲಿ 'ನಾಟ್ ಬಾಲಿವುಡ್' ಸೇರಿಸಿಕೊಂಡಿದ್ದಾರೆ. ಸ್ವಜನಪಕ್ಷಪಾತದ ಬಗ್ಗೆ ಬಾಲವುಡ್ ನಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ ಅನುಭವ್ ಚಿತ್ರರಂಗ ತೊರೆಯುತ್ತಿರುವುದು ಅಚ್ಚರಿ ಮೂಡಿಸಿದೆ.

  ಅಭಿಮಾನಿಗಳ ಬೇಸರ

  ಅಭಿಮಾನಿಗಳ ಬೇಸರ

  ಅದ್ಭುತ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಅನುಭವ್ ಮಾಡಿರುವ ಪೋಸ್ಟ್ ಕೆಳಗೆ ಸಾಕಷ್ಟು ಮಂದಿ ಬೇಸರ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರು ತಾವು ಕೂಡ ಬಾಲಿವುಡ್ ಸಿನಿಮಾ ನೋಡುವುದಿಲ್ಲ, ಬಾಲಿವುಡ್ ತೊರೆಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.

  ಬಿಹಾರ ಮೂಲದ ನಿರ್ದೇಶಕ ಅನುಭವ್

  ಬಿಹಾರ ಮೂಲದ ನಿರ್ದೇಶಕ ಅನುಭವ್

  55 ವರ್ಷದ ಅನುಭವ್ ಸಿನ್ಹ ಬಿಹಾರ ಮೂಲದವರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಅನುಭವ್, ಸಿನಿಮಾ ಮೇಲಿನ ಪ್ರೀತಿಯಿಂದ ತೊಂಬತ್ತರ ದಶಕದಲ್ಲಿಯೆ ಮುಂಬೈಗೆ ಬಂದರು. 2001ರಲ್ಲಿ ತುಮ್ ಬಿನ್ ಸಿನಿಮಾ ಮೂಲಕ ನಿರ್ದೇಶಕರಾಗಿ ಬಹಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ. 2016ರಲ್ಲಿ ತುಮ್ ಬಿನ್ ಸಿನಿಮಾದ ಸೀಕ್ವಲ್ ಕೂಡ ಮಾಡಿದ್ದಾರೆ. ಇತ್ತೀಗೆ ಬಂದ ಆರ್ಟಿಕಲ್ 15 ಮತ್ತು ಥಪ್ಪಡ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾಗಳು. ಆದರೀಗ ದಿಢೀರ್ ಅಂತ ರಾಜಿನಾಮೆ ಕೊಟ್ಟಿರುವುದು ಅಭಿಮಾನಿಗಳಿಗೆ ಆಘಾತವುಂಟುಮಾಡಿದೆ.

  English summary
  Thappad movie director Anubhav Sinha resign from Bollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X