For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಮಾಫಿಯಾಗಳ ಕರಾಳ ರಹಸ್ಯಗಳನ್ನು ಬಹಿರಂಗಪಡಿಸಿದ 7 ಸೆಲೆಬ್ರಿಟಿಗಳು

  |

  ಬಾಲಿವುಡ್ ಮಾಫಿಯಾ ಮತ್ತು ಬಾಲಿವುಡ್‌ನಲ್ಲಿ ನಡೆಯುವ ಭಯಾನಕ ಸ್ವಜನಪಕ್ಷಪಾತದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಕೆಲವರು ಇದರ ಬಗ್ಗೆ ಬಹಿರಂಗವಾಗಿಯೇ ಮಾತನಾಡಿದ್ದಾರೆ. ಬಾಲಿವುಡ್ ಎಂಬುದೇ ಒಂದು ದೊಡ್ಡ ಮಾಫಿಯಾ, ಅದರ ಒಳಗಿರುವ ಕೊಳಕು ರಾಜಕೀಯ ಒಬ್ಬರನ್ನು ಒಬ್ಬರು ತುಳಿಯಲು ಮಾಡುವ ಪ್ರಯತ್ನಗಳು. ಇದಕ್ಕಾಗಿ ಬಾಲಿವುಡ್ ಒಂದು ಮಾಫಿಯಾ ಆಗಿ ನಿರಂತರವಾಗಿ ಕೆಲಸ ಮಾಡಿಕೊಂಡು ಬಂದಿದೆ. ಬಾಲಿವುಡ್ ಹೇಗೆ ಇತರರ ಮೇಲೆ ಒತ್ತಡ ಹೇರುತ್ತದೆ. ಒಳಗಿರುವ ಶಕ್ತಿಗಳು ಹೇಗೆ ಹೊರಗಿನ ಪ್ರತಿಭೆಗಳನ್ನು ಹೊಸಕಿ ಹಾಕುತ್ತದೆ. ಬಾಲಿವುಡ್ ಒಳಗೆ ಇಂತಹ ಅಪಮಾನಗಳನ್ನು ಎದುರಿಸಿದ ಸೆಲೆಬ್ರಿಟಿಗಳು ತಮ್ಮ ಅನುಭವಗಳನ್ನು ಹೀಗೆ ಹಂಚಿಕೊಳ್ಳುತ್ತಾರೆ.

  ''ನಟ ಸಲ್ಮಾನ್ ಖಾನ್ ಅವರು ಬಾಲಿವುಡ್ ನಲ್ಲಿ ತಮ್ಮ ವೃತ್ತಿಜೀವನವನ್ನು ಹಾಳುಮಾಡಿದ್ದಾರೆ " ಎಂದು ಅಭಿನವ್ ಕಶ್ಯಪ್ ಹೇಳಿದ್ದರು. ಸಲ್ಮಾನ್ ಖಾನ್ ಕೆರಿಯರ್‌ನಲ್ಲಿ ದೊಡ್ಡ ಹಿಟ್ ಚಿತ್ರ 'ದಬಾಂಗ್' ಚಿತ್ರದ ನಿರ್ದೇಶಕ ಅಭಿನವ್ ಕಶ್ಯಪ್. ಸಲ್ಮಾನ್ ಖಾನ್ ಮತ್ತು ಅವನ ಸೋದರನ ಜೊತೆ ಉಂಟಾದ ಭಿನ್ನಾಭಿಪ್ರಾಯದಿಂದ 'ದಬಾಂಗ್-2' ಚಿತ್ರದಿಂದ ಹೊರನಡೆದರು ಇದರ ನಂತರ ಸಲ್ಮಾನ್ ಮತ್ತು ಅರ್ಬಾಜ್ ಖಾನ್ ತನ್ನ ಎಲ್ಲಾ ಪ್ರಾಜೆಕ್ಟ್ ಗಳಿಗೆ ತಡೆಗೋಡೆಯಾಗಿ ಕಾರ್ಯನಿರ್ವಹಿಸಿದರು ಎಂದು ಆರೋಪಿಸುವ ಅಭಿನವ್ ಕಶ್ಯಪ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಸಲ್ಮಾನ್ ಖಾನ್‌ನ ಕೊಳಕು ಮುಖವನ್ನು ಬಹಿರಂಗಪಡಿಸಿದ್ದರು.

  "ಸಲ್ಮಾನ್ ಖಾನ್ ಮತ್ತು ಅವರ ಕುಟುಂಬವು 'ಬೇಷರಂ' ಚಿತ್ರದ ಬಿಡುಗಡೆಯನ್ನು ಹಾಳುಮಾಡಿತು ಮತ್ತು ಬಿಡುಗಡೆಗೆ ಮುನ್ನ ನನ್ನ ಮತ್ತು ನನ್ನ ಚಲನಚಿತ್ರ 'ಬೇಷರಂ' ವಿರುದ್ಧ ನಿರಂತರವಾದ ಋಣಾತ್ಮಕ ಅಭಿಯಾನವನ್ನು ನಡೆಸಲು ಅವರ PRO ಗಳು ನಿರಂತರವಾಗಿ ಕೆಲಸ ಮಾಡಿದ್ದಾರೆ. ಇದರಿಂದ ನನ್ನ ಚಿತ್ರವನ್ನು ಖರೀದಿಸಲು ವಿತರಕರು ಹೆದರಿದ್ದರು. ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ನಾನು ಚಿತ್ರವನ್ನು ನಾವೇ ಬಿಡುಗಡೆ ಮಾಡುವಷ್ಟು ಸಾಮರ್ಥ್ಯ ಮತ್ತು ಧೈರ್ಯವನ್ನು ಹೊಂದಿದ್ದೆವು ಆದರೆ ಯುದ್ಧವು ಪ್ರಾರಂಭವಾಯಿತು. ನನ್ನ ಚಿತ್ರದ ಗಲ್ಲಾಪೆಟ್ಟಿಗೆ ಕುಸಿಯುವವರೆಗೂ ನನ್ನ ಶತ್ರುಗಳು ಚಿತ್ರದ ವಿರುದ್ಧ ನಿರಂತರ ಋಣಾತ್ಮಕ ಟ್ರೋಲಿಂಗ್ ಮತ್ತು ಕೆಟ್ಟದಾಗಿ ಮಾತನಾಡುವ ಅಭಿಯಾನವನ್ನು ನಡೆಸುತ್ತಿದ್ದರು'' ಎಂದಿದ್ದಾರೆ.

  ಉದ್ಯಮವು ಹೊರಗಿನವರನ್ನು ಗೌರವಿಸುವುದಿಲ್ಲ: ಮನೋಜ್ ಬಾಜಪೇಯಿ

  ಉದ್ಯಮವು ಹೊರಗಿನವರನ್ನು ಗೌರವಿಸುವುದಿಲ್ಲ: ಮನೋಜ್ ಬಾಜಪೇಯಿ

  WOIN ಗೆ ನೀಡಿದ ಸಂದರ್ಶನದಲ್ಲಿ ಮನೋಜ್ ಬಾಜಪೇಯಿ ಉದ್ಯಮವು ಪ್ರತಿಭೆಯನ್ನು ವ್ಯರ್ಥ ಮಾಡುತ್ತಿದೆ ಎಂದು ಹೇಳಿದ್ದಾರೆ "ಈ ಬಾಲಿವುಡ್ ಉದ್ಯಮವು ಪ್ರತಿಭಾವಂತರನ್ನು ಉಪಯೋಗಿಸಿಕೊಳ್ಳದೇ ಪ್ರತಿಭೆಯನ್ನು ವ್ಯರ್ಥ ಮಾಡಿದೆ ಎಂದು ನಾನು ಮೊದಲೇ ಹೇಳಿದ್ದೇನೆ;ಎಷ್ಟರಮಟ್ಟಿಗೆಂದರೆ ಬೇರೆ ಯಾವುದೇ ದೇಶದಲ್ಲಿ ಕೂಡ ಇಲ್ಲಿ ಪ್ರತಿಭೆಗಳಿಗೆ ಅನ್ಯಾಯವಾಗುವುಷ್ಟು ಮತ್ತೊಂದು ನಡೆಯುವುದಿಲ್ಲ. ಮೊದಲಿನಿಂದಲೂ ಇಲ್ಲಿ ಬಾಲಿವುಡ್ ನವರು ಮತ್ತು ಹೊರಗಿನವರು ಎಂಬ ಭೇದ-ಭಾವ ಇದ್ದಿದ್ದೆ. ಹೊರಗಿನ ಜನರನ್ನು ಗೌರವಿಸದ ಈ ಉದ್ಯಮದಲ್ಲಿ ನಾನು ಹೇಗೆ ಬದುಕುಳಿದೆ? ಎಂಬುದು ಆಶ್ಚರ್ಯದ ಸಂಗತಿ. ಇದು ಇಂತಹ ಕೆಟ್ಟ ಮನಸ್ಥಿತಿಯನ್ನು ಹೊಂದಿದೆ ಎಂದರೆ ಒಂದು ಒಳ್ಳೆಯ ಚಿತ್ರವುಗಲ್ಲಾಪೆಟ್ಟಿಗೆಯಲ್ಲಿ ಸೋತರೆ ನೀವು ಉದ್ಯಮವನ್ನು ತಕ್ಷಣ ಮರೆತುಬಿಡಿ.

  ಏಕೆಂದರೆ ಅವರು ನಂತರ ನಿಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ ಅಥವಾ ಮರೆತುಬಿಡುತ್ತಾರೆ.ಏಕೆಂದರೆ ನೀವು ಒಳ್ಳೆಯ ಚಲನಚಿತ್ರ ಅಥವಾ ಕೆಟ್ಟ ಚಲನಚಿತ್ರವನ್ನು ಮಾಡಿದರೂ, ನೀವು ಉತ್ತಮ ಪ್ರದರ್ಶನ ನೀಡಲಿ ಅಥವಾ ಕೆಟ್ಟ ಪ್ರದರ್ಶನವನ್ನು ನೀಡಲಿ ಅವರು (ಬಾಲಿವುಡ್ ಒಳಗಿನ ಮಂದಿ)ನಿಮ್ಮನ್ನು ಟೀಕಿಸುತ್ತಾರೆ. ಮುಖ್ಯವಾಹಿನಿಯ ವಿಮರ್ಶಕರು ಮತ್ತು ವ್ಯಾಪಾರಿ ವಿಶ್ಲೇಷಕರು ಅದರ ಮೇಲೆ ಸವಾರಿ ಮಾಡುತ್ತಾರೆ ಮತ್ತು ಅವರು ಅದನ್ನು ಕೆಟ್ಟ ಚಿತ್ರ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಾರೆ. ಎಲ್ಲವೂ ಒಳಗೆ ವ್ಯವಸ್ಥಿತವಾಗಿ ನಡೆಯುತ್ತದೆ.

  ಬಾಲಿವುಡ್ ಪಾರದರ್ಶಕತೆಯ ಬಗ್ಗೆ ಕಂಗನಾ ರನೌತ್ ಅನುಮಾನ!

  ಬಾಲಿವುಡ್ ಪಾರದರ್ಶಕತೆಯ ಬಗ್ಗೆ ಕಂಗನಾ ರನೌತ್ ಅನುಮಾನ!

  ಕಂಗನಾ ರಣಾವತ್ ಇತ್ತೀಚಿನ ದಿನಗಳಲ್ಲಿ ತನ್ನ ಮನಸ್ಥಿತಿಯನ್ನು ಕಳೆದುಕೊಂಡವಳು ಎಂದು ಟ್ಯಾಗ್ ಮಾಡಲಾಗುತ್ತದೆ. ಆಕೆ ಕೇವಲ ವರ್ಚಸ್ಸಿಗಾಗಿ ಮಾತನಾಡುವ ವ್ಯಕ್ತಿಯಾಗಿ ನಿಮಗೆ ಮೇಲ್ನೋಟಕ್ಕೆ ಅನಿಸುವುದು ಸಹಜ. ಆದರೆ ಅವರು ಬಾಲಿವುಡ್ ಮತ್ತು ಅದರ ಒಲವಿನ ಬಗ್ಗೆ ತುಂಬಾ ಪಾರದರ್ಶಕವಾಗಿದ್ದಾರೆ. ತನ್ನ ಸಿನಿಮಾ ಮಾಡಲು ನಿರಾಕರಿಸಿದ ಕಾರಣಕ್ಕೆ ಮಹೇಶ್ ಭಟ್ ಚಪ್ಪಲಿ ಎಸೆದಿದ್ದನ್ನ ನಿರ್ಭಯವಾಗಿ ಹೇಳಿದ್ದಾಳೆ. ಆಕೆಯ ಖ್ಯಾತಿಯನ್ನು ಹಾಳು ಮಾಡಲು ಮಾಧ್ಯಮಗಳು ಆಕೆಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಲೇ ಬಂದಿವೆ. ಒಂದು ಸಂದರ್ಭದಲ್ಲಿ ಆದಿತ್ಯ ಚೋಪ್ರಾ ಅವರು ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಲು ನಿರಾಕರಿಸಿದ್ದರಿಂದ ಬೆದರಿಕೆ ಹಾಕಿದ್ದಾರೆ. ಆದರೂ ಗಟ್ಟಿಗಿತ್ತಿ ಕಂಗನಾ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಈಗಲೂ ಬಾಲಿವುಡ್ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದರು, ನಿರ್ಭಯವಾಗಿ ಬಾಲಿವುಡ್ ಒಳಗಿನ ಹುಳುಕುಗಳನ್ನು ಎತ್ತಿ ತೋರಿಸುತ್ತ ಬಂದಿದ್ದಾಳೆ.

  ಬಾಲಿವುಡ್ ಪ್ರಾಜೆಕ್ಟ್‌ಗಳನ್ನು ಮಾಡಲು ಬಾಲಿವುಡ್ ಗ್ಯಾಂಗ್ ಬಿಡುತ್ತಿಲ್ಲ: ರೆಹಮಾನ್

  ಬಾಲಿವುಡ್ ಪ್ರಾಜೆಕ್ಟ್‌ಗಳನ್ನು ಮಾಡಲು ಬಾಲಿವುಡ್ ಗ್ಯಾಂಗ್ ಬಿಡುತ್ತಿಲ್ಲ: ರೆಹಮಾನ್

  ದಿವಂಗತ ನಟ, ಸುಶಾಂತ್ ಸಿಂಗ್ ರಜಪೂತ್ ಅವರ ಚಿತ್ರ 'ದಿಲ್ ಬೇಚಾರ' ಚಿತ್ರಕ್ಕೆ A.R. ರೆಹಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಆದರೆ ಎ.ಆರ್.ರೆಹಮಾನ್ ಇದು ಹೊರತಾಗಿ ಬೇರೆ ಅವರು ದೊಡ್ಡ ಪ್ರಾಜೆಕ್ಟ್‌ಗಳನ್ನು ಮಾಡಲು ನಿರಾಕರಿಸುವ ಸಂಗತಿಗಳನ್ನು ನಾವು ಆಗಾಗ್ಗೆ ಕೇಳುತ್ತೇವೆ, ಅದೇ ಬಗ್ಗೆ ಕೇಳಿದಾಗ, ಎ.ಆರ್. ರೆಹಮಾನ್ ಅದಕ್ಕೆ ಉತ್ತರಿಸುವುದು "ನಾನು ಒಳ್ಳೆಯ ಚಲನಚಿತ್ರಗಳನ್ನು ಬೇಡವೆಂದು ಹೇಳುವುದಿಲ್ಲ, ಆದರೆ ಒಂದು ಗ್ಯಾಂಗ್ ಇದೆ ಎಂದು ನಾನು ಭಾವಿಸುತ್ತೇನೆ, ಇದು ಕೆಲವು ಸುಳ್ಳು ವದಂತಿಗಳನ್ನು ಹರಡಿಸುತ್ತದೆ. ಅದರಿಂದಾಗಿ ಒಳ್ಳೆ ಪ್ರಾಜೆಕ್ಟುಗಳು ಕೈಗೆ ಸಿಗದಂತೆ ಆಗುತ್ತದೆ. ಇದು ಒಳಗಿನ ಬಾಲಿವುಡ್ ಮಂದಿ ಹೇಗೆ ಹೊರಗಿನ ಪ್ರತಿಭಾವಂತರನ್ನು ಹಾಳು ಮಾಡಲು ಪ್ರಯತ್ನ ಮಾಡುತ್ತಾರೆ ಅನ್ನುವುದಕ್ಕೆ ನಿದರ್ಶನ.

  ಆಸ್ಕರ್ ಪ್ರಶಸ್ತಿ ಗೆದ್ದ ನಂತರ ಯಾರೂ ತನಗೆ ಕೆಲಸ ಕೊಡಲಿಲ್ಲ: ರಸುಲ್ ಪೂಕುಟ್ಟಿ

  ಆಸ್ಕರ್ ಪ್ರಶಸ್ತಿ ಗೆದ್ದ ನಂತರ ಯಾರೂ ತನಗೆ ಕೆಲಸ ಕೊಡಲಿಲ್ಲ: ರಸುಲ್ ಪೂಕುಟ್ಟಿ

  ಆಸ್ಕರ್ ಗೆದ್ದ ನಂತರ, ರೆಸೂಲ್ ಯಾವುದೇ ಬಾಲಿವುಡ್ ಪ್ರಾಜೆಕ್ಟ್‌ಗಳನ್ನು ಪಡೆಯಲಿಲ್ಲ. ಆಸ್ಕರ್ ಪ್ರಶಸ್ತಿ ಪಡೆದ ನಂತರ ಬಾಲಿವುಡ್‌ನಿಂದ ಯಾವುದೇ ಚಿತ್ರಗಳನ್ನು ನೀಡದ ಕಾರಣ ಅವರ ಬಾಲಿವುಡ್ ಪ್ರಾಜೆಕ್ಟುಗಳು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು ಎಂದು ಅವರು ಬಹಿರಂಗಪಡಿಸಿದರು. "ನೀವು ಒಂದು ಹಂತಕ್ಕೆ ಬೆಳೆದ ಮೇಲೆ ಇಲ್ಲಿ ಮತ್ತಷ್ಟು ನೆಲೆಸುವ ಅವಕಾಶವನ್ನು ವಂಚಿಸುವ ವ್ಯವಸ್ಥಿತವಾದ ಜಾಲ ಇಲ್ಲಿದೆ'' ಎಂದಿದ್ದರು ಆಸ್ಕರ್ ವಿಜೇತ ರಸೂಲ್ ಪೂಕಟ್ಟಿ.

  ಮ್ಯೂಸಿಕ್ ಮಾಫಿಯಾ: ಸೋನು ನಿಗಮ್

  ಮ್ಯೂಸಿಕ್ ಮಾಫಿಯಾ: ಸೋನು ನಿಗಮ್

  ಸೋನು ನಿಗಮ್ ಹೇಳುವಂತೆ 'ಮ್ಯೂಸಿಕ್ ಮಾಫಿಯಾ' ಉದ್ಯಮದಲ್ಲಿನ ಗಾಯಕರು ಮತ್ತು ಪ್ರತಿಭೆಗಳನ್ನು ಚಿವುಟಿ ಹಾಕುತ್ತಿದೆ. ಸಂದರ್ಶನವೊಂದರಲ್ಲಿ ಅವರು "ಸಂಗೀತ ಮಾಫಿಯಾ ಇಡೀ ಬಾಲಿವುಡ್ ಇಂಡಸ್ಟ್ರಿಗಿಂತಲೂ ದೊಡ್ಡದಾಗಿದೆ" ಎಂದು ಹೇಳಿದ್ದಾರೆ. "ಹೊಸ ಮತ್ತು ಹಳೆಯ ಪ್ರತಿಭೆಗಳು ಮಾಫಿಯಾದಿಂದ ನಲುಗಿ ಹೋಗುತ್ತಿದ್ದಾರೆ. ಮ್ಯೂಸಿಕ್ ಮಾಫಿಯಾ ಪ್ರತಿಭೆಗಳ ಜೊತೆ ಕೆಲವೊಮ್ಮೆಕುಶಲತೆಯಿಂದ ವರ್ತಿಸುತ್ತಾರೆ. ಮತ್ತು ಕೆಲವೊಮ್ಮೆ ಅವರು ಬಲವಂತವಾಗಿ ಅವರಿಗೆ ಬೇಕಾದದ್ದನ್ನು ಪಡೆಯುತ್ತಾರೆ."ಎಂದು ಆರೋಪಿಸುವ ಅವರು ನೇರವಾಗಿ ಟಿ-ಸೀರೀಸ್ ಮತ್ತು ಭೂಷಣ್ ಕುಮಾರ್ ಅವರನ್ನು ಸಂಗೀತ ಮಾಫಿಯಾ ಎಂದು ಆರೋಪಿಸಿ Instagram ನಲ್ಲಿ ಒಂದೆರಡು ವಿಡಿಯೊಗಳನ್ನು ಸಹ ಹಿಂದೆ ಹಂಚಿಕೊಂಡಿದ್ದಾರೆ.

  ಪ್ರತಿಭಾವಂತರ ಬಗ್ಗೆ ಕೆಟ್ಟ ಸುದ್ದಿಗಳು ಪ್ರಚಾರ ಮಾಡುತ್ತಾರೆ: ರಣವೀರ್ ಶೌರಿ

  ಪ್ರತಿಭಾವಂತರ ಬಗ್ಗೆ ಕೆಟ್ಟ ಸುದ್ದಿಗಳು ಪ್ರಚಾರ ಮಾಡುತ್ತಾರೆ: ರಣವೀರ್ ಶೌರಿ

  ಬಾಲಿವುಡ್ ನ ಕೆಲವು ಪ್ರತಿಭಾವಂತ ನಟರ ಪೈಕಿ ರಣವೀರ್ ಶೋರೆ ಕೂಡ ಒಬ್ಬರು. ನಟನಾಗಿ ಒಳ್ಳೆ ಪರ್ಫಾರ್ಮೆನ್ಸ್ ನೀಡುವ ಶೋರೆ "ಬಾಲಿವುಡ್‌ನ ಸ್ವಜನಪಕ್ಷಪಾತದ ಕಾರಣದಿಂದ ಪ್ರತಿಭಾವಂತರು, ಅಂತಹ ಪ್ರತಿಭಾವಂತರಲ್ಲದ ಬಾಲಿವುಡ್ ಕುಡಿಗಳು ಅವಕಾಶ ಪಡೆಯುವ ಕಾರಣಕ್ಕಾಗಿಯೇ ವಂಚಿತರಾಗುತ್ತಿದ್ದಾರೆ, ಬಹಳಷ್ಟು ವೃತ್ತಿಪರರ ಸಮಸ್ಯೆ ಇದಾಗಿದೆ."ಎನ್ನುವ ರಣವೀರ್‌ ಇದೇ ರೀತಿಯ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಬಹಿರಂಗಪಡಿಸಿದ್ದಾರೆ.

  ಮಹೇಶ್ ಭಟ್ ಬಗ್ಗೆ ರಣ್ವೀರ್ ಶೌರಿ ಮಾತು

  ಮಹೇಶ್ ಭಟ್ ಬಗ್ಗೆ ರಣ್ವೀರ್ ಶೌರಿ ಮಾತು

  "ಹೌದು, ಅವರ ಬಗ್ಗೆಯೇ (ಮಹೇಶ್ ಭಟ್) ನಾನು ಮಾತನಾಡುತ್ತಿದ್ದೇನೆ. ನಾನು ವೃತ್ತಿಪರವಾಗಿ ಮತ್ತು ಸಾಮಾಜಿಕವಾಗಿ ಪ್ರತ್ಯೇಕಗೊಂಡಿದ್ದೇನೆ, ಎಲ್ಲಾ ತುದಿಗಳಿಂದ ಸಮಾನವಾಗಿಒತ್ತಡಕ್ಕೊಳಗಾಗಿದ್ದೇನೆ. ಅವರಿಗೆ ಸಿಗುವ ಪ್ರತಿಯೊಂದು ಅವಕಾಶ ಮತ್ತು ಪ್ರತಿ ವೇದಿಕೆಯಲ್ಲೂ ಅವರು ನನ್ನ ಬಗ್ಗೆ ಸುಳ್ಳು ಹೇಳುತ್ತಿದ್ದರು, ನಾನು ಮದ್ಯವ್ಯಸನಿ ಮತ್ತು ಪರಿಸ್ಥಿತಿಗಳನ್ನು ದುರುಪಯೋಗ ಮಾಡಿಕೊಳ್ಳುವನು ಎಂದು ಹೇಳುತ್ತಿದ್ದರು. ಹೊರಗಿನವರು ಇಲ್ಲಿ ತುಂಬಾ ಅಸಹಾಯಕ ಮತ್ತು ಶಕ್ತಿಹೀನರಾಗಿದ್ದಾರೆ. ಏಕೆಂದರೆ ಈ ಜನರು ತುಂಬಾ ಶಕ್ತಿ ಶಾಲಿಗಳಾಗಿರುವುದರಿಂದ ಪತ್ರಿಕಾ ಮಾಧ್ಯಮವು ಅವರ ಮಾತುಗಳನ್ನು ಕೇಳುತ್ತದೆ ಮತ್ತು ನಿಮ್ಮ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೇಳಲು ನಿಮ್ಮನ್ನು ಕರೆಯಲು ಸಹ ಚಿಂತಿಸುವುದಿಲ್ಲ. ನೀವು ಅದರ ಬಗ್ಗೆ ಏನನ್ನೂ ಮಾಡಲು ಸಾಧ್ಯವಿಲ್ಲದ ಕಾರಣ ನೀವು ತುಂಬಾ ಅಸಹಾಯಕ ಮತ್ತು ಹತಾಶೆಯನ್ನು ಅನುಭವಿಸುತ್ತೀರಿ" ಎಂದು ಹಿಂದೆ ತಮಗಾದ ಅನುಭವಗಳ ಬಗ್ಗೆ ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ.

  English summary
  Seven Bollywood celebrities, who exposed how mafia within Bollywood industry operates. Bollywood is itself works like a mafia, which always try suppress those talents who are outsiders.
  Wednesday, January 12, 2022, 10:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X