twitter
    For Quick Alerts
    ALLOW NOTIFICATIONS  
    For Daily Alerts

    ಸಾಲು ಸಾಲು ಸಿನಿಮಾಗಳ ಸೋಲಿನ ಎಫೆಕ್ಟ್: ತಾತ್ಕಾಲಿಕವಾಗಿ ಥಿಯೇಟರ್‌ಗಳು ಬಂದ್!

    |

    ಉತ್ತರ ಭಾರತದ ಕೆಲವೆಡೆ ಸಿನಿಮಾ ಥಿಯೇಟರ್‌ಗಳಲ್ಲಿ ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ. ಕೆಲವು ಥಿಯೇಟರ್‌ಗಳ ಶೋಗಳ ಸಂಖ್ಯೆ ಇಳಿಸಲಾಗಿದೆ. ಕೊರೊನಾ ಇಲ್ಲ, ಲಾಕ್‌ಡೌನ್ ಇಲ್ಲ. ಈಗ ಯಾಕೆ ಈ ನಿರ್ಧಾರ ಅಂದರೆ ದೊಡ್ಡ ದೊಡ್ಡ ಸಿನಿಮಾಗಳ ಸೋಲು.

    'ಲಾಲ್‌ ಸಿಂಗ್ ಚಡ್ಡ' ಹಾಗೂ 'ರಕ್ಷಾಬಂಧನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿವೆ. ಪ್ರೇಕ್ಷಕರು ಥಿಯೇಟರ್‌ಗೆ ಬಾರದೇ ಸಿನಿಮಾ ಪ್ರದರ್ಶಕರು ಹಾಗೂ ಥಿಯೇಟರ್ ಮಾಲೀಕರು ಕಂಗೆಟ್ಟಿದ್ದಾರೆ. ಕೊನೆ ಪಕ್ಷ 'ಲೈಗರ್' ಸಿನಿಮಾ ಗೆಲ್ಲುತ್ತೆ ಅಂದುಕೊಂಡರೆ ಅದು ಕೂಡ ಹೇಳ ಹೆಸರಿಲ್ಲದಂತೆ ಫ್ಲಾಪ್ ಆಗಿದೆ. 'ಬ್ರಹ್ಮಾಸ್ತ್ರ' ಸಿನಿಮಾ ರಿಲೀಸ್ ಆಗುವವರೆಗೂ ಉತ್ತರ ಭಾರತದಲ್ಲಿ ಕೆಲ ಥಿಯೇಟರ್‌ಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಈಗಾಗಲೇ ಕೆಲ ಥಿಯೇಟರ್ ಬಂದ್ ಆಗಿದ್ದರೆ ಮತ್ತೆ ಕೆಲವು ಥಿಯೇಟರ್‌ಗಳಲ್ಲಿ ದಿನಕ್ಕೆ 3 ಶೋ ಮಾತ್ರ ಪ್ರದರ್ಶನವಾಗುತ್ತಿದೆ.

    ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶ ಹಬ್ಬ: ವಿಘ್ನ ನಿವಾರಕನಿಗೆ ಆರತಿ ಬೆಳಗಿ ಸಲ್ಲು ಭಜನೆಸಲ್ಮಾನ್ ಖಾನ್ ಮನೆಯಲ್ಲಿ ಗಣೇಶ ಹಬ್ಬ: ವಿಘ್ನ ನಿವಾರಕನಿಗೆ ಆರತಿ ಬೆಳಗಿ ಸಲ್ಲು ಭಜನೆ

    ಪ್ರೇಕ್ಷಕರು ಬರಲಿ ಬರದೇ ಇರಲಿ, ಥಿಯೇಟರ್‌ಗಳಲ್ಲಿ ದಿನಕ್ಕೆ 4 ಶೋ ಸಿನಿಮಾ ಪ್ರದರ್ಶನ ಮಾಡಬೇಕು. ಆದರೆ ದೊಡ್ಡ ದೊಡ್ಡ ಸಿನಿಮಾಗಳು ಇಲ್ಲದೇ ಪ್ರೇಕ್ಷಕರು ಥಿಯೇಟರ್ ಕಡೆ ಮುಖ ಮಾಡುತ್ತಿಲ್ಲ. ಪ್ರೇಕ್ಷಕರೇ ಇಲ್ಲದೇ ಸಿನಿಮಾ ಪ್ರದರ್ಶನ ಮಾಡಿದರೆ ಪ್ರದರ್ಶನದ ವೆಚ್ಚ ವ್ಯರ್ಥವಾಗುತ್ತದೆ. ಥಿಯೇಟರ್‌ ಸಿಬ್ಬಂದಿಗೂ ವೇತನ ನೀಡಲು ಕಷ್ಟವಾಗುತ್ತಿದೆ. ಹಾಗಾಗಿ ಮಾಲೀಕರು ಒಂದು ವಾರದ ಮಟ್ಟಿಗೆ ಕೆಲ ಥಿಯೇಟರ್‌ಗಳನ್ನು ಮುಚ್ಚುವ ತೀರ್ಮಾನಕ್ಕೆ ಬಂದಿದ್ದಾರೆ.

    ಆಗಸ್ಟ್ ತಿಂಗಳಲ್ಲಿ ಬಾಲಿವುಡ್‌ಗೆ ನಷ್ಟ

    ಆಗಸ್ಟ್ ತಿಂಗಳಲ್ಲಿ ಬಾಲಿವುಡ್‌ಗೆ ನಷ್ಟ

    ಭಾರೀ ನಿರೀಕ್ಷೆ ಮೂಡಿಸಿದ್ದ ಬಾಲಿವುಡ್ ಸಿನಿಮಾಗಳು ಆಗಸ್ಟ್ ತಿಂಗಳಲ್ಲಿ ತೆರೆಗಪ್ಪಳಿಸಿದ್ದವು. ಆದರೆ ಯಾವುದೇ ಸಿನಿಮಾ ಪ್ರೇಕ್ಷಕರ ಮನಗೆಲ್ಲಲಿಲ್ಲ. 'ಲಾಲ್‌ ಸಿಂಗ್ ಚಡ್ಡ', 'ರಕ್ಷಾಬಂಧನ್', 'ಲೈಗರ್', ಅನುರಾಗ್ ಕಶ್ಯಪ್ ನಿರ್ದೇಶನದ 'ದೊಬಾರಾ' ಹಾಲಿವುಡ್ ಸಿನಿಮಾ 'ನೊಪ್' ಕೂಡ ಸೋಲುಂಡಿದೆ. ಸಿನಿಮಾಗಳ ಬಗ್ಗೆ ನೆಗೆಟಿವ್ ಟಾಕ್ ಹೆಚ್ಚಾಗಿ ಜನ ಥಿಯೇಟರ್‌ಗೆ ಬರ್ತಿಲ್ಲ. ಪರಿಣಾಮ ಥಿಯೇಟರ್‌ಗಳನ್ನು ಮುಚ್ಚುವಂತಹ ಸ್ಥಿತಿ ಎದುರಾಗಿದೆ. ಮನೋಜ್ ದೇಸಾಯಿ ತಾತ್ಕಾಲಿಕವಾಗಿ ಗೆಲಾಕ್ಸಿ ಸಿನಿಮಾ ಥಿಯೇಟರ್ ಮುಚ್ಚಿದ್ದಾರೆ.

    'ಬ್ರಹ್ಮಾಸ್ತ್ರ' ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ

    'ಬ್ರಹ್ಮಾಸ್ತ್ರ' ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ

    ಸೆಪ್ಟೆಂಬರ್ 9ಕ್ಕೆ ರಣ್ಬೀರ್ ಕಪೂರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್ ಹಾಗೂ ನಾಗಾರ್ಜುನ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆ ಆಗ್ತಿದೆ. ಅಯಾನ್ ಮುಖರ್ಜಿ ನಿರ್ದೇಶನದ ಈ ಫ್ಯಾಂಟಸಿ ಅಡ್ವೆಂಚರ್ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. 'ಬ್ರಹ್ಮಾಸ್ತ್ರ' ಸಿನಿಮಾ ರಿಲೀಸ್ ಆದರೆ ಜನ ಥಿಯೇಟರ್‌ಗೆ ಬಂದೇ ಬರುತ್ತಾರೆ ಎನ್ನುವ ನಿರೀಕ್ಷೆ ಥಿಯೇಟರ್ ಮಾಲೀಕರದ್ದು. ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್ ನಡೀತಿದೆ. ಆದರೆ ಚಿತ್ರಕ್ಕೆ ಬಾಯ್‌ಕಾಟ್ ಭೀತಿ ಇರುವುದರಿಂದ ಫಲಿತಾಂಶ ಏನಾಗುತ್ತದೋ ಕಾದು ನೋಡಬೇಕು.

    ಥಿಯೇಟರ್‌ಗಳ ಕೈ ಹಿಡಿದ 'ಕಾರ್ತಿಕೇಯ- 2'

    ಥಿಯೇಟರ್‌ಗಳ ಕೈ ಹಿಡಿದ 'ಕಾರ್ತಿಕೇಯ- 2'

    ಆಗಸ್ಟ್ ತಿಂಗಳಿನಲ್ಲಿ ರಿಲೀಸ್ ಆದ ಬಾಲಿವುಡ್ ಸ್ಟಾರ್‌ಗಳ ಸಿನಿಮಾಗಳೇ ಮುಗ್ಗರಿಸಿವೆ. ಪ್ರೇಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿದ್ದು ತೆಲುಗಿನ 'ಕಾರ್ತಿಕೇಯ'-2 ಸಿನಿಮಾ ಮಾತ್ರ. ಉತ್ತರ ಭಾರತದ ಹಲವು ಥಿಯೇಟರ್‌ಗಳಲ್ಲಿ 3ನೇ ವಾರವೂ ಈ ಮಿಸ್ಟರಿ ಆಕ್ಷನ್ ಅಡ್ವೆಂಚರ್ ಸಿನಿಮಾ ಸದ್ದು ಮಾಡುತ್ತಿದೆ. ಮೊನ್ನೆ ಭಾನುವಾರ ಕೂಡ ಚಿತ್ರದ ಹಿಂದಿ ವರ್ಷನ್ 1.77 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈವರೆಗೆ ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ 24 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ. ನಿಖಿಲ್ ಸಿದ್ದಾರ್ಥ್ ನಟನೆಯ 'ಕಾರ್ತಿಕೇಯ'-2 ಸಿನಿಮಾ 100 ಕೋಟಿ ಕ್ಲಬ್ ಸೇರಿಕೊಂಡಿದೆ.

    'ಬ್ರಹ್ಮಾಸ್ತ್ರ' ಹಿಡಿದು ಎದ್ದು ನಿಲ್ಲುತ್ತಾ ಬಾಲಿವುಡ್?

    'ಬ್ರಹ್ಮಾಸ್ತ್ರ' ಹಿಡಿದು ಎದ್ದು ನಿಲ್ಲುತ್ತಾ ಬಾಲಿವುಡ್?

    ರಣ್‌ಬೀರ್ ಕಪೂರ್ ನಟನೆಯ 'ಬ್ರಹ್ಮಾಸ್ತ್ರ' ನಂತರ ಹೃತಿಕ್ ರೋಷನ್, ಸೈಫ್ ಅಲಿಖಾನ್ ನಟನೆಯ 'ವಿಕ್ರಂ ವೇದ' ಸಿನಿಮಾ ಬಿಡುಗಡೆ ಆಗಲಿದೆ. ಅಲ್ಲಿಂದ ಮುಂದಿನ ಸಿನಿಮಾಗಳ ಲೈನಪ್ ಚೆನ್ನಾಗಿದೆ. ಎರಡು ವಾರಕ್ಕೊಂದು ದೊಡ್ಡ ಸಿನಿಮಾ ಬಂದರೆ ಥಿಯೇಟರ್‌ಗಳಿಗೆ ಪ್ರೇಕ್ಷಕರು ಬರುತ್ತಾರೆ ಎನ್ನುವುದು ಸಿನಿಮಾ ಪ್ರದರ್ಶನಕರೊಬ್ಬರ ಮಾತು. ಒಟ್ನಲ್ಲಿ ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿರುವ ಬಾಲಿವುಡ್ ಯಾವಾಗ ಎದ್ದು ಬರುತ್ತೋ ಕಾದು ನೋಡಬೇಕು.

    English summary
    Theatre Owners Shut Down Screens Till Release of Brahmastra Movie
    Friday, September 2, 2022, 9:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X