For Quick Alerts
  ALLOW NOTIFICATIONS  
  For Daily Alerts

  'ಸ್ಪೈಡರ್ ಮ್ಯಾನ್' ಆಗಬೇಕಿತ್ತು ಬಾಲಿವುಡ್ ನಟ ಟೈಗರ್ ಶ್ರಾಫ್! ತಪ್ಪಿದ್ದು ಹೇಗೆ?

  |

  ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು, ನಿರ್ದೇಶಕರು ಎಲ್ಲ ಮುಖ್ಯ ಪಾತ್ರಕ್ಕೂ ಆಡಿಷನ್ ಮಾಡಿಯೇ ನಟರನ್ನು ಆಯ್ಕೆ ಮಾಡುವ ಪದ್ಧತಿ ಇತ್ತೀಚೆಗೆ ಹಾಲಿವುಡ್‌ನಲ್ಲಿ ಹೆಚ್ಚಾಗುತ್ತಿದೆ. ಲೀಡ್ ಪಾತ್ರಕ್ಕೂ ಸಹ ದೊಡ್ಡ ದೊಡ್ಡ ಸ್ಟಾರ್ ನಟರಿಂದ ಆಡಿಷನ್ ತೆಗೆದುಕೊಳ್ಳಲಾಗುತ್ತದೆ.

  ಸ್ಪೈಡರ್‌ಮ್ಯಾನ್ ಸರಣಿಯನ್ನು ಮಾರ್ವೆಲ್‌ನವರು ಪುನರಾರಂಭ ಮಾಡಿದಾಗ ಆ ಪಾತ್ರಕ್ಕೆ ಸೂಕ್ತವಾಗುವ ನಟರಿಗಾಗಿ ಆಡಿಷನ್ ನಡೆಸಲಾಗಿತ್ತು. ಹಾಲಿವುಡ್‌ನ ಕೆಲವು ಖ್ಯಾತ ಯುವನಟರ ಜೊತೆಗೆ ಬೇರೆ-ಬೇರೆ ದೇಶಗಳ ಸ್ಟಾರ್ ನಟರುಗಳು ಸಹ ಆಡಿಷನ್ ನೀಡಿದ್ದರು. ಅದರಲ್ಲಿ ಬಾಲಿವುಡ್‌ನ ಟೈಗರ್ ಶ್ರಾಫ್ ಸಹ ಒಬ್ಬರು.

  2014 ರ ಸುಮಾರಿಗೆ ಮಾರ್ವೆಲ್‌ ಸಂಸ್ಥೆಯು ಸ್ಪೈಡರ್‌ಮ್ಯಾನ್ ಪಾತ್ರಕ್ಕೆ ಹೊಸ ನಟರ ಹುಡುಕಾಟ ನಡೆಸಿತ್ತು. ಆಗ ಟೈಗರ್ ಶ್ರಾಫ್ ಸಹ ತಮ್ಮ ವಿಡಿಯೋ ಟೇಪ್‌ಗಳನ್ನು ಮಾರ್ವೆಲ್‌ನ ಕಾಸ್ಟಿಂಗ್ ನಿರ್ದೇಶಕರಿಗೆ ಕಳಿಸಿದ್ದರು. ಟೈಗರ್ ಮೊದಲ ಹಂತಕ್ಕೆ ಆಯ್ಕೆ ಸಹ ಆಗಿದ್ದರು. ಆದರೆ ಅಂತಿಮವಾಗಿ ಆ ಪಾತ್ರ ಟಾಮ್ ಹಾಲೆಂಡ್ ಪಾಲಾಯಿತು.

  ಸ್ಪೈಡರ್‌ಮ್ಯಾನ್ ಪಾತ್ರಕ್ಕೆ ಆಡಿಷನ್ ನೀಡಿದ್ದ ಟೈಗರ್ ಶ್ರಾಫ್!

  ಸ್ಪೈಡರ್‌ಮ್ಯಾನ್ ಪಾತ್ರಕ್ಕೆ ಆಡಿಷನ್ ನೀಡಿದ್ದ ಟೈಗರ್ ಶ್ರಾಫ್!

  ಈ ಬಗ್ಗೆ ಕೆನೆಡಾದಲ್ಲಿ ಟೈಗರ್ ಶ್ರಾಫ್ ನೀಡಿರುವ ಸಂದರ್ಶನದಲ್ಲಿ ಹಂಚಿಕೊಂಡಿದ್ದು, ''ಹಾಲಿವುಡ್‌ನ ಹಲವರನ್ನು ನಾನು ಭೇಟಿಯಾಗಿದ್ದೇನೆ. ನಾನು ಈ ಹಿಂದೆ 'ಸ್ಪೈಡರ್‌ಮ್ಯಾನ್' ಸಿನಿಮಾದ ಆಡಿಷನ್‌ಗಾಗಿ ನನ್ನ ವಿಡಿಯೋ ಟೇಪ್‌ಗಳನ್ನು ಸಹ ಕಳಿಸಿದ್ದೆ. ಅವರಿಗೆ ನನ್ನ ಟೇಪ್ ಬಹಳ ಇಷ್ಟವೂ ಆಗಿತ್ತು. ಅಲ್ಲದೆ ನಾನು ಮಾರ್ವೆಲ್‌ನವರಿಗೆ ಹೇಳಿದ್ದೆ, ನನ್ನನ್ನು ಸ್ಪೈಡರ್ ಮ್ಯಾನ್‌ಗೆ ಆಯ್ಕೆ ಮಾಡಿದರೆ ನಿಮಗೆ ವಿಎಪ್‌ಎಕ್ಸ್‌ನ ಸಾಕಷ್ಟು ಹಣ ಉಳಿಯುತ್ತದೆ, ಏಕೆಂದರೆ ಸ್ಪೈಡರ್ ಮ್ಯಾನ್ ಮಾಡುವ ಹಲವು ಸಾಹಸಗಳನ್ನು ವಿಎಫ್‌ಎಕ್ಸ್ ಇಲ್ಲದೆ ನಾನು ಮಾಡಬಲ್ಲೆ'' ಎಂದಿದ್ದೆ ಎಂದು ನೆನಪು ಮಾಡಿಕೊಂಡಿದ್ದಾರೆ ಟೈಗರ್ ಶ್ರಾಫ್.

  ಜಾಕಿ ಚಾನ್-ಬ್ರೂಸ್ ಲೀ ಆಗುವ ಬಯಕೆ ಟೈಗರ್‌ಗೆ!

  ಜಾಕಿ ಚಾನ್-ಬ್ರೂಸ್ ಲೀ ಆಗುವ ಬಯಕೆ ಟೈಗರ್‌ಗೆ!

  ಟೈಗರ್‌ ಶ್ರಾಫ್‌ಗೆ ಜಾಕಿ ಚಾನ್, ಬ್ರೂಸ್ ಲೀ ರೀತಿ ಗ್ಲೋಬಲ್ ಸ್ಟಾರ್ ಆಗುವ ಆಸೆಯಂತೆ. ಜಾಕಿ ಚಾನ್ ಬಳಿಕ ಹೀಗೆ ಗ್ಲೋಬಲ್ ಆಕ್ಷನ್ ಸ್ಟಾರ್ ಆಗಿರುವ ಮತ್ತೊಬ್ಬ ನಟರಿಲ್ಲ ಹಾಗಾಗಿ ನಾನು ಆ ಸ್ಥಾನಕ್ಕೆ ಯತ್ನಿಸುತ್ತಿದ್ದೇನೆ ಎಂದಿದ್ದಾರೆ ಟೈಗರ್ ಶ್ರಾಫ್. ಜಾಕಿ ಚಾನ್ ಹಾಗೂ ಬ್ರೂಸ್ ಲೀ ಇಬ್ಬರ ಅಭಿಮಾನಿ ಆಗಿರುವ ಟೈಗರ್ ಶ್ರಾಫ್ ಅದ್ಭುತವಾಗಿ ಮಾರ್ಷಲ್ ಆರ್ಟ್‌ಗಳನ್ನು ಮಾಡುತ್ತಾರೆ. ತಮ್ಮ ಸಿನಿಮಾಗಳಲ್ಲಿ ಡ್ಯೂಪ್ ಇಲ್ಲದೆ ಸಾಹಸಗಳನ್ನು ಸಹ ಮಾಡುತ್ತಾರೆ.

  ಸ್ಪೈಡರ್ ಮ್ಯಾನ್ ಪಾತ್ರ ಗಿಟ್ಟಿಸಿಕೊಂಡ ಟಾಮ್ ಹಾಲೆಂಡ್

  ಸ್ಪೈಡರ್ ಮ್ಯಾನ್ ಪಾತ್ರ ಗಿಟ್ಟಿಸಿಕೊಂಡ ಟಾಮ್ ಹಾಲೆಂಡ್

  ಟಾಮ್ ಹಾಲೆಂಡ್ ಮೊದಲ ಬಾರಿಗೆ ಸ್ಪೈಡರ್ ಮ್ಯಾನ್ ಆಗಿ 2015 ರ 'ಕ್ಯಾಪ್ಟನ್ ಅಮೆರಿಕ; ಸಿವಿಲ್ ವಾರ್' ನಲ್ಲಿ ಕಾಣಿಸಿಕೊಂಡರು. ಆ ಬಳಿಕ ಮೂರು ಸ್ಪೈಡರ್ ಮ್ಯಾನ್ ಸಿನಿಮಾಗಳು ಹಾಗೂ ಎರಡು ಅವೇಂಜರ್ಸ್ ಸಿನಿಮಾದಲ್ಲಿ ಟಾಮ್ ಹಾಲೆಂಡ್ 'ಸ್ಪೈಡರ್ ಮ್ಯಾನ್' ಆಗಿ ಕಾಣಿಸಿಕೊಂಡಿದ್ದಾರೆ. ಕಡೆಯದಾಗಿ 'ಸ್ಪೈಡರ್ ಮ್ಯಾನ್: ಫಾರ್ ಅವೇ ಫ್ರಂ ಹೋಮ್' ಸಿನಿಮಾದಲ್ಲಿ ಟಾಮ್ ಹಾಲೆಂಡ್ ಕಾಣಿಸಿಕೊಂಡಿದ್ದು, ಟಾಮ್ ಹಾಲೆಂಡ್ ಇನ್ನು ಮುಂದೆ ಸ್ಪೈಡರ್‌ಮ್ಯಾನ್ ಆಗಿ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗುತ್ತಿದೆ.

  ರಶ್ಮಿಕಾ ಮಂದಣ್ಣ ಜೊತೆ ಟೈಗರ್ ಶ್ರಾಫ್ ಸಿನಿಮಾ

  ರಶ್ಮಿಕಾ ಮಂದಣ್ಣ ಜೊತೆ ಟೈಗರ್ ಶ್ರಾಫ್ ಸಿನಿಮಾ

  ಇನ್ನು ಟೈಗರ್ ಶ್ರಾಫ್ ವಿಷಯಕ್ಕೆ ಮರಳುವುದಾದರೆ, ಟೈಗರ್ ಶ್ರಾಫ್, ಬಾಲಿವುಡ್‌ನ ಟಾಪ್ ಆಕ್ಷನ್ ಯುವ ಹೀರೋ. ಆಕ್ಷನ್ ಸಿನಿಮಾ ಹಾಗೂ ಡ್ಯಾನ್ಸ್ ಮೂಲಕ ಒಳ್ಳೆಯ ಜನಪ್ರಿಯತೆ ಹಾಗೂ ಅಭಿಮಾನಿಗಳನ್ನು ಟೈಗರ್ ಗಳಿಸಿದ್ದಾರೆ. ಇದೀಗ ಸಾಲು-ಸಾಲು ಆಕ್ಷನ್ ಸಿನಿಮಾಗಳಲ್ಲಿ ಟೈಗರ್ ಶ್ರಾಫ್ ಕಾಣಿಸಿಕೊಳ್ಳುತ್ತಿದ್ದಾರೆ. 'ಗಣ್‌ಪತ್', ಅಕ್ಷಯ್ ಕುಮಾರ್ ಜೊತೆಗೆ 'ಬಡೇ ಮಿಯಾ ಚೋಟೆ ಮಿಯಾ' ಹಾಗೂ ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ 'ಸ್ಕ್ರೂ ಡೀಲಾ' ಸಿನಿಮಾದಲ್ಲಿ ಟೈಗರ್ ಶ್ರಾಫ್ ನಟಿಸುತ್ತಿದ್ದಾರೆ.

  English summary
  Actor Tiger Shroff gave auditioned for Spider Man role once. He said they liked my video but I did not get the movie.
  Thursday, September 29, 2022, 20:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X