»   » ಬಾಲಿವುಡ್ ನ ಟಾಪ್ 10 ಶ್ರೀಮಂತರು ಇವರೇ ಸ್ವಾಮಿ

ಬಾಲಿವುಡ್ ನ ಟಾಪ್ 10 ಶ್ರೀಮಂತರು ಇವರೇ ಸ್ವಾಮಿ

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಲ್ಲಿ ಪ್ರತೀ ವಾರ ತೆರೆ ಕಾಣುವ ಸಿನಿಮಾಗಳಲ್ಲಿ ಕೆಲವೊಂದು ಸಾಕಷ್ಟು ಹೆಸರು ಮಾಡುವುದರ ಜೊತೆಗೆ ಕೋಟಿ ಕೋಟಿ ಬಾಚಿಕೊಂಡರೆ, ಕೆಲವೊಂದು ಸಿನಿಮಾಗಳು ಸೋತು ನೆಲಕಚ್ಚಿ ಡಬ್ಬಾ ಸೇರುತ್ತದೆ.

ಇನ್ನು ಬಾಲಿವುಡ್ ಸ್ಟಾರ್ ಗಳಿಗೆ ಇಡೀ ವಿಶ್ವದಾದ್ಯಂತ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಬಾಲಿವುಡ್ ಖ್ಯಾತ ನಟರಾದ ಕಿಂಗ್ ಖಾನ್ ಶಾರುಖ್ ಖಾನ್, ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್, ಅಮೀರ್ ಖಾನ್, ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ಇರ್ಫಾನ್ ಖಾನ್ ಮುಂತಾದವರು ತಮ್ಮ ಒಂದೊಂದು ಚಿತ್ರಕ್ಕೂ ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.[ಚಿತ್ರಗಳು: 'ಅಸಹಿಷ್ಣುತೆ' ಎಫೆಕ್ಟ್ ಶಾರುಖ್ ಚಿತ್ರಕ್ಕೆ ಭಾರಿ ಕಂಟಕ ]

ಅಂದಹಾಗೆ ಬಾಲಿವುಡ್ ನಲ್ಲಿ ಈ ವರ್ಷ ಕೋಟಿಗಟ್ಟಲೆ ಆಸ್ತಿ ಗಳಿಕೆ ಮಾಡಿರುವ ಲಿಸ್ಟ್ ಗೆ ಯಾರೆಲ್ಲಾ ಸ್ಟಾರ್ ನಟರು ಸೇರ್ಪಡೆ ಆಗಿದ್ದಾರೆ ಅನ್ನೋದನ್ನ ನಿಮಗೆ ನಾವು ಹೇಳ್ತೀವಿ..

ಬಿಟೌನ್ ನ ಟಾಪ್ 10 ನಟರು ಕೋಟಿ ಕೋಟಿ ಸಂಪಾದನೆ ಮಾಡುವ ಜೊತೆಗೆ ಕೋಟಿಗಟ್ಟಲೇ ಆಸ್ತಿ ಹೊಂದಿದ್ದಾರೆ. ಅವರ ಬಗ್ಗೆ ಡೀಟೈಲ್ ರಿಪೋರ್ಟ್ ಕೊಡ್ತೀವಿ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಬಾಲಿವುಡ್ ಬಾದ್ ‍ಷಾ ಶಾರುಖ್ ಖಾನ್

ಬಾಲಿವುಡ್ ಕ್ಷೇತ್ರದಲ್ಲಿ 'ಬಾದ್ ಷಾ', 'ಕಿಂಗ್ ಖಾನ್' ಅಂತಾನೇ ಖ್ಯಾತಿ ಗಳಿಸಿರುವ ನಟ ಶಾರುಖ್ ಖಾನ್ ಅವರು ಇಂದು ಇಡೀ ಬಾಲಿವುಡ್ ಕ್ಷೇತ್ರವನ್ನೇ ಆಳುತ್ತಿದ್ದಾರೆ. ಇದೀಗ ಶಾರುಖ್ ಖಾನ್ ಅವರ ಬಳಿ ಬರೋಬ್ಬರಿ 3,660 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಆದ್ದರಿಂದ ಈ ಬಾರಿ ಶಾರುಖ್ ಅವರು ಅತೀ ಹೆಚ್ಚು ಆಸ್ತಿ ಸಂಪಾದನೆ ಮಾಡಿ ಮೊದಲನೇ ಸ್ಥಾನ ಗಳಿಸಿಕೊಂಡಿದ್ದಾರೆ. 2014 ರಲ್ಲಿ ತೆರೆಕಂಡ ಶಾರುಖ್ ಅವರ 'ಹ್ಯಾಪಿ ನ್ಯೂ ಇಯರ್' ಸಿನಿಮಾ ಬಾಕ್ಸಾಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿತ್ತು.[ಸಲ್ಲುಗೆ ಮಾತ್ರ ಯಾಕೆ? ನಂಗೂ ಇರಲಿ! ಎಂದ ಶಾರುಖ್]

ಬಿಗ್ ಬಿ ಅಮಿತಾಭ್ ಬಚ್ಚನ್

ಬಾಲಿವುಡ್ ನ ಜೀವಂತ ದಂತಕಥೆ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು 72 ರ ಇಳಿವಯಸ್ಸಿನಲ್ಲೂ, 25ರ ಯುವಕರನ್ನು ನಾಚಿಸುವಂತೆ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಿದ್ದಾರೆ. ಇತ್ತೀಚೆಗೆ ಬಚ್ಚನ್ ಕಾಣಿಸಿಕೊಂಡ 'ವಜೀರ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಿಗ್ ಬಿ ಅಮಿತಾಭ್ ಅವರು 400 ಮಿಲಿಯನ್ ಡಾಲರ್ ಸಂಪಾದಿಸಿ ಸದ್ಯಕ್ಕೆ ಎರಡನೇ ಸ್ಥಾನದಲ್ಲಿದ್ದಾರೆ.

ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್

ಮೊದ ಮೊದಲು ಬಾಲಿವುಡ್ ನ ಬ್ಯಾಡ್ ಬಾಯ್ ಅಂತ ಗುರುತಿಸಿಕೊಂಡು ತದನಂತರ ಮಾಡಿದ್ದೆಲ್ಲಾ ಸಿನಿಮಾ ಹಿಟ್ ಆದಾಗ 'ಬಾಕ್ಸಾಫೀಸ್ ಸುಲ್ತಾನ' ಎಂದು ಕರೆಸಿಕೊಂಡ ನಟ ಸಲ್ಮಾನ್ ಖಾನ್ ಸದ್ಯಕ್ಕೆ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿದೆ. ಸಲ್ಮಾನ್ ಅವರು ಬಿಗ್ ಬಾಸ್ ಹೋಸ್ಟ್ ಮಾಡುವ ಮೂಲಕ ಕೂಡ ಸಂಪಾದನೆ ಮಾಡುತ್ತಿದ್ದಾರೆ. ಸಲ್ಲು ಮಾಡಿದ ಸಿನಿಮಾಗಳೆಲ್ಲಾ ನೂರು ಕೋಟಿ ಕ್ಲಬ್ ಸೇರುತ್ತಿರುವುದರಿಂದ, ಅವರ ಸಂಭಾವನೆ ಕೂಡ ಹೆಚ್ಚಾಗುತ್ತಿದೆ. ಸದ್ಯಕ್ಕೆ 200 ಮಿಲಿಯನ್ ಯುಎಸ್ಎ ಡಾಲರ್ ಸಂಪಾದಿಸುವ ಸಲ್ಲು ಮೂರನೇ ಸ್ಥಾನದಲ್ಲಿದ್ದಾರೆ.

ಅಮೀರ್ ಖಾನ್

ವರ್ಷಕ್ಕೊಂದು ಹಿಟ್ ಸಿನಿಮಾ ಕೊಡುವ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಅಮೀರ್ ಖಾನ್ ಅವರು 185 ಮಿಲಿಯನ್ ಯುಎಸ್ಎ ಡಾಲರ್ ಆಸ್ತಿ ಗಳಿಕೆ ಮಾಡಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ 'ಅಸಹಿಷ್ಣುತೆ' ಬಗ್ಗೆ ಮಾತಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡರೂ ಕೂಡ ಅಮೀರ್ ಅಭಿಮಾನಿಗಳನ್ನು ಹೊಂದಿದ್ದಾರೆ. ಅಮೀರ್ ಅವರ 'ಪಿ.ಕೆ' ಸಿನಿಮಾ ಭರ್ಜರಿ ಹಿಟ್ ಆಗಿತ್ತು.[ಅಮೀರ್ ವಿರುದ್ಧ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಸ್ಯಾಂಡಲ್ ವುಡ್ ಸ್ಟಾರ್ಸ್]

ಅಕ್ಷಯ್ ಕುಮಾರ್

ಅಕ್ಕಿ ಅಲಿಯಾಸ್ ಅಕ್ಷಯ್ ಕುಮಾರ್ 140 ಮಿಲಿಯನ್ ಯುಎಸ್ಎ ಡಾಲರ್ ಸಂಪಾದಿಸುವ ಮೂಲಕ 5ನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ತೆರೆಕಂಡ ಅಕ್ಕಿ ಅವರ 'ಏರ್ ಲಿಫ್ಟ್' ಸಿನಿಮಾ ಬಾಕ್ಸಾಫೀಸ್ ನಲ್ಲಿ 100 ಕೋಟಿ ಕ್ಲಬ್ ಸೇರುವ ಮೂಲಕ ದಾಖಲೆ ಸೃಷ್ಟಿಸಿತ್ತು.

ಸೈಫ್ ಅಲಿಖಾನ್

ಬಿಟೌನ್ ಬೆಬೋ ಕರೀನಾ ಕಪೂರ್ ಪತಿದೇವರಾದ ಸೈಫ್ ಅಲಿಖಾನ್ ಅವರು 'ಫ್ಯಾಂಟಮ್' ಚಿತ್ರದ ಬಳಿಕ ಮತ್ತೆ ಬಿಟೌನ್ ನಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ಅವರ ಆಸ್ತಿ ಮೊತ್ತ ಸುಮಾರು 100 ಮಿಲಿಯನ್ ಯುಎಸ್ಎ ಡಾಲರ್. ಆದ್ರಿಂದ ಸದ್ಯಕ್ಕೆ ಸೈಫ್ 6ನೇ ಸ್ಥಾನದಲ್ಲಿದ್ದಾರೆ.

ಅನುಪಮ್ ಖೇರ್

ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಅವರು ಈಗಲೂ ಸಿನಿಮಾಗಳಲ್ಲಿ ನಟಿಸುವ ಮೂಲಕ ಆಫರ್ ಗಿಟ್ಟಿಸಿಕೊಂಡಿದ್ದು, 70 ಮಿಲಿಯನ್ ಯುಎಸ್ಎ ಡಾಲರ್ ಗಳಿಸುವ ಮೂಲಕ 7ನೇ ಸ್ಥಾನದಲ್ಲಿದ್ದಾರೆ.

ಧರ್ಮೆಂದ್ರ

ಡ್ರೀಮ್ ಗರ್ಲ್ ಹೇಮ ಮಾಲಿನಿ ಪತಿ ಧರ್ಮೇಂದ್ರ ಅವರು 70 ಮಿಲಿಯನ್ ಯುಎಸ್ಎ ಡಾಲರ್ ಸಂಪಾದಿಸುವ ಮೂಲಕ 8ನೇ ಸ್ಥಾನದಲ್ಲಿದ್ದಾರೆ.

ಇರ್ಫಾನ್ ಖಾನ್

ಬಾಲಿವುಡ್ ನ ಮತ್ತೊಬ್ಬ ಪ್ರತಿಭಾವಂತ ನಟ ಇರ್ಫಾನ್ ಖಾನ್ 50 ಮಿಲಿಯನ್ ಯುಎಸ್ಎ ಡಾಲರ್ ಸಂಪಾದಿಸುವ ಮೂಲಕ 9 ಸ್ಥಾನದಲ್ಲಿದ್ದಾರೆ. ಇವರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಅಲ್ಲಿನ ಸಿನಿಪಂಡಿತರ ಮೆಚ್ಚುಗೆ ಗಳಿಸಿದ್ದಾರೆ.

ಹೃತಿಕ್ ರೋಷನ್

ಬಿಟೌನ್ ನ ಸ್ಟೈಲಿಷ್ ಸ್ಟಾರ್ ಹೃತಿಕ್ ರೋಷನ್ ಅವರು 'ಕ್ರಿಷ್ 3' ಸಿನಿಮಾ ಬಿಟ್ಟರೆ ತದನಂತರ ಬಂದ 'ಬ್ಯಾಂಗ್ ಬ್ಯಾಂಗ್' ಸಿನಿಮಾ ಅಷ್ಟೊಂದು ಸದ್ದು ಮಾಡಲಿಲ್ಲ. ಸುಮಾರು 30 ಮಿಲಿಯನ್ ಯುಎಸ್ಎ ಡಾಲರ್ ಸಂಪಾದಿಸುವ ಹೃತಿಕ್ ಸದ್ಯಕ್ಕೆ 10ನೇ ಸ್ಥಾನದಲ್ಲಿದ್ದಾರೆ.

English summary
Top 10 Richest Bollywood Actors in 2016, Highest paid most popular bollywood actors list.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada