»   »  'ಪದ್ಮಾವತಿ' ಚಿತ್ರದ ಸೆಟ್‌ನಲ್ಲಿ ಅವಘಡ: ಓರ್ವ ಸಾವು

'ಪದ್ಮಾವತಿ' ಚಿತ್ರದ ಸೆಟ್‌ನಲ್ಲಿ ಅವಘಡ: ಓರ್ವ ಸಾವು

Written By:
Subscribe to Filmibeat Kannada

ಬಾಲಿವುಡ್ ನಟಿ.. ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅಭಿನಯದ 'ಪದ್ಮಾವತಿ' ಚಿತ್ರದ ಸೆಟ್‌ನಲ್ಲಿ ನಡೆದ ಅವಘಡದಿಂದ ಪೇಂಟರ್ ಒಬ್ಬರು ಸಾವಿಗೀಡಾಗಿದ್ದಾರೆ. ಬಾಲಿವುಡ್ ಲೈಫ್ ವರದಿ ಮಾಡಿರುವ ಪ್ರಕಾರ, 34 ವರ್ಷದ ಪೇಂಟರ್ ಮುಖೇಶ್ ಡಕಿಯಾ ನಿನ್ನೆ (ಡಿಸೆಂಬರ್ 25) ಐದು ಅಡಿ ಎತ್ತರದಿಂದ ಆಯಾತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ['ಪದ್ಮಾವತಿ' ಚಿತ್ರಕ್ಕೆ ದೀಪಿಕಾಗೆ ಸಿಗುವ ಸಂಭಾವನೆ ಎಷ್ಟು.?]

padhmavati

ಹೇಳಿ ಕೇಳಿ, 'ಪದ್ಮಾವತಿ' ಐತಿಹಾಸಿಕ ಹಿನ್ನಲೆ ಇರುವ ಸಿನಿಮಾ. ಹೀಗಾಗಿ, ವಿಶಿಷ್ಟವಾಗಿ ಸೆಟ್ ಒಂದನ್ನು ನಿರ್ಮಾಣ ಮಾಡಲಾಗಿತ್ತು. ಅಲ್ಲಿ ಗೋಪುರವೊಂದಕ್ಕೆ ಪೇಂಟ್ ಮಾಡುವಾಗ ಐದು ಅಡಿ ಎತ್ತರದಿಂದ ಮುಖೇಶ್ ಡಕಿಯಾ ಬಿದ್ದರು. ಬೆನ್ನು ಮತ್ತು ತಲೆಗೆ ತೀವ್ರ ಪೆಟ್ಟಾಗಿದ್ರಿಂದ, ತಕ್ಷಣ ಹತ್ತಿರದಲ್ಲಿ ಇದ್ದ ಕೋಕಿಲಾಬೆನ್ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದ್ರೆ, ಅಷ್ಟರಲ್ಲಿ ಮುಖೇಶ್ ಡಕಿಯಾ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಈ ಸಾವು ಆಕಸ್ಮಿಕವಾಗಿ ನಡೆದಿದೆ ಎಂದು ಮುಂಬೈನ ಡಿಸಿಪಿ (ವಿಭಾಗ 12) ಕಿರಣ್ ಕುಮಾರ್ ಚವಾಣ್ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ಕೂಡ ನಡೆಸಲಾಗುವುದು ಎಂದು ಹೇಳಿದ್ದಾರೆ. ಮುಖೇಶ್ ಡಕಿಯಾ ಸಾವಿನ ಕುರಿತು ಬನ್ಸಾಲಿ ನಿರ್ಮಾಣದ ಸಿಇಓ ಶೋಭಾ ಸಂತ್, 'ಈ ಘಟನೆ ಸಂಪೂರ್ಣವಾಗಿ ಅನಿರೀಕ್ಷಿತ ಮತ್ತು ದುರದೃಷ್ಟಕರ. ಮೃತರ ಕುಟುಂಬಕ್ಕೆ ಸಹಾಯ ಮಾಡಲಾಗುವುದು" ಎಂದು ಹೇಳಿದ್ದಾರೆ.['ಪದ್ಮಾವತಿ' ಜೊತೆ ಹಸಿಬಿಸಿಯಾಗಿ ಕಾಣಿಸಿಕೊಳ್ತಾರಾ ಶಾರುಖ್.?]

ಅಂದ್ಹಾಗೆ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅಭಿನಯಿಸುತ್ತಿರುವ 'ಪದ್ಮಾವತಿ' ಚಿತ್ರಕ್ಕೆ ಸಂಜಯ್ ಲೀಲಾ ಬನ್ಸಾಲಿ ಆಕ್ಷನ್‌-ಕಟ್ ಹೇಳುತ್ತಿದ್ದು, ಸಂಗೀತ ನಿರ್ದೇಶವನ್ನು ಬನ್ಸಾಲಿ ರವರೇ ಮಾಡುತ್ತಿದ್ದಾರೆ.

English summary
Tragedy befell the sets of Sanjay Leela Bhansali's Padmavati when a painter fell to his death.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada