»   » ಅಮೇರಿಕಾ ಅಧ್ಯಕ್ಷ ಟ್ರಂಪ್ ವಿರುದ್ಧ ಟ್ವೀಟ್ ಪ್ರಹಾರ ಮಾಡಿದ ಸೋನಂ ಕಪೂರ್

ಅಮೇರಿಕಾ ಅಧ್ಯಕ್ಷ ಟ್ರಂಪ್ ವಿರುದ್ಧ ಟ್ವೀಟ್ ಪ್ರಹಾರ ಮಾಡಿದ ಸೋನಂ ಕಪೂರ್

Posted By:
Subscribe to Filmibeat Kannada

ನೋಡೋಕೆ ತುಂಬಾ ಸ್ವೀಟ್ ಆಗಿ ಕಾಣಬಹುದು. ಆದ್ರೆ, ತಂಟೆಗೆ ಬಂದೋರ್ನ ತರಾಟೆಗೆ ತೆಗೆದುಕೊಳ್ಳುವ ಜಾಯಮಾನ ನಟಿ ಸೋನಂ ಕಪೂರ್ ರದ್ದು. ಎದುರಿಗೆ ಯಾರೇ ಇದ್ದರೂ ಸರಿ, ಅನಿಸಿದ್ದನ್ನ ನೇರವಾಗಿ ಹೇಳುವ ಗಟ್ಟಿ ಗುಂಡಿಗೆ ಕಪೂರ್ ಕುಡಿ ಸೋನಂಗಿದೆ.

ನಟಿ ದೀಪಿಕಾ ಪಡುಕೋಣೆ ಹಾಗೂ ಸೋನಂ ಕಪೂರ್ ನಡುವಿನ ಕೋಳಿ ಜಗಳ ನಿಮಗೆಲ್ಲ ಗೊತ್ತೇ ಇದೆ. ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇಲ್ಲದೆ ಮಾತನಾಡುವ ನಟಿ ಸೋನಂ ಕಪೂರ್ ಈಗಾಗಲೇ ಹಲವು ಬಾರಿ ವಿವಾದಗಳಿಗೆ ಸಿಲುಕಿದ್ದಾರೆ. ಆದರೂ, ತಮ್ಮ ನೇರವಂತಿಕೆಯನ್ನ ಮಾತ್ರ ಸೋನಂ ಕಪೂರ್ ಬಿಟ್ಟು ಕೊಟ್ಟಿಲ್ಲ. ಅದಕ್ಕೆ ಹೊಸ ನಿದರ್ಶನ ಇಲ್ಲಿದೆ ನೋಡಿ...

Trump is an imbecile says Bollywood Actress Sonam Kapoor

ನಟಿ ಸೋನಂ ಕಪೂರ್ ಇದೀಗ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧ ಟ್ವೀಟ್ ಪ್ರಹಾರ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಟ್ರಂಪ್ ನಡೆಯನ್ನ ಸೋನಂ ಕಪೂರ್ ವಿರೋಧಿಸಿದ್ದಾರೆ.

ಸೋನಂ ಕಪೂರ್ ವಿರುದ್ಧ ಗರಂ ಆದ ದೀಪಿಕಾ ಪಡುಕೋಣೆ ಅಭಿಮಾನಿಗಳು.!

ಆನೆ ಹಾಗೂ ಇತರೆ ಪ್ರಾಣಿಗಳ ಬೇಟೆಯಾಡಿದವರಿಗೆ ಟ್ರೋಫಿ ನೀಡಲು ಟ್ರಂಪ್ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ. ಇದನ್ನ ನೋಡಿ ಟ್ರಂಪ್ ಗೆ Imbecile (ಸ್ಟುಪಿಡ್/ಮೂರ್ಖ) ಎಂದಿದ್ದಾರೆ ನಟಿ ಸೋನಂ ಕಪೂರ್.

''ಬೇಟೆಯಾಡುವುದು ಭಾರತದಲ್ಲಿ ಅಪರಾಧ. ಇದನ್ನು ಇಡೀ ಜಗತ್ತು ನಮ್ಮಿಂದ ಕಲಿಯಬೇಕಿದೆ. ಟ್ರಂಪ್ ಒಬ್ಬ ಸ್ಟುಪಿಡ್/ಮೂರ್ಖ'' ಎಂದು ಸೋನಂ ಕಪೂರ್ ಟ್ವೀಟ್ ಮಾಡಿದ್ದಾರೆ.

English summary
Bollywood Actress Sonam Kapoor has taken her twitter account to call America President Donald Trump as an imbecile.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada