»   » ನನ್ನ ಮತ್ತು ಕರೀನಾ ಮಗು ಒಟ್ಟಿಗೆ ಸ್ಕೂಲ್ ಗೆ ಹೋಗ್ತಾರೆ: ತುಷಾರ್

ನನ್ನ ಮತ್ತು ಕರೀನಾ ಮಗು ಒಟ್ಟಿಗೆ ಸ್ಕೂಲ್ ಗೆ ಹೋಗ್ತಾರೆ: ತುಷಾರ್

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ಬೇಬೋ ಕರೀನಾ ಕಪೂರ್ ಅವರು ತಾಯಿಯಾಗುತ್ತಿರುವ ವಿಚಾರವನ್ನು ಖುದ್ದು ಅವರ ಪತಿ ಸೈಫ್ ಅಲಿಖಾನ್ ಟ್ವಿಟ್ಟರ್ ನಲ್ಲಿ ಹೇಳುವ ಮೂಲಕ ಇಡೀ ಲೋಕಕ್ಕೆ ತಿಳಿಯುವಂತೆ ಮಾಡಿದ್ದಾರೆ.

ಇದೀಗ ಕರೀನಾ ಕಪೂರ್ ಅವರು ಗರ್ಭಿಣಿಯಾಗಿರುವ ಬಗ್ಗೆ ಅವರ ಖಾಸ ದೋಸ್ತ್ ನಟ ತುಷಾರ್ ಕಪೂರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ಖುಷಿಯಲ್ಲಿ ತುಷಾರ್ ಕಪೂರ್ ಅವರು ಕರೀನಾ ಅವರಿಗೆ ವಿಭಿನ್ನವಾಗಿ ಶುಭ ಹಾರೈಸಿದ್ದಾರೆ.[ಕರೀನಾ ಕಪೂರ್ ಒಡಲು ಇನ್ನೂ ಯಾಕೆ ತುಂಬಿಲ್ಲ?]

Tusshar Kapoor's Reaction On Kareena Kapoor's Pregnancy

ಅಂದಹಾಗೆ ತುಷಾರ್ ಕಪೂರ್ ಅವರು ಮದುವೆಯಾಗದೇ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ಸಂದರ್ಭದಲ್ಲಿ ಗೆಳತಿ ಕರೀನಾ ಕಪೂರ್ ಅವರು ತುಷಾರ್ ಕಪೂರ್ ಅವರಿಗೆ ಮನೆಗೆ ತೆರಳಿ ಶುಭಾಶಯ ಕೋರಿದ್ದರು.[ಮದುವೆ ಆಗದೇ ಅಪ್ಪನಾದ ಅಪರೂಪದ ಬಾಲಿವುಡ್ ನಟ]

ಇದೀಗ ಬಾಲ್ಯ ಸ್ನೇಹಿತರಾಗಿರುವ ಇವರಿಬ್ಬರು ಹೆತ್ತವರಾಗಿದ್ದಕ್ಕೆ ಸಖತ್ ಖುಷಿಯಲ್ಲಿದ್ದಾರೆ. ಅದೇ ಖುಷಿಯಲ್ಲಿ ತುಷಾರ್ ಕಪೂರ್ ಅವರು ಹೀಗನ್ನುತ್ತಾರೆ. "ನನ್ನ ಮಗ ಮತ್ತು ಕರೀನಾ ಅವರ ಮಗು ಮುಂದಿನ ದಿನಗಳಲ್ಲಿ ಒಟ್ಟಿಗೆ, ಒಂದೇ ಶಾಲೆಗೆ ಹೋಗುತ್ತಾರೆ".

Tusshar Kapoor's Reaction On Kareena Kapoor's Pregnancy

"ನನ್ನ ಮತ್ತು ಗೆಳತಿ ಕರೀನಾ ಅವರ ಮಕ್ಕಳು ಒಂದಾಗಿ ಆಟ ಆಡಲಿದ್ದಾರೆ. ಅವರಿಬ್ಬರು ಒಬ್ಬರಿಗೊಬ್ಬರು ಕಂಪೆನಿ ನೀಡಲಿದ್ದಾರೆ. ನಾನು ಮತ್ತು ಕರೀನಾ ತುಂಬಾ ಸಮಯಗಳಿಂದ ಅತ್ಯುತ್ತಮ ಗೆಳೆಯರು. ಇದೀಗ ಕರೀನಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿರೋದು ತುಂಬಾ ಖುಷಿಯ ವಿಚಾರ" ಎಂದು ನಟ ತುಷಾರ್ ಕಪೂರ್ ಅವರು ತಿಳಿಸಿದ್ದಾರೆ.[ಕರೀನಾಳಿಂದ ಮಕ್ಕಳು ನಿರೀಕ್ಷಿಸಿಲ್ಲ: ಸೈಫ್ ಅಲಿ ಖಾನ್]

ನಟಿ ಕರೀನಾ ಕಪೂರ್ ಅವರು ಡಿಸೆಂಬರ್ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಅವರ ಪತಿ ನಟ ಸೈಫ್ ಅಲಿಖಾನ್ ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ.

English summary
Bollywood Actor Tusshar Kapoor and Actress Kareena Kapoor became thick friends. The actor is happy to know that his close friend Kareena is expecting her first child in December
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada