For Quick Alerts
  ALLOW NOTIFICATIONS  
  For Daily Alerts

  ಹೃದಯ ಸ್ತಂಭನದಿಂದ ಶೂಟಿಂಗ್ ಸೆಟ್ ನಲ್ಲೇ ಕುಸಿದು ಬಿದ್ದ ನಟಿ.!

  |

  ಟಿವಿ ಆಂಕರ್ ಆಗಿ, ಹಿಂದಿ ಕಿರುತೆರೆ ನಟಿಯಾಗಿ, ಮಾಡೆಲ್ ಆಗಿ, ತೆಲುಗು ಸಿನಿ ಅಂಗಳದಲ್ಲಿ ಐಟಂ ಗರ್ಲ್ ಆಗಿ ಮಿಂಚಿರುವ ಬೆಡಗಿ ಗೆಹನಾ ವಸಿಷ್ಠ. 31 ವರ್ಷ ವಯಸ್ಸಿನ ಗೆಹನಾ ವಸಿಷ್ಠ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಣ ಹೃದಯ ಸ್ತಂಭನ.!

  ವೆಬ್ ಸೀರೀಸ್ ಒಂದರಲ್ಲಿ ಗೆಹನಾ ವಸಿಷ್ಠ ನಟಿಸುತ್ತಿದ್ದರು. ಚಿತ್ರೀಕರಣ ನಡೆಯುತ್ತಿರುವಾಗಲೇ ಶೂಟಿಂಗ್ ಸೆಟ್ ನಲ್ಲಿ ಹೃದಯ ಸ್ತಂಭನದಿಂದ ಗೆಹನಾ ವಸಿಷ್ಠ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಮುಂಬೈನ ರಕ್ಷಾ ಆಸ್ಪತ್ರೆಗೆ ಸೇರಿಸಲಾಗಿದೆ.

  ವೆಬ್ ಸರಣಿಯೊಂದರಲ್ಲಿ ಅಭಿನಯಿಸುತ್ತಿದ್ದ ಗೆಹನಾ ವಸಿಷ್ಠ ಬಿಡುವಿಲ್ಲದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಎರಡು ದಿನ ಯಾವುದೇ ಪೌಷ್ಟಿಕಾಹಾರ ಸೇವಿಸಿರಲಿಲ್ಲ. ವೆಬ್ ಸರಣಿ ತಂಡದವರು ಕೇವಲ ಜ್ಯೂಸ್ ಮಾತ್ರ ನೀಡಿದ್ದರಂತೆ. ಇದರಿಂದಾಗಿ ಗೆಹನಾ ವಸಿಷ್ಠ ರವರಿಗೆ ನಿಶ್ಯಕ್ತಿ ಉಂಟಾಗಿದೆ. ಬಳಿಕ ಹೃದಯ ಸ್ತಂಭನದಿಂದ ಕುಸಿದು ಬಿದ್ದಿದ್ದಾರೆ.

  ಕಳೆದ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಗೆಹನಾ ವಸಿಷ್ಠಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಟ್ರೋಕ್ ಮತ್ತು ಲೋ ಬಿಪಿ ಕೂಡ ಇರುವುದರಿಂದ ಚಿಕಿತ್ಸೆಗೆ ಆಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಅಳವಡಿಸಿ ಗೆಹನಾ ವಸಿಷ್ಠಗೆ ಟ್ರೀಟ್ಮೆಂಟ್ ನೀಡಲಾಗುತ್ತಿದೆ.

  English summary
  TV Actress Gehna Vasisth suffers Cardiac Arrest while shooting Web Series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X