»   » 50ರ ಸಂಭ್ರಮದಲ್ಲಿರುವ ನಟನಿಂದ, 'ವೋಗ್' ನಿಯತಕಾಲಿಕೆಗೆ ಹಾಟ್ ಫೋಸ್

50ರ ಸಂಭ್ರಮದಲ್ಲಿರುವ ನಟನಿಂದ, 'ವೋಗ್' ನಿಯತಕಾಲಿಕೆಗೆ ಹಾಟ್ ಫೋಸ್

By: ಸೋನು ಗೌಡ
Subscribe to Filmibeat Kannada

'ವೋಗ್' ಇಂಡಿಯಾ ನಿಯತಕಾಲಿಕೆಯ ನವೆಂಬರ್ ಸಂಚಿಕೆಯ ಮುಖಪುಟದಲ್ಲಿ, ಈಗಲೂ ಚಿರಯುವಕನಂತೆ ಕಾಣುವ ಬಾಲಿವುಡ್ ಬಾದ್ ಷಾ 'ಕಿಂಗ್ ಖಾನ್' ಶಾರುಖ್ ಅವರು ಹಾಟ್ ಬೆಡಗಿಯೊಂದಿಗೆ ಸಖತ್ ಫೋಸ್ ನೀಡಿದ್ದಾರೆ.

ನವೆಂಬರ್ 2 ರಂದು 50 ವರ್ಷಕ್ಕೆ ಕಾಲಿಡುತ್ತಿರುವ ಕಿಂಗ್ ಖಾನ್ ಶಾರುಖ್ ಅವರು ವಿಶೇಷವಾಗಿ ಈ ಬಾರಿ ಖ್ಯಾತ ನಿಯತಕಾಲಿಕೆ ವೋಗ್ ಮ್ಯಾಗಜೀನ್ ನ ಮುಖಪುಟದಲ್ಲಿ ಸಖತ್ ಗ್ರ್ಯಾಂಡ್ ಲುಕ್ ನಲ್ಲಿ ಮಿಂಚಿದ್ದಾರೆ.

ಬಿಟೌನ್ ನಲ್ಲಿ ಈಗಲೂ ಚಿರಯುವಕನಂತಿರುವ ಈ ನಟನಿಗೆ ಆಫರ್ ಗಳ ಸುರಿಮಳೆಯೇ ಸುರಿಯುತ್ತಿದೆ. ನವೆಂಬರ್ 2 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿರುವ ಕಿಂಗ್ ಖಾನ್ 50 ರ ಸಂಭ್ರಮವನ್ನು ಸಖತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ.

Unstoppable at 50: Shah Rukh Khan on the 'Vogue' Cover

"ನಾನು ಅಹಂಕಾರದಿಂದ ಅಥವಾ ಸೊಕ್ಕಿನಿಂದ ಈ ರೀತಿ ಹೇಳುತ್ತಿದ್ದೇನೆ ಎಂದು ನೀವು ಅಂದುಕೊಳ್ಳಬೇಡಿ. ಆದರೆ ನನ್ನ 50 ರ ವಯಸ್ಸಿನಲ್ಲೂ ನಾನು ಬಯಸುವುದು ಇದೇ ಅಭಿಮಾನ ಹಾಗೂ ಪ್ರೀತಿಯನ್ನು" ಎಂದು ಕಿಂಗ್ ಖಾನ್ ಶಾರುಖ್ ಅವರು ಸಂದರ್ಶನದಲ್ಲಿ ನುಡಿದಿದ್ದಾರೆ.

'ಕ್ಯಾಮರಾ ಹಾಗೂ ಅಭಿಮಾನಿಗಳು ನನ್ನನ್ನು ತುಂಬಾ ಇಷ್ಟಪಡುತ್ತಾರೆ. ಆದ್ರಿಂದ 50ರ ವಸಂತದಲ್ಲೂ ಮುನ್ನುಗ್ಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಕಿಂಗ್ ಖಾನ್ ಅಭಿಪ್ರಾಯ.

'ಮುಂದಿನ ವರ್ಷಗಳಲ್ಲಿ ಇಟಲಿಯ ಖಾದ್ಯಗಳನ್ನು ತಯಾರಿಸುವುದನ್ನು ಕಲಿಯುವುದು, ಗಿಟಾರ್ ನಲ್ಲಿ 10 ಅತ್ಯುತ್ತಮ ಹಾಡುಗಳನ್ನು ಬಾರಿಸಿ, ಆ ಹಾಡುಗಳನ್ನು ವಿಶ್ವದ ಅತೀ ಸುಂದರ ಮಹಿಳೆಯರೊಂದಿಗೆ ಹಾಡುವುದ ಹೀಗೆ ಹತ್ತು ಹಲವು ಹೊಸ ಕೆಲಸಗಳನ್ನು ಮಾಡುವ ಸಂಕಲ್ಪ ತೊಟ್ಟಿರುವುದಾಗಿ ಸಂದರ್ಶನದಲ್ಲಿ ಶಾರುಖ್ ತಿಳಿಸಿದ್ದಾರೆ.

ಸದ್ಯಕ್ಕೆ 'ದಿಲ್ ವಾಲೆ 2' 'ರಾಯೀಸ್', ಮತ್ತು 'ಫ್ಯಾನ್' ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟನಿಗೆ ನಮ್ಮ ಕಡೆಯಿಂದಲೂ ಅಡ್ವಾನ್ಸ್ ಹ್ಯಾಪಿ ಬರ್ತ್ ಡೇ.

English summary
Vogue India magazine features Shah Rukh Khan on the cover of November 2015 issue, as the superstar turns 50 on Nov. 2. Shah Rukh heats things on the cover with a supermodel and looks awesome in a beard. The "King of Romance," "Badshah" and "King Khan talks about his superstar life at 50.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada