Don't Miss!
- Sports
IND vs NZ 3rd ODI: ವಿರಾಟ್ ಕೊಹ್ಲಿಗಾಗಿ ತನ್ನ ವಿಕೆಟ್ ತ್ಯಾಗ ಮಾಡಿದ ಇಶಾನ್ ಕಿಶನ್; ವಿಡಿಯೋ
- Finance
7th Pay Commission:ಡಿಎ ವಿತರಣೆ ಶೀಘ್ರ, ಸರ್ಕಾರ ಫಿಟ್ಮೆಂಟ್ ಅಂಶ ಏರಿಕೆ ಮಾಡುವ ಸಾಧ್ಯತೆ
- News
ಗರ್ಭಕೋಶದ ಕ್ಯಾನ್ಸರ್ಗೆ ಭಾರತದ ಮೊದಲ ಲಸಿಕೆ ಬಿಡುಗಡೆ
- Lifestyle
ಚಾಣಕ್ಯ ಪ್ರಕಾರ ನಿಜವಾದ ಫ್ರೆಂಡ್ ಅಂತ ಗುರುತಿಸುವುದು ಹೇಗೆ ಗೊತ್ತಾ?
- Automobiles
ವಧುವನ್ನು ಮನೆಗೆ ಕರೆದೊಯ್ಯಲು ತಂದೆಯ ಹಳೆಯ ಮಾರುತಿ 800 ಕಾರು ಬಳಿಸಿದ ಕೆನಡಾದ ಎನ್ಆರ್ಐ
- Technology
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ನನ್ನ ಖಾಸಗಿ ಅಂಗ ಕಾಣಿಸದ ಹೊರತು ಜೈಲಿಗೆ ಕಳಿಸಲು ಸಾಧ್ಯವಿಲ್ಲ: ಊರ್ಫಿ ಜಾವೇದ್ ತಿರುಗೇಟು!
ಊರ್ಫಿ ಜಾವೇದ್‌ಗೂ ವಿವಾದಕ್ಕೂ ತೀರಾ ಹತ್ತಿರದ ನಂಟಿದೆ. ವಿಚಿತ್ರ ಉಡುಗೆ ತೊಟ್ಟು ಬಂದರೆ ಕ್ಯಾಮರಾ ಮುಂದೆ ಬಂದರೆ ಮುಗಿದೇ ಹೋಯ್ತು. ಬೇಡ ಅಂದರೂ ವಿವಾದದಲ್ಲಿ ಸಿಕ್ಕಿಕೊಳ್ಳುತ್ತಾರೆ. ಸದ್ಯ ಬಿಜೆಪಿ ಮುಖಂಡರೊಬ್ಬರು ಊರ್ಫಿ ಜಾವೇದ್ ವಿರುದ್ಧ ದೂರ ದಾಖಲಿಸಿದ್ದರು.
ಇತ್ತೀಚೆಗೆ ಊರ್ಪಿ ಜಾವೇದ್ ದುಬೈ ಪೊಲೀಸರು ಕೆಂಗಣ್ಣಿಗೆ ಗುರಿಯಾಗಿದ್ದರು. ಸರಿಯಾಗಿ ಉಡುಪು ಧರಿಸದ ಹಿನ್ನೆಲೆಯಲ್ಲಿ ಊರ್ಫಿ ಜಾವೇದ್‌ರನ್ನು ಪ್ರಶ್ನೆ ಮಾಡಿದ್ದರು. ಇದೂ ಕೂಡ ನೆಟ್ಟಿಗರ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಇದೀಗ ಊರ್ಫಿ ವಿರುದ್ಧ ಬಿಜೆಪಿ ಸದಸ್ಯೆ ಚಿತ್ರಾ ವಾಘ್ ಎಂಬುವವದರು ಹೊಸ ವರ್ಷದಂದೇ ಕೇಸ್ ದಾಖಲಿಸಿದ್ದಾರೆ.
ನಡುರಸ್ತೆಯಲ್ಲಿ
ಅಶ್ಲೀಲ
ಫೋಟೊಶೂಟ್
ದುಬೈನಲ್ಲಿ
ನಟಿ
ಉರ್ಫಿ
ಜಾವೇದ್
ಬಂಧನ
ತನ್ನ ವಿರುದ್ಧ ದೂರು ದಾಖಲಿಸುತ್ತಿದ್ದಂತೆ ಊರ್ಫಿ ಜಾವೇದ್ ತಿರುಗೇಟು ನೀಡಿದ್ದಾರೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಊರ್ಫಿ ಮಾರುದ್ಧ ಬರೆದುಕೊಂಡಿದ್ದಾರೆ. ತನ್ನ ಜೈಲಿಗೆ ಕಳಿಸುವಂತಹ ಕಾಯ್ದೆ ಸಂವಿದಾನದಲ್ಲಿ ಇಲ್ಲವೆಂದು ವಿವಾದಾತ್ಮಕ ನಟಿ ಹೇಳಿಕೆ ನೀಡಿದ್ದಾರೆ.

ಊರ್ಫಿ ಜಾವೇದ್ ವಿರುದ್ಧ ದೂರು ದಾಖಲು
ಹೊಸ ವರ್ಷದ ಹೊಸ್ತಿಲಲ್ಲೇ ಊರ್ಫಿ ಜಾವೇದ್ ವಿರುದ್ಧ ಮಹಾರಾಷ್ಟ್ರದ ಮಹಿಳಾ ಮೋರ್ಚಾದ ಅಧ್ಯಕ್ಷೆ ಚಿತ್ರಾ ವಾಘ್ ದೂರು ದಾಖಲಿಸಿದ್ದಾರೆ. ಅಶ್ಲೀಲ ಉಡುಗೆ ತೊಟ್ಟು ಫೋಸ್ ನೀಡಿದ್ದಕ್ಕೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೊಗಳನ್ನು ಶೇರ್ ಮಾಡಿದ್ದಕ್ಕೆ ಕೇಸ್ ದಾಖಲಿಸಿದ್ದರು. ಚಾಹತ್ ಖನ್ನ, ಫರ್ಹಾ ಅಲಿ ಖಾನ್, ಸುನಿಲ್ ಪಾಲ್, ಚೇತನ್ ಭಗತ್ ಸೇರಿದಂತೆ ಹಲವು ಊರ್ಫಿ ಜಾವೇದ್ ವಿರುದ್ಧ ತಿರುಗಿಬಿದ್ದಿದ್ದರು. ಈಗ ತನ್ನ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

'ತನ್ನನ್ನು ಜೈಲಿ ಕಳುಹಿಸುವ ಕಾಯ್ದೆ ಇಲ್ಲ'
ಊರ್ಫಿ ಜಾವೇದ್ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದು, ತನ್ನ ಬಂಧಿಸುವ ಕಾಯ್ದೆ ಸಂವಿಧಾನದಲ್ಲಿ ಇಲ್ಲ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಬಿಲ್ಕಿಸ್ ಬಾನು ಪ್ರಕರಣದ ಅತ್ಯಾಚಾರಿಗಳು ಆರಾಮಾಗಿ ಓಡಾಡುತ್ತಿದ್ದು, ಅವರನ್ನು ಬಂಧಿಸಿ ಎಂದು ಡಿಮ್ಯಾಂಡ್ ಮಾಡಿದ್ದಾಳೆ. " ಹೊಸ ವರ್ಷವನ್ನು ಮತ್ತೊಬ್ಬ ರಾಜಕೀಯ ವ್ಯಕ್ತಿಯಿಂದ ಮತ್ತೊಂದು ಪೊಲೀಸ್ ಕೇಸ್‌ನಿಂದ ಆರಂಭ ಆಗಿದೆ. ರಾಜಕೀಯ ವ್ಯಕ್ತಿಗಳಿಗೆ ಬೇರೆ ಕೆಲಸ ಇಲ್ಲವೇ? ರಾಜಕೀಯ ವ್ಯಕ್ತಿಗಳು ಹಾಗೂ ವಕೀಲರು ಮೂಖರಾಗಿದ್ದಾರೆಯೇ? ನನ್ನ ಜೈಲಿಗೆ ಕಳುಹಿಸಲು ಸಂವಿಧಾನದಲ್ಲಿ ಯಾವುದೇ ಕಾಯ್ದೆ ಇಲ್ಲ. ಬೆತ್ತಲೆ ಮತ್ತು ಅಶ್ಲೀಲತೆ ಅನ್ನೋದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಲೇ ಇರುತ್ತೆ." ಎಂದು ಊರ್ಫಿ ಜಾವೇದ್ ಹೇಳಿದ್ದಾರೆ.

ನನ್ನನ್ನು ಬಂಧಿಸಲು ಸಾಧ್ಯವಿಲ್ಲ
ಊರ್ಫಿ ಜಾವೇದ್ ಇಲ್ಲಿಗೆ ಸುಮ್ಮನಾಗಿಲ್ಲ. "ನನ್ನ ಎರಡು ಖಾಸಗಿ ಅಂಗಾಂಗ ಕಾಣಿಸದ ಹೊರತಾಗಿ ಯಾರೂ ನನ್ನನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ. ಇವೆರೆಲ್ಲರೂ ಮೀಡಿಯಾದ ಗಮನ ಸೆಳೆಯುವುದಕ್ಕೆ ಹೀಗೆ ಮಾಡಿದ್ದಾರೆ. ಮುಂಬೈನಲ್ಲಿ ಮಾನಕಳ್ಳ ಕಳ್ಳಸಾಗಾಣಿಕ ಹಾಗೂ ಲೈಂಗಿಕ ಕಳ್ಳಸಾಗಾಣಿಕೆ ಹೆಚ್ಚಿದ್ದು, ನಾನು ಅದನ್ನು ವಿರೋಧಿಸಿದ್ದೇನೆ. ಅಕ್ರಮ ಡ್ಯಾನ್ಸ್ ಬಾರ್‌ಗಳು ಹಾಗೂ ವೇಶ್ಯಾವಾಟಿಕೆಯನ್ನು ಮುಚ್ಚುವ ಬಗ್ಗೆ ಏನಂತೀರಾ?" ಎಂದು ಊರ್ಫಿ ಜಾವೇದ್ ಕಿಡಿಕಾರಿದ್ದಾರೆ.

ಬಿಲ್ಕಿಸ್ ಬಾನು ಕೇಸ್ ಏನಾಯ್ತು?
ಎಲ್ಲಾ ರಾಜಕೀಯ ಮುಖಂಡರು ನನ್ನನ್ನು ಬಂಧಿಸುವಂತೆ ಆಗ್ರಹ ಮಾಡುತ್ತಿದ್ದಾರೆ. ಅದೇ ಬಿಲ್ಕಿಸ್ ಬಾಬು ಅತ್ಯಾಚಾರಿಗಳು ಆರಾಮಾಗಿ ಓಡಾಡುತ್ತಿದ್ದು, ರಾಜಕಾರಣಗಳು ನನ್ನನ್ನು ಬಂಧಿಸುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ನಾನು ಸಮಾಜಕ್ಕೆ ಅತ್ಯಾಚಾರಿಗಳಿಗಿಂತ ಮಾರಕವೇ? ಚಿತ್ರಾ ವಾಘ್ ಅವರನ್ನು ಬಿಟ್ಟು ಎಲ್ಲರಿಗೂ ಹ್ಯಾಪಿ ನ್ಯೂ ಇಯರ್" ಎಂದು ಊರ್ಫಿ ಜಾವೇದ್ ಆಕ್ರೋಶ ಹೊರ ಹಾಕಿದ್ದಾರೆ.