For Quick Alerts
  ALLOW NOTIFICATIONS  
  For Daily Alerts

  ಪಾಪ ಈ ನಟಿಗೆ ಮುಂಬೈನಲ್ಲಿ ಯಾರೂ ಬಾಡಿಗೆ ಮನೆ ಕೊಡ್ತಿಲ್ಲವಂತೆ! ಏಕೆ?

  By ಫಿಲ್ಮಿಬೀಟ್ ಡೆಸ್ಕ್
  |

  ಸಿನಿಮಾ ನಟ-ನಟಿಯರಿಗೆ ಮನೆ ಬಾಡಿಗೆಗೆ ನೀಡಲು ನಾ ಮುಂದು ತಾ ಮುಂದು ಎನ್ನುವವರಿದ್ದಾರೆ. ಆದರೆ ಬಾಲಿವುಡ್‌ನ ಹಾಟ್ ನಟಿಯೊಬ್ಬರಿಗೆ ಮುಂಬೈನಲ್ಲಿ ಯಾರೂ ಮನೆ ನೀಡಲು ತಯಾರಿಲ್ಲವಂತೆ!

  ಹೌದು, ಬಾಲಿವುಡ್‌ನ ನಟಿ, ಮಾಡೆಲ್, ಸೋಷಿಯಲ್ ಮೀಡಿಯಾ ಇನ್‌ಪ್ಲುಯೆನ್ಸರ್ ಉರ್ಫಿ ಜಾವೇದ್‌ಗೆ ಮುಂಬೈನಲ್ಲಿ ಯಾರೂ ಬಾಡಿಗೆ ಮನೆ ನೀಡುತ್ತಿಲ್ಲವಂತೆ.

  ಉರ್ಫಿ ಜಾವೇದ್‌ಗೆ ಮುಂಬೈನಲ್ಲಿ ಮನೆ ನೀಡದಿರಲು ಸಾಮಾಜಿಕ ಜಾಲತಾಣದಲ್ಲಿ ಆಕೆಯ ಚಿತ್ರ ವಿಚಿತ್ರ ಅವತಾರಗಳೇ ಕಾರಣ.

  ಚಿತ್ರ ವಿಚಿತ್ರ ವಿನ್ಯಾಸದ ಬಟ್ಟೆಗಳನ್ನು ತೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಫೋಸು ಕೊಡುವುದರ ಮೂಲಕವೇ ಉರ್ಫಿ ಜಾವೇದ್ ಹೆಚ್ಚು ಜನಪ್ರಿಯರು. ಇದೀಗ ಇವರ ಇದೇ ಚಾಳಿಯ ಕಾರಣಕ್ಕೆ ಯಾರೂ ಇವರಿಗೆ ಮನೆ ನೀಡುತ್ತಿಲ್ಲವಂತೆ.

  ''ನಾನು ಬಟ್ಟೆ ತೊಡುವ ರೀತಿಯಿಂದಾಗಿ ಯಾವ ಮುಸ್ಲಿಂ ಮನೆ ಮಾಲೀಕರು ಸಹ ನನಗೆ ಮನೆ ಬಾಡಿಗೆಗೆ ನೀಡುತ್ತಿಲ್ಲ. ಇನ್ನು ನಾನು ಮುಸ್ಲಿಂ ಎಂಬ ಕಾರಣಕ್ಕೆ ಹಿಂದು ಮನೆ ಮಾಲೀಕರು ನನಗೆ ಮನೆ ನೀಡುತ್ತಿಲ್ಲ. ಇನ್ನು ಕೆಲವು ಮನೆ ಮಾಲೀಕರಿಗೆ ನನಗೆ ಮನೆ ನೀಡಲು ಭಯ, ಕಾರಣ ನನಗೆ ಬರುವ ರಾಜಕೀಯ ಬೆದರಿಕೆಗಳು. ಒಟ್ಟಿನಲ್ಲಿ ಮುಂಬೈನಲ್ಲಿ ಮನೆ ಹುಡುಕುವುದು ಬಹಳ ಕಷ್ಟವಾಗಿದೆ'' ಎಂದು ಉರ್ಫಿ ಜಾವೇದ್ ಟ್ವೀಟ್ ಮಾಡಿದ್ದಾರೆ.

  ಚಿತ್ರ ವಿಚಿತ್ರ ಗ್ಲಾಮರಸ್ ಬಟ್ಟೆಗಳನ್ನು ಧರಿಸುವ ಉರ್ಫಿ ಇತ್ತೀಚೆಗಷ್ಟೆ ಡಸ್ಟ್ ಬಿನ್ ಕವರ್‌ನಿಂದ ಮಾಡಿದ ಬಟ್ಟೆಗಳನ್ನು ಧರಿಸಿ ಸುದ್ದಿಯಾಗಿದ್ದಾರೆ. ಅತಿಯಾದ ದೇಹ ಪ್ರದರ್ಶನಕ್ಕೆ ಅವಕಾಶವಿರುವ ಬಟ್ಟೆಗಳನ್ನೇ ಆಯ್ದು ಧರಿಸುವ ಉರ್ಫಿ ಇದೇ ಕಾರಣಕ್ಕೆ ದೊಡ್ಡ ಸಂಖ್ಯೆಯ ಸೋಷಿಯಲ್ ಮೀಡಿಯಾ ಫಾಲೋವರ್‌ಗಳನ್ನು ಸಹ ಪಡೆದುಕೊಂಡಿದ್ದಾರೆ.

  ಉರ್ಫಿ ಧರಿಸುವ ಚಿತ್ರ ವಿಚಿತ್ರ ಗ್ಲಾಮರಸ್ ಬಟ್ಟೆಗಳಿಂದಾಗಿ ಇತ್ತೀಚೆಗೆ ಸಮಸ್ಯೆಗೆ ಸಹ ಸಿಲುಕಿದ್ದರು. ಬಿಜೆಪಿಯ ಮುಖಂಡೆ ಚಿತ್ರಾ ವಾಘ್ ಎಂಬುವರು ಉರ್ಫಿ ವಿರುದ್ಧ ದೂರು ನೀಡಿದ್ದರು. ಉರ್ಫಿ ಸಹ ಚಿತ್ರಾ ವಿರುದ್ಧ ಬೆದರಿಕೆ ದೂರು ದಾಖಲಿಸಿದ್ದರು. ಪೊಲೀಸರು ಉರ್ಫಿಯನ್ನು ಕರೆಸಿ ಹೇಳಿಕೆ ದಾಖಲಿಸಿಕೊಂಡಿದ್ದರು.

  ಉರ್ಫಿ ಜಾವೇದ್, ಸೋಷಿಯಲ್ ಮೀಡಿಯಾದಲ್ಲಿ ಮಾತ್ರವೇ ಅಲ್ಲದೆ ಆಗಾಗ್ಗೆ ಟಿವಿ ರಿಯಾಲಿಟಿ ಶೋ, ಧಾರಾವಾಹಿಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಬಿಗ್‌ಬಾಸ್ ಒಟಿಟಿಯಲ್ಲಿ ಕಾಣಿಸಿಕೊಂಡಿದ್ದ ಉರ್ಫಿ, ಎಂಟಿವಿ ಸ್ಪ್ಲಿಟ್‌ವಿಲ್ಲಾನಲ್ಲಿಯೂ ಕಾಣಿಸಿಕೊಂಡಿದ್ದರು. ಇದರ ಹೊರತಾಗಿ, 'ಕಸೌಟಿ ಜಿಂದಗೀ ಕಿ', 'ಯೇ ರಿಶ್ತಾ ಕ್ಯಾ ಕೆಹಲಾತಾ ಹೈ' ಧಾರಾವಾಹಿಗಳಲ್ಲಿ ಸಹ ನಟಿಸಿದ್ದಾರೆ. ಉರ್ಫಿ ತಮ್ಮ ಮುಂದಿನ ಪ್ರಾಜೆಕ್ಟ್ ಅನ್ನು ಇನ್ನಷ್ಟೆ ಘೋಷಿಸಬೇಕಿದೆ.

  English summary
  model, social media influencer Urfi Javed said no Hindu or Muslim land lords in Mumbai not giving her house for rent.
  Wednesday, January 25, 2023, 15:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X