twitter
    For Quick Alerts
    ALLOW NOTIFICATIONS  
    For Daily Alerts

    ನಟಿ ಉರ್ಫಿ ವಿರುದ್ಧ ಬಿಜೆಪಿ ದೂರು, ಸಮನ್ಸ್ ನೀಡಿದ ಮುಂಬೈ ಪೊಲೀಸರು

    By ಫಿಲ್ಮಿಬೀಟ್ ಡೆಸ್ಕ್
    |

    ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲತೆ ಪ್ರದರ್ಶನ ಆರೋಪದ ಬೆನ್ನಲ್ಲೆ ಸೋಷಿಯಲ್ ಮೀಡಿಯಾ ಸೆನ್ಸೇಶನ್ ಉರ್ಫಿ ಜಾವೇದ್‌ ಗೆ ಮುಂಬೈ ಪೊಲೀಸರು ಬುಲಾವ್ ನೀಡಿದ್ದಾರೆ.

    ಉರ್ಫಿ ಜಾವೇದ್ ತಮ್ಮ ಚಿತ್ರ ವಿಚಿತ್ರ ಬಟ್ಟೆಗಳಿಂದ, ಅತಿ ಗ್ಲಾಮರಸ್ ಫೋಟೊಗಳಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. ತೀರಾ ಅತಿಯಾಗಿ ದೇಹ ಕಾಣುವಂತ ಬಟ್ಟೆಗಳನ್ನು ಧರಿಸುವ ಉರ್ಫಿ ವಿರುದ್ಧ ಇತ್ತೀಚೆಗೆ ಕೆಲವು ಸಂಪ್ರದಾಯವಾದಿಗಳು ಹರಿಹಾಯ್ದಿದ್ದರು.

    ಆದರೆ ಇದಕ್ಕೆಲ್ಲ ಬಗ್ಗದೇ ಇದ್ದ ಉರ್ಫಿ ಜಾವೇದ್, ನನ್ನ ಸ್ತನ ಹಾಗೂ ಜನನಾಂಗ ಮುಚ್ಚಿರುವ ವರೆಗೂ ಯಾರೂ ನನ್ನನ್ನು ಜೈಲಿಗೆ ಕಳಿಸಲಾರಿರಿ ಎಂದು ಸವಾಲು ಹಾಕದಿದ್ದರು. ಅದರ ಬೆನ್ನಲ್ಲೆ ಬಿಜೆಪಿ ಮುಖಂಡೆ ವಿತ್ರಾ ವಾಗ್ ಉರ್ಫಿ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು.

    Urfi Javed Summoned By Mumbai Police After BJPs Chaitra Waghs Complaint

    ಸಾರ್ವಜನಿಕ ಪ್ರದೇಶದಲ್ಲಿ ದೇಹ ಪ್ರದರ್ಶನ, ಅಸಮಂಜಸ ವರ್ತನೆ ಆರೋಪಗಳನ್ನು ಬಿಜೆಪಿ ಮುಖ್ಯಸ್ಥೆ ಉರ್ಫಿ ವಿರುದ್ಧ ಹೊರಿಸಿದ್ದರು. ಅದಕ್ಕೆ ತಕ್ಕಂತೆ ಉರ್ಫಿ ಜಾವೇದ್ ಸಹ ಬಿಜೆಪಿ ನಾಯಕಿ ವಿರುದ್ಧ ಪ್ರತಿದೂರು ನೀಡಿ, ಬೆದರಿಕೆ, ಮಾನಹಾನಿ ದೂರುಗಳನ್ನು ದಾಖಲಿಸಿದ್ದರು.

    ಇದೀಗ ಚೈತ್ರಾ ನೀಡಿದ್ದ ದೂರಿನ ಆಧಾರದ ಮೇಲೆ ಉರ್ಫಿಯನ್ನು ಮುಂಬೈ ಪೊಲೀಸರು ವಿಚಾರಣೆಗೆ ಕರೆಸಿದ್ದಾರೆ. ಸಾರ್ವಜನಿಕವಾಗಿ ಅಂಗಾಂಗ ಕಾಣುವಂಥಹಾ ಬಟ್ಟೆಗಳನ್ನು ಧರಿಸದಂತೆ ಉರ್ಫಿ ಜಾವೇದ್‌ಗೆ ಮುಂಬೈ ಪೊಲೀಸರು ಎಚ್ಚರಿಕೆ ನೀಡುವ ಸಾಧ್ಯತೆ ಇದೆ.

    ಚೈತ್ರಾ ತನ್ನ ವಿರುದ್ಧ ದೂರು ನೀಡಿದಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಉರ್ಫಿ, ''ರಾಜಕಾರಣಿಗಳ ಬಗ್ಗೆ ಸಾಮಾಜಿಕ ಜಾಳತಾಣದಲ್ಲಿ ಹಾಕುವುದು ಬಹಳ ಅಪಾಯಕಾರಿ ಎಂಬುದು ನನಗೆ ತಿಳಿದಿದೆ. ಆದರೆ ಈ ಜನ ನನ್ನನ್ನು ಬಿಡುತ್ತಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ನನ್ನನ್ನು ಪೀಡಿಸುತ್ತಿದ್ದಾರೆ. ಒಂದೋ ನಾನು ನನ್ನನ್ನೇ ಕೊಂದುಕೊಳ್ಳಬೇಕು ಅಥವಾ ಅವರೇ ನನ್ನನ್ನು ಕೊಲ್ಲುವವರೆಗೂ ಕಾಯಬೇಕು. ಮತ್ತೊಮ್ಮೆ ಹೇಳುತ್ತಿದ್ದೇನೆ, ಈ ವಿವಾದವನ್ನು ನಾನು ಪ್ರಾರಂಭಿಸಿದ್ದಲ್ಲ. ನಾನು ಎಂದಿಗೂ ಯಾರಿಗೂ ತೊಂದರೆ ಮಾಡಿದವಳಲ್ಲ. ಆದರೆ ಇವರು ನನ್ನ ಹಿಂದೆ ಬಿದ್ದಿದ್ದರೆ ಅದೂ ಯಾವುದೇ ಕಾರಣಗಳಿಲ್ಲದೆ'' ಎಂದಿದ್ದಾರೆ.

    English summary
    Social media sensation Urfi Javed summoned by Mumbai police after BJP leader Chaitra Wagh's complaint.
    Saturday, January 14, 2023, 13:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X