For Quick Alerts
  ALLOW NOTIFICATIONS  
  For Daily Alerts

  ದುಬಾರಿ ಬೆಲೆಗೆ ಮುಂಬೈನಲ್ಲಿ ಕಚೇರಿ ಖರೀದಿಸಿದ ನಟಿ-ರಾಜಕಾರಣಿ ಊರ್ಮಿಳಾ

  |

  ನಟಿ-ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಅವರು ಹೊಸ ಕಚೇರಿ ಖರೀದಿಸಿದ್ದಾರೆ. ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿರುವ ಊರ್ಮಿಳಾ ಮುಂಬೈನಲ್ಲಿ ದುಬಾರಿ ಬೆಲೆ ನೀಡಿದ ಹೊಸ ಆಫೀಸ್ ಸ್ಥಾಪಿಸಿದ್ದಾರೆ ಎಂದು 'ಇಂಡಿಯಾ.ಕಾಂ' ವೆಬ್‌ಸೈಟ್ ವರದಿ ಮಾಡಿದೆ.

  ವರದಿಯ ಪ್ರಕಾರ 3.75 ಕೋಟಿ ಹಣ ನೀಡಿ ಮುಂಬೈನ ದುರ್ಗ ಚೇಂಬರ್‌ನಲ್ಲಿ ಕಚೇರಿ ಖರೀದಿಸಿದ್ದಾರೆ. 'ಮಿಡ್‌ ಡೇ' ಮಾದ್ಯಮ ವರದಿ ಮಾಡಿರುವ ಪ್ರಕಾರ ನಗರದ ಪ್ರಮುಖ ಕಟ್ಟಡವಾಗಿದ್ದು, ಇದರಲ್ಲಿ ಆರನೇ ಮಹಡಿಯಲ್ಲಿ ಒಂದು ಫ್ಲ್ಯಾಟ್ ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

  'ಕೈ' ಬಿಟ್ಟು ಶಿವಸೇನಾ ಕೈ ಹಿಡಿದ ನಟಿ ಊರ್ಮಿಳಾ ಮತೋಡ್ಕರ್

  ಒಟ್ಟು ಏಳು ಮಹಡಿಗಳನ್ನು ಹೊಂದಿರುವ ಈ ಕಟ್ಟಡದ ಮುಂಭಾದಲ್ಲಿ ಸಂಪೂರ್ಣ ಗಾಜಿನಿಂದ ವಿನ್ಯಾಸ ಮಾಡಲಾಗಿದೆ. ಕಟ್ಟಡದಲ್ಲಿನ ಉಳಿದ ಸ್ಥಳಗಳು ಸಹ ಬಾಡಿಗೆಗೆ ಲಭ್ಯವಿದೆ. ಒಂದು ಕಚೇರಿ ಸ್ಥಳಕ್ಕೆ ಬಾಡಿಗೆ ತಿಂಗಳಿಗೆ 5-8 ಲಕ್ಷ ರೂ ಎಂದು ಹೇಳಲಾಗುತ್ತಿದೆ. ಇನ್ನು ಕಟ್ಟಡದ ನೆಲ ಮಹಡಿಯಲ್ಲಿ ಕಮರ್ಷಿಯಲ್ ಉದ್ದೇಶಕ್ಕಾಗಿ ಸ್ಥಳವಿದೆ.

  ಊರ್ಮಿಳಾ ಖರೀದಿ ಮಾಡಿರುವ ಪ್ರದೇಶವೂ ಸುಮಾರು 1,039.901 ಚದರ ಅಡಿ ಅಳತೆ ಹೊಂದಿದೆ. ಪ್ರತಿ ಚದರ ಅಡಿಗೆ 36,000 ರೂ ನೀಡಿ ಕಚೇರಿ ಖರೀದಿ ಮಾಡಿದ್ದಾರೆ ನಟಿ. ಅದಕ್ಕೂ ಮುಂಚೆ ರಾಜೇಶ್ ಕುಮಾರ್ ಶರ್ಮಾ ಎಂಬ ಉದ್ಯಮಿ ಆ ಕಟ್ಟಡದಲ್ಲಿ ವಾಸವಾಗಿದ್ದರು.

  ಇನ್ಸ್ಟಾಗ್ರಾಂ ಖಾತೆ ವಾಪಸ್ ಪಡೆದ ನಟಿ ಊರ್ಮಿಳಾ ಮಾತೋಂಡ್ಕರ್

  ಅಂದ್ಹಾಗೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿದ್ದ ನಟಿ ಊರ್ಮಿಳಾ ಮಾತೋಂಡ್ಕರ್, ಇತ್ತೀಚಿಗೆ ಶಿವಸೇನಾ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಶಿವ ಸೇನೆ ಪಕ್ಷ ಸೇರ್ಪಡೆಯಾದ ಬಳಿಕ ಮುಂಬೈನಲ್ಲಿ ಕಚೇರಿ ಸಹ ಖರೀದಿಸಿದ್ದಾರೆ.

  English summary
  Actress-politician Urmila Matondkar buys new office for rs 3.75 crore in mumbai's khar area.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X