For Quick Alerts
  ALLOW NOTIFICATIONS  
  For Daily Alerts

  ಭಾಷಣ ಮಾಡುವ ಭರದಲ್ಲಿ ತಪ್ಪು ಉಲ್ಲೇಖ: ಟ್ರೋಲಿಗರಿಗೆ ಊರ್ಮಿಳಾ ಆಹಾರ.!

  |
  ಮಾಡಿದ ಎಡವಟ್ಟಿಗೆ ಟ್ರೋಲಿಗರಿಗೆ ಆಹಾರವಾದ ಊರ್ಮಿಳಾ | Urmila | Trolled | FIlmibeat kannada

  'ರಂಗೀಲಾ', 'ಸತ್ಯ', 'ಮಸ್ತ್', 'ಪ್ಯಾರ್ ತುನೇ ಕ್ಯಾ ಕಿಯಾ', 'ಏಕ್ ಹಸೀನಾ ಥಿ' ಮುಂತಾದ ಚಿತ್ರಗಳಿಂದ ಬಾಲಿವುಡ್ ನಲ್ಲಿ ಖ್ಯಾತಿ ಪಡೆದಿರುವ ನಟಿ ಊರ್ಮಿಳಾ ಮತೋಂಡ್ಕರ್.

  2016 ರಲ್ಲಿ ಮದುವೆ ಆದ ಮೇಲೆ ಚಿತ್ರರಂಗದಿಂದ ಕೊಂಚ ದೂರ ಸರಿದಿರುವ ಊರ್ಮಿಳಾ, ರಾಜಕೀಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ಚುನಾವಣಾ ರಾಜಕೀಯಕ್ಕೆ ಧುಮುಕಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸೋತ ಮೇಲೆ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದ ಊರ್ಮಿಳಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

  ಮಹಾತ್ಮ ಗಾಂಧಿ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಊರ್ಮಿಳಾ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾತಿಗಿಳಿದರು. ಈ ವೇಳೆ ವಿಶ್ವ ಯುದ್ಧದ ಕುರಿತು ತಪ್ಪು ಉಲ್ಲೇಖ ಮಾಡಿದ ಊರ್ಮಿಳಾ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಮುಂದೆ ಓದಿರಿ...

  ಊರ್ಮಿಳಾ ಹೇಳಿದ್ದೇನು.?

  ಊರ್ಮಿಳಾ ಹೇಳಿದ್ದೇನು.?

  ಪೌರತ್ವ ತಿದ್ದುಪಡಿ ಕಾಯ್ದೆ (CAA) ಬಗ್ಗೆ ಮಾತನಾಡುವಾಗ, ''1919 ರಲ್ಲಿ ಎರಡನೇ ವಿಶ್ವಯುದ್ಧ ಮುಕ್ತಾಯಗೊಂಡ ಬಳಿಕ, ಭಾರತದಲ್ಲಿ ಅಶಾಂತಿ ಮೂಡುವುದು ಬ್ರಿಟೀಷರಿಗೆ ಗೊತ್ತಿತ್ತು. ಹೀಗಾಗಿ ಅವರು ರೌಲತ್ ಕಾಯ್ದೆ ಜಾರಿಗೆ ತಂದರು. ಆ 1919 ರ ರೌಲತ್ ಕಾಯ್ದೆ ಮತ್ತು 2019 ರ CAA ಇತಿಹಾಸದಲ್ಲಿ ಕಪ್ಪು ಚುಕ್ಕೆ'' ಎಂದು ಊರ್ಮಿಳಾ ಮತೋಂಡ್ಕರ್ ಹೇಳಿದರು.

  JNU ಎಂಟ್ರಿ ಎಫೆಕ್ಟ್: ದೀಪಿಕಾ ನಟಿಸಿದ ಜಾಹೀರಾತುಗಳ ಮೇಲೆ ಹೊಡೆತJNU ಎಂಟ್ರಿ ಎಫೆಕ್ಟ್: ದೀಪಿಕಾ ನಟಿಸಿದ ಜಾಹೀರಾತುಗಳ ಮೇಲೆ ಹೊಡೆತ

  ತಪ್ಪು ಉಲ್ಲೇಖ

  ತಪ್ಪು ಉಲ್ಲೇಖ

  1919 ರ ಹೊತ್ತಿಗೆ ಮೊದಲನೇ ವಿಶ್ವಯುದ್ಧ ಮಾತ್ರ ಪೂರ್ಣಗೊಂಡಿತ್ತು. ಎರಡನೇ ವಿಶ್ವಯುದ್ಧ ಇನ್ನೂ ಶುರು ಆಗಿರಲಿಲ್ಲ. ಬಾಯ್ತಪ್ಪಿನಿಂದ ''1919 ರಲ್ಲಿ ಎರಡನೇ ವಿಶ್ವಯುದ್ಧ ಮುಕ್ತಾಯಗೊಂಡ ಬಳಿಕ..'' ಅಂತ ಊರ್ಮಿಳಾ ಉಲ್ಲೇಖಿಸಿದ್ದು ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

  ವಿರೋಧಿಗಳಿಗೆ ಮಾತಲ್ಲೇ ಪೆಟ್ಟು ಕೊಟ್ಟ ನಟಿ ದೀಪಿಕಾ ಪಡುಕೋಣೆವಿರೋಧಿಗಳಿಗೆ ಮಾತಲ್ಲೇ ಪೆಟ್ಟು ಕೊಟ್ಟ ನಟಿ ದೀಪಿಕಾ ಪಡುಕೋಣೆ

  ಟ್ರೋಲ್ ಆದ ಊರ್ಮಿಳಾ

  ಟ್ರೋಲ್ ಆದ ಊರ್ಮಿಳಾ

  ''ಎರಡನೇ ವಿಶ್ವಯುದ್ಧ ಶುರುವಾಗುವ ಮುನ್ನವೇ ಹೇಗೆ ಮುಕ್ತಾಯ ಆಯ್ತು.? ರೌಲತ್ ಆಕ್ಟ್ ಗೂ ಸಿ.ಎ.ಎ ಗೂ ಇರುವ ಸಂಬಂಧ ಏನು.? ಊರ್ಮಿಳಾ ಆಡಿರುವ ಮಾತುಗಳಲ್ಲಿ ಯಾವುದೇ ಅರ್ಥವಿಲ್ಲ. ನೀವು ಓದಿದ್ದು ಯಾವ ವಿಶ್ವವಿದ್ಯಾನಿಲಯದಲ್ಲಿ'' ಅಂತೆಲ್ಲಾ ಟ್ವೀಟಿಗರು ಕಾಲೆಳೆಯುತ್ತಿದ್ದಾರೆ.

  ಐತಿಹಾಸಿಕ ದಿನಾಂಕಗಳು

  ಐತಿಹಾಸಿಕ ದಿನಾಂಕಗಳು

  ಅಂದ್ಹಾಗೆ, 1914 ರಿಂದ 1918 ರವರೆಗೆ ಮೊದಲ ವರ್ಲ್ಡ್ ವಾರ್ ಮತ್ತು 1939 ರಿಂದ 1945 ರವರೆಗೆ ಸೆಕೆಂಡ್ ವರ್ಲ್ಡ್ ವಾರ್ ನಡೆದಿತ್ತು. 1919 ರಲ್ಲಿ ಭಾರತದಲ್ಲಿ ಬ್ರಿಟೀಷರು ರೌಲತ್ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಐತಿಹಾಸಿಕ ದಿನಾಂಕಗಳನ್ನು ತಪ್ಪಾಗಿ ನುಡಿದ ಕಾರಣ ಊರ್ಮಿಳಾ ಟ್ರೋಲ್ ಆಗುತ್ತಿದ್ದಾರೆ.

  English summary
  Bollywood Actress Urmila Matondkar gets trolled for saying World War Year wrong.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X