For Quick Alerts
  ALLOW NOTIFICATIONS  
  For Daily Alerts

  ದರ್ಶನ್ ನಾಯಕಿ ಊರ್ವಶಿ ಮದುವೆ ಫೋಟೋ ವೈರಲ್: ಹುಡುಗ ಯಾರು?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಐರಾವತ ಸಿನಿಮಾದಲ್ಲಿ ನಟಿಸಿದ್ದ ಊರ್ವಶಿ ರೌಟೇಲಾ ಮದುವೆ ಫೋಟೋ ವೈರಲ್ ಆಗಿದೆ. ಬೋಲ್ಡ್ ಅಭಿನಯದ ಮೂಲಕ ಅಭಿಮಾನಿಗಳ ನಿದ್ದೆ ಗೆದ್ದೆಗೆಡಿಸಿದ್ದ ಊರ್ವಶಿ ಸಾಮಾಜಿಕ ಜಾಲತಾಣದಲ್ಲಿಯೂ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿದ್ದರು.

  Recommended Video

  Dhruva Sarja admitted to Hospital?ಧ್ರುವ ಸರ್ಜಾ ಆಸ್ಪತ್ರೆಗೆ ದಾಖಲು? ಸುದ್ದಿ ನಿಜವೇ? | Filmibeat Kannada

  ಲಾಕ್ ಡೌನ್ ನಲ್ಲಿಯೂ ಆಗಾಗ ಸುದ್ದಿಯಲ್ಲಿರುತ್ತಿದ್ದ ಊರ್ವಶಿ ಈಗ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಕಿರುತೆರೆ ನಟ ಗೌತಮ್ ಅವರೊಂದಿಗೆ ಸಪ್ತಪದಿ ತುಳಿಯುತ್ತಿರುವ ಫೋಟೋ ಎಲ್ಲಾ ಕಡೆ ಹರಿದಾಡುತ್ತಿದೆ. ಈಗಾಗಲೆ ಸಾಕಷ್ಟು ಜನ ಸೆಲೆಬ್ರಿಟಿಗಳು ಲಾಕ್ ಡೌನ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಊರ್ವಶಿ ಹೇಳದೆ ಕೇಳದೆ ಮದುವೆ ಆಗ್ಬಿಟ್ರಾ ಅಂತ ಅಚ್ಚರಿಯಾಗುತ್ತಿದೆಯಾ. ಅಚ್ಚರಿ ಎನಿಸಿದರು ಇದು ನಿಜ. ಆದರೆ ರಿಯಲ್ ಆಗಿ ಅಲ್ಲ ಸಿನಿಮಾದಲ್ಲಿ. ಮುಂದೆ ಓದಿ..

  ನೃತ್ಯ ಹೇಳಿಕೊಟ್ಟು ಬಂದ ಐದು ಕೋಟಿ ಹಣ ಕೊರೊನಾ ಸಂಕಷ್ಟಕ್ಕೆ ನೀಡಿದ ನಟಿನೃತ್ಯ ಹೇಳಿಕೊಟ್ಟು ಬಂದ ಐದು ಕೋಟಿ ಹಣ ಕೊರೊನಾ ಸಂಕಷ್ಟಕ್ಕೆ ನೀಡಿದ ನಟಿ

  ವರ್ಜಿನ್ ಭಾನುಪ್ರಿಯಾ ಸಿನಿಮಾದ ಫೋಟೋಗಳು

  ವರ್ಜಿನ್ ಭಾನುಪ್ರಿಯಾ ಸಿನಿಮಾದ ಫೋಟೋಗಳು

  ನಟಿ ಊರ್ವಶಿ ವರ್ಜಿನ್ ಭಾನುಪ್ರಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಕಿರುತೆರೆ ನಟ ಗೌತಮ್ ಗುಲಾಟಿ ಜೊತೆ ನಟಿಸುತ್ತಿದ್ದಾರೆ. ಸಿನಿಮಾದ ಮದುವೆ ಫೋಟೋಗಳನ್ನು ನಟ ಗೌತಮ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗಳು ಒಮ್ಮೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

  ಅಚ್ಚರಿ ಪಟ್ಟ ಅಭಿಮಾನಿಗಳು

  ಅಚ್ಚರಿ ಪಟ್ಟ ಅಭಿಮಾನಿಗಳು

  ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ಊರ್ವಶಿ ಮತ್ತು ಗೌತಮ್ ಇಬ್ಬರಿಗೆ ಕಾಮೆಂಟ್ ಗಳ ಸುರಿಮಳೆಯೆ ಬರುತ್ತಿದೆ. ಶೀರ್ಷಿಕೆ ಓದದೆ ತಕ್ಷಣ ನೋಡಿ ಅಚ್ಚರಿ ಪಡುತ್ತಿದ್ದಾರೆ. ನಂತರ ಇದು ಸಿನಿಮಾದ ಫೋಟೋಗಳು ಅಂತ ಗೊತ್ತಾಗುತ್ತಿದ್ದಂತೆ ನಿಟ್ಟುಸಿಗುಬಿಡುತ್ತಿದ್ದಾರೆ. ಸಾಕಷ್ಟು ಕಾಮೆಂಟ್ ಬಾಕ್ಸ್ ನಲ್ಲಿ ಫೋಟೋ ನೋಡಿ ಶಾಕ್ ಆಯಿತು, ನಂತರ ಕ್ಯಾಪ್ಷನ್ ಓದಿದ ಮೇಲೆ ಸಮಾಧಾನವಾಯಿತು ಎಂದು ಹೇಳುತ್ತಿದ್ದಾರೆ.

  ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ

  ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ

  ವರ್ಜಿನ್ ಭಾನುಪ್ರಿಯಾ ಕಾಮಿಡಿ ಎಂಟರ್ಟೈನಿಂಗ್ ಸಿನಿಮಾ. ಅಜಯ್ ಲೋಹನ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಯುವಕರು ಮತ್ತು ಅವರ ಕುಟುಂಬದ ನಡುವಿನ ಸಂಬಂಧದ ಬಗ್ಗೆ ಇರುವ ಸಿನಿಮಾವಾಗಿದೆ. ವಿಶೇಷ ಅಂದರೆ ಸಿನಿಮಾ ಇದೆ ತಿಂಗಳು ಅಂದರೆ ಜುಲೈ 16ಕ್ಕೆ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

  ತನ್ನ ಕ್ರಶ್ ಹೆಸರು ಹೇಳಿದ ದರ್ಶನ್ ನಾಯಕಿ ಊರ್ವಶಿ ರೌಟೇಲಾ

  ಊರ್ವಶಿ ರೌಟೇಲಾ ಸಿನಿಮಾಗಳು

  ಊರ್ವಶಿ ರೌಟೇಲಾ ಸಿನಿಮಾಗಳು

  ನಟಿ ಊರ್ವಶಿ ರೌಟೇಲಾ 2013ರಲ್ಲಿ ಸಿಂಗ್ ಸಾಬ್ ದಿ ಗ್ರೀಟ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ರೂಪದರ್ಶಿಯಾಗಿ ಖ್ಯಾತಿಗಳಿಸಿದ್ದ ಊರ್ವಶಿ ರೌಟೇಲಾ ಐರಾವತ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮುಂದೆಯು ಬಂದಿದ್ದಾರೆ. 10ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಊರ್ವಶಿ ಕೊನೆಯದಾಗಿ ಪಾಗಲ್ ಪಂತಿ ಮೂಲಕ ಸಿನಿಪ್ರೇಕರ ಮುಂದೆ ಬಂದಿದ್ದರು. ಸದ್ಯ ವರ್ಜಿನ್ ಭಾನುಪ್ರಿಯಾ ಮೂಲಕ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ.

  English summary
  Airavata fame Actress Urvashi Rautela and Actor Gautam Gulati marriage photo viral.
  Saturday, July 4, 2020, 12:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X