ಪ್ರೇಮಿಗಳ ದಿನದ ವಿಶೇಷ: ಲವ್ ಲೆಟರ್ ಕೊಟ್ಟ ಪತಿಗೆ ಮುತ್ತು ಕೊಟ್ಟ ಬಿಪಾಶಾ ಬಸು

ಇಂದು ಪ್ರೇಮಿಗಳ ದಿನ. ವಿಶ್ವದಾದ್ಯಂತ ಪ್ರೇಮಿಗಳು 'ವ್ಯಾಲೆಂಟೈನ್ಸ್ ಡೇ'ನ ಸ್ಪೆಷಲ್ ಆಗಿ ಆಚರಿಸುತ್ತಿದ್ದಾರೆ. ಹಾಗೇ, ಮೂರು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಬಿಪಾಶಾ ಬಸು ಕೂಡ ಇವತ್ತು ಸಡಗರ-ಸಂಭ್ರಮದಲ್ಲಿದ್ದಾರೆ.

ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ತಮ್ಮ ಪತ್ನಿ ಬಿಪಾಶಾಗೆ ಕರಣ್ ಸಿಂಗ್ ಗ್ರೋವರ್ ಲವ್ ಲೆಟರ್ ಬರೆದಿದ್ದರು. ಅದನ್ನ ಓದಿದ ಮೇಲೆ ಸಂತಸಗೊಂಡ ಬಿಪಾಶಾ ಬಸು, ಪತಿ ಕರಣ್ ರನ್ನ ತಬ್ಬಿಕೊಂಡು ಮುತ್ತಿನ ಸುರಿಮಳೆ ಸುರಿಸಿದ್ದಾರೆ.

ಅದೇ ವಿಡಿಯೋನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಬಿಪಾಶಾ ಬಸು, ''ಪ್ರತಿ ವರ್ಷ ಪ್ರೇಮಿಗಳ ದಿನದಂದು ಲವ್ ಲೆಟರ್ ಗಾಗಿ ನಾನು ಕಾಯುತ್ತೇನೆ. ನನ್ನ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿ, ನನ್ನ ಪತಿ ಸುಂದರವಾದ ಪತ್ರ ಬರೆದಿದ್ದಾರೆ. ನಾನು ನಿಜಕ್ಕೂ ಅದೃಷ್ಟವಂತೆ'' ಎಂದು ಬರೆದುಕೊಂಡಿದ್ದಾರೆ ನಟಿ ಬಿಪಾಶಾ ಬಸು.

ಬೆಂಗಾಲಿ ಕುಟುಂಬದಲ್ಲಿ ಹುಟ್ಟಿದ ಬಿಪಾಶಾ ಬಸು 2016 ರಲ್ಲಿ ನಟ ಕರಣ್ ಸಿಂಗ್ ಗ್ರೋವರ್ ರನ್ನು ವಿವಾಹವಾದರು. 'ಅಲೋನ್' ಚಿತ್ರದ ಚಿತ್ರೀಕರಣದ ವೇಳೆ ಇಬ್ಬರ ನಡುವೆ ಪ್ರೀತಿ ಮೊಳಕೆಯೊಳೆದಿತ್ತು. ಬಳಿಕ ಕುಟುಂಬದವರನ್ನು ಒಪ್ಪಿಸಿ ಬಿಪಾಶಾ-ಕರಣ್ ಮದುವೆ ಮಾಡಿಕೊಂಡರು.

Valentines Day special: Bipasha Basu kisses her husband

ಅದಾಗಲೇ ಎರಡು ಬಾರಿ ಮದುವೆ ಆಗಿ ವಿಚ್ಛೇದನ ಪಡೆದಿರುವ ಕರಣ್ ಸಿಂಗ್ ಗ್ರೋವರ್ ಇದೀಗ ಬಿಪಾಶಾ ಬಸು ಜೊತೆ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಮದುವೆ ಆದ್ಮೇಲೆ ಚಿತ್ರರಂಗದಿಂದ ಕೊಂಚ ದೂರ ಉಳಿದಿರುವ ಬಿಪಾಶಾ ಬಸು ಗಂಡ-ಮನೆ ಅಂತಲೇ ಬಿಜಿಯಾಗಿದ್ದಾರೆ.

More from Filmibeat

English summary
Valentines Day special: Bipasha Basu kisses her husband Karan Singh Grover. Watch video here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X