»   » ಬಾಲಿವುಡ್‌ನ ಹಿರಿಯ ನಟ ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲು

ಬಾಲಿವುಡ್‌ನ ಹಿರಿಯ ನಟ ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲು

Posted By:
Subscribe to Filmibeat Kannada

ಬಾಲಿವುಡ್ ನ ಹಿರಿಯ ನಟ ದಿಲೀಪ್ ಕುಮಾರ್ ರವರು ನಿರ್ಜಲೀಕರಣದಿಂದ ಅಶ್ವಸ್ಥಗೊಂಡು ಬುಧವಾರ ಸಂಜೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಿರ್ಜಲೀಕರಣದ ಸಮಸ್ಯೆಯಿಂದಾಗಿ ತೀರ ಬಳಲಿದ್ದರು. ಆಸ್ಪತ್ರೆಗೆ ದಾಖಲಿಸಿದ ನಂತರ, ಈಗವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಲೀಲಾವತಿ ಹಾಸ್ಪಿಟಲ್ ನ ಸಿಇಒ ರವಿಶಂಕರ್ ತಿಳಿಸಿದ್ದಾರೆ.

Veteran actor Dilip Kumar admitted in hospital

ಹಿಂದಿ ಚಿತ್ರರಂಗದ ಲೆಜೆಂಡ್ ಆಕ್ಟರ್ ದಿಲೀಪ್ ಕುಮಾರ್ ರವರಿಗೆ 94 ವರ್ಷ ವಯಸ್ಸಾಗಿದ್ದು, ಇತ್ತೀಚೆಗೆ ಅವರು ವಯೋಸಹಜ ಆರೋಗ್ಯ ತೊಂದರೆಗಳಿಂದ ಬಳಲುತ್ತಿದ್ದರು. ಕಳೆದ ಎರಡು ದಿನಗಳಿಂದ ಆರೋಗ್ಯದಲ್ಲೂ ಏರುಪೇರಾಗಿ ಹುಷಾರಿರಲಿಲ್ಲ ಎಂದು ಅವರ ಕುಟುಂಬದ ಆತ್ಮೀಯರಾದ ಉದಯ್ ತಾರಾ ನಾಯರ್ ಹೇಳಿದ್ದಾರೆ. ದಿಲೀಪ್ ಕುಮಾರ್ ರವರು ಪತ್ನಿ ಸೈರಾ ಬಾನು ಜತೆಗಿದ್ದಾರೆ.

ದಿಲೀಪ್ ಕುಮಾರ್ ರವರ 'ದೇವದಾಸ್', 'ಮುಘಲ್ ಈ ಅಝಾಮ್', 'ಕರ್ಮ' ಮತ್ತು ಮುಂತಾದ ಹಲವು ಚಿತ್ರಗಳು ಅತೀ ಜನಪ್ರಿಯವಾದವು. ಅವರು ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು 1998 ರ 'ಕ್ವಿಲಾ' ಚಿತ್ರದಲ್ಲಿ. ಅತಿಹೆಚ್ಚು ಪ್ರಶಸ್ತಿಗಳನ್ನು ಪಡೆದ ಭಾರತೀಯ ನಟ ಎಂಬ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಇವರ ಹೆಸರಿನಲ್ಲಿದೆ. 2015 ರಲ್ಲಿ ಇವರಿಗೆ 'ಪದ್ಮ ವಿಭೂಷಣ ಪ್ರಶಸ್ತಿ' ಲಭಿಸಿತು.

English summary
Bollywood Legendary actor Dilip Kumar was admitted to the Mumbai Lilavati Hospital on Wednesday evening after he suffered dehydration.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada