»   » ಬಾರದ ಲೋಕಕ್ಕೆ ತೆರಳಿದ ಬಾಲಿವುಡ್ ನಟ ಶಶಿ ಕಪೂರ್ ಸಿನಿ ಪಯಣ

ಬಾರದ ಲೋಕಕ್ಕೆ ತೆರಳಿದ ಬಾಲಿವುಡ್ ನಟ ಶಶಿ ಕಪೂರ್ ಸಿನಿ ಪಯಣ

Posted By:
Subscribe to Filmibeat Kannada
Shashi Kapoor passes away at 79 | FilmiBeat

ಬಾಲಿವುಡ್ ಹಿರಿಯ ನಟ ಶಶಿ ಕಪೂರ್ ಇಂದು ವಿಧಿವಶರಾಗಿದ್ದಾರೆ. 79 ವರ್ಷದ ಶಶಿ ಕಪೂರ್ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಸಂಜೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅಂದಹಾಗೆ, ಬಾಲಿವುಡ್ ಚಿತ್ರ ಜಗತ್ತಿನ ದಿಗ್ಗಜ ನಟರಲ್ಲಿ ಶಶಿ ಕಪೂರ್ ಕೂಡ ಒಬ್ಬರು. ಬಾಲಿವುಡ್ ಇತಿಹಾಸವನ್ನು ನೋಡಿದರೆ ಅಲ್ಲಿ ಶಶಿ ಕಪೂರ್ ಸಾಧನೆ ಅಪಾರ... ಅನನ್ಯ.. ಭಾರತೀಯ ಚಿತ್ರರಂಗದ ಬಹುಮುಖ ಪ್ರತಿಭೆ ಆದ ಶಶಿ ಕಪೂರ್ ಅಭಿನಯ, ನಿರ್ದೇಶನ, ಚಿತ್ರ ನಿರ್ಮಾಣ ಹೀಗೆ ಚಿತ್ರರಂಗದ ಎಲ್ಲ ವಿಭಾಗಗಳಲ್ಲೂ ಕೆಲಸ ಮಾಡಿ ಗೆದ್ದವರು. ಅದರಲ್ಲಿಯೂ 'ಸತ್ಯಂ ಶಿವಂ ಸುಂದರಂ', 'ತ್ರಿಶೂಲ್', 'ಕಭೀ ಕಭೀ', 'ವಿಜೇತಾ' ಮತ್ತು 'ಕಲಿಯುಗ್' ನಂಥ ಚಿತ್ರಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.

ಇಂದು ಬಾರದ ಲೋಕಕ್ಕೆ ತೆರಳಿದ ನಟ ಶಶಿಕಪೂರ್ ಅವರ ಸಿನಿಮಾ ಪಯಣದ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ ಓದಿ....

ಮೊದಲ ಸಿನಿಮಾ

ಶಶಿ ಕಪೂರ್ ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ನಾಟಕಗಳಲ್ಲಿ ಅಭಿನಯಿಸುವುದಕ್ಕೆ ಶುರು ಮಾಡಿದರು. ನಾಟಕಗಳಿಂದ ಆರಂಭವಾಗಿ 1948 ರಿಂದ 1954ರ ವರೆಗೆ ಬಾಲ ನಟನಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಬಳಿಕ 1961ರಲ್ಲಿ ಮೊದಲ ಬಾರಿಗೆ 'ಧರ್ಮಪುತ್ರ' ಚಿತ್ರದ ಮೂಲಕ ನಾಯಕನಾಗಿ ತೆರೆ ಮೇಲೆ ತಮ್ಮ ವಿಜಯ ಯಾತ್ರೆ ಶುರು ಮಾಡಿದರು. ವಿಶೇಷ ಅಂದರೆ ಈ ಚಿತ್ರ ಯಶ್ ಚೋಪ್ರಾ ಬ್ಯಾನರ್ ನಲ್ಲಿ ನಿರ್ಮಾಣವಾಗಿತ್ತು.

ಅತಿ ಜನಪ್ರಿಯ ಚಿತ್ರಗಳು

ಶಶಿ ಕಪೂರ್ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲಿ ವಕ್ತ್, ಜಬ್ ಜಬ್ ಫೂಲ್ ಕಿಲೆ, ಕನ್ಯಾದಾನ್, ರೋಟಿ ಕಪಡಾ ಔರ್ ಮಕಾನ್, ದೀವಾರ್, ಕಭಿ ಕಭೀ, ತ್ರಿಶೂಲ್, ಸತ್ಯಮ್ ಶಿವಂ ಸುಂದರಂ, ಕಾಲಾ ಪತ್ತಾರ್, ನಮಕ್ ಹಲಾಲ್, ಸತ್ಯಂ ಶಿವಂ ಸುಂದರಂ, ತ್ರಿಶೂಲ್, ಕಭೀ ಕಭೀ, ವಿಜೇತಾ ಮತ್ತು ಕಲಿಯುಗ್ ಸಿನಿಮಾಗಳು ಶಶಿ ಕಪೂರ್ ಅವರ ಅತೀ ಹೆಚ್ಚು ಜನಪ್ರಿಯತೆ ಗಳಿಸಿದ ಸಿನಿಮಾಗಳಾಗಿವೆ.

'ದಾದಾ ಸಾಹೇಬ್ ಫಾಲ್ಕೆ' ಪುರಸ್ಕೃತ ನಟ ಶಶಿ ಕಪೂರ್ ನಿಧನ

ಪತ್ನಿ ಜೊತೆ ನಟನೆ

ಶಶಿ ಕಪೂರ್ ತಮ್ಮ ಪತ್ನಿ ಜೆನ್ನಿಫರ್ ಕೆಂಡಾಲ್ ರೊಂದಿಗೆ 'ಬಾಂಬೆ ಟಾಕಿ' ಮತ್ತು 'ಹೀಟ್ ಆಂಡ್ ಡಸ್ಟ್' ಎಂಬ ಸಿನಿಮಾಗಳನ್ನು ಮಾಡಿದ್ದರು.

ಶಶಿ ಕಪೂರ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದು ಕೊಟ್ಟ ಚಿತ್ರಗಳು

ಬಾಲಿವುಡ್ ಮಾತ್ರವಲ್ಲದೆ ಬ್ರಿಟಿಷ್ ಹಾಗೂ ಅಮೆರಿಕನ್ ಚಿತ್ರಗಳಲ್ಲಿಯೂ ಶಶಿಕಪೂರ್ ನಟಿಸಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದಾರೆ. 1965ರಲ್ಲಿ ಮರ್ಚೆಂಟ್ ಐವರಿ ಪ್ರೊಡಕ್ಷನ್ಸ್ ನಿರ್ಮಾಣದ 'ಶೇಕ್ಸ್ ಪಿಯರ್ ವಲ್ಲಾಹ್' ಚಿತ್ರದಲ್ಲಿ ತಮ್ಮ ಅತ್ತಿಗೆ ಫೆಲ್ಸಿಟಿ ಕೆಂಡಾಲ್ ಎದುರಿಗೆ ಶಶಿ ಕಪೂರ್ ನಟಿಸಿದ್ದರು.

ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪನೆ

ಒಳ್ಳೆಯ ನಟರಾಗಿದ್ದ ಶಶಿ ಕಪೂರ್ 1978ರಲ್ಲಿ ತಮ್ಮದೇ ಆದ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆ ಶುರು ಮಾಡಿದರು. ತಮ್ಮ ಬ್ಯಾನರ್ ನಲ್ಲಿ 'ವಾಲಾಸ್', 'ಜುನೂನ್', 'ವಿಜೇತಾ', 'ಕಲಿಯುಗ್', 'ಉತ್ಸವ್' ರೀತಿಯ ಸಿನಿಮಾಗಳನ್ನು ಮಾಡಿ ದೊಡ್ಡ ಹೆಸರು ಮಾಡಿದರು.

ಬಚ್ಚನ್ ಗೆ ನಿರ್ದೇಶಕ

ಅಮಿತಾಭ್ ಬಚ್ಚನ್ ಅವರಿಗೆ ಶಶಿ ಕಪೂರ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಶಶಿ ಕಪೂರ್ ಅವರ 'ಅಜೂಬಾ' ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಹಾಗೂ ರಿಷಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

ಕೊನೆಯ ಸಿನಿಮಾ

1998ರಲ್ಲಿ ಮಾಡಿದ್ದ 'ಜಿನ್ಹಾ' ಮತ್ತು 'ಸೈಡ್ ಸ್ಟ್ರೀಟ್ಸ್' ಶಶಿ ಕಪೂರ್ ಅವರ ಕೊನೆಯ ಸಿನಿಮಾಗಳಾಗಿವೆ. ಈ ಚಿತ್ರಗಳ ನಂತರ ಅವರು ಸಿನಿಮಾ ರಂಗದಿಂದ ನಿವೃತ್ತರಾದರು.

ಕನ್ನಡದ ನಂಟು

ಬಾಲಿವುಡ್ ನಟರಾದರೂ ಶಶಿ ಕಪೂರ್ ಅವರಿಗೆ ಕನ್ನಡದ ನಂಟು ಕೂಡ ಇತ್ತು. ಕನ್ನಡದವರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ಹಿಂದಿಯ 'ಉತ್ಸವ್' ಚಿತ್ರದಲ್ಲಿ ಶಶಿ ಕಪೂರ್ ನಟನೆ ಮತ್ತು ನಿರ್ಮಾಣ ಮಾಡಿದ್ದರು. ವಿಶೇಷ ಅಂದರೆ ಈ ಚಿತ್ರದಲ್ಲಿ ನಟ ಶಂಕರ್ ನಾಗ್ ಕೂಡ ಅಭಿನಯಿಸಿದ್ದರು.

ಪ್ರಶಸ್ತಿಗಳು

2011ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದ ಶಶಿ ಕಪೂರ್ ಅವರು ಮೂರು ಬಾರಿ ರಾಷ್ಟ್ರಪ್ರಶಸ್ತಿ ಗೆದ್ದಿದ್ದಾರೆ. 62ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಶಶಿ ಕಪೂರ್ ಅವರಿಗೆ ಒಲಿದಿದೆ.

English summary
Veteran Actor Shashi Kapoor passes away in Mumbai. Here is the list of Shashi Kapoor's best movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada