ಓಲಿವುಡ್‌ನ ಖ್ಯಾತ ಹಿರಿಯ ನಟ ಬಿಜಯ್ ಮೊಹಾಂತಿ ನಿಧನ

ಓಲಿವುಡ್‌ನ (ಒಡಿಶಾ ಚಿತ್ರರಂಗ) ಖ್ಯಾತ ಹಿರಿಯ ನಟ ಬಿಜಯ್ ಮೊಹಾಂತಿ ಅವರು ಸೋಮವಾರ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

Recommended Video

Jogi Prem : ಅಮ್ಮನನ್ನು ನೆನೆದು ಭಾವುಕರಾದ ಪ್ರೇಮ್ | Filmibeat Kannada

ಹೈದರಾಬಾದ್‌ನಲ್ಲಿದ್ದ ಅವರು ಮೇ ತಿಂಗಳಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಆಗ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಜೂನ್‌ 14ರಂದು ಭುವನೇಶ್ವರಕ್ಕೆ ಅವರನ್ನು ವಿಶೇಷ ಆಂಬುಲೆನ್ಸ್‌ನಲ್ಲಿ ವಾಪಸ್ ಕರೆತರಲಾಗಿತ್ತು. ಭುವನೇಶ್ವರದಲ್ಲಿಯೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜುಲೈ 1ರಂದು ಅವರನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಆರೋಗ್ಯ ಮತ್ತೆ ಹದಗೆಟ್ಟಿದ್ದರಿಂದ ಪುನಃ ದಾಖಲಿಸಲಾಗಿತ್ತು.

ಹೈದರಾಬಾದ್‌ನಲ್ಲಿರುವ ಮಗಳ ಮನೆಗೆ ತೆರಳಿದ್ದ ಅವರು, ಲಾಕ್ ಡೌನ್ ಕಾರಣದಿಂದ ಅಲ್ಲಿಯೇ ಉಳಿದುಕೊಂಡಿದ್ದರು. ಮಧುಮೇಹದಿಂದ ಬಳಲುತ್ತಿದ್ದ ಅವರು, ಕೆಲವು ತಿಂಗಳ ಹಿಂದೆ ಸಣ್ಣ ಶಸ್ತ್ರಚಿಕಿತ್ಸೆಯೊಂದಕ್ಕೆ ಒಳಗಾಗಿದ್ದರು.

 Veteran Odia Actor Bijay Mohanty Passes Away

ರಂಗಭೂಮಿ ಮೂಲಕ ನಟನೆಯ ವೃತ್ತಿ ಆರಂಭಿಸಿದ್ದ ಅವರು, ಒಡಿಯಾ ಚಿತ್ರರಂಗಕ್ಕೆ ಕಾಲಿಡುವ ಮುನ್ನ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದರು. ಅವರ ಮೊದಲ ಚಿತ್ರ 'ಚಿಲಿಕಾ ತಿರೆ' ಅತ್ಯುತ್ತಮ ಒಡಿಯಾ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿತ್ತು. ನೆಗೆಟಿವ್ ಪಾತ್ರಗಳ ಮೂಲಕವೇ ಅವರು ಹೆಚ್ಚು ಗುರುತಿಸಿಕೊಂಡಿದ್ದರು. ಸಮೇ ಬಡಾ ಬಾಲಬಾನ್, ನಾಗಾ ಫಾಸಾ, ಸಹಾರಿ ಬಾಘಾ, ದಂಡ ಬಳುಂಗ, ಆರತಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಯಾಗಿದ್ದ ಅವರು 2014ರಲ್ಲಿ ಭುವನೇಶ್ವರ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಸೋಲು ಕಂಡಿದ್ದರು.

More from Filmibeat

English summary
Veteran Odia actor Bijay Mohanty, most famous for negative roles has been passed away at 70, in Bhuvaneswar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X